🛑⚡SHOCKING NEWS:”ಕಲಬುರ್ಗಿ| ಮನೆಗೆ ವಿದ್ಯುತ್ ಕನೆಕ್ಷನ್ ಕೊಡಲು ಕಂಬ ಏರಿದ ಯುವಕ : ವಿದ್ಯುತ್ ತಗುಲಿ ಕಂಬದ ಮೇಲೆಯೇ ಸಾವು.! ಗ್ರಾಮದಲ್ಲಿ ಶೋಕ, ಅಘಾತ! “

By admin

⚡SHOCKING NEWS:“ಕಲಬುರ್ಗಿ| ಮನೆಗೆ ವಿದ್ಯುತ್ ಕನೆಕ್ಷನ್ ಕೊಡಲು ಕಂಬ ಏರಿದ ಯುವಕ : ವಿದ್ಯುತ್ ತಗುಲಿ ಕಂಬದ ಮೇಲೆಯೇ ಸಾವು.! ಗ್ರಾಮದಲ್ಲಿ ಶೋಕ, ಅಘಾತ! “

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಲಬುರಗಿ:

ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಬುಧವಾರ ಭಾರೀ ದಾರುಣ ಘಟನೆ ನಡೆದಿದೆ. ಮನೆಯೊಂದಕ್ಕೆ ವಿದ್ಯುತ್‌ ಕನೆಕ್ಷನ್‌ ನೀಡಲು ಕಂಬ ಏರಿದ 18 ವರ್ಷದ ಶ್ರೀಮಂತ ಸುಭಾಸ್‌  ಎಂಬ ಯುವಕನಿಗೆ ತೀವ್ರ ವಿದ್ಯುತ್‌ ಶಾಕ್ ತಗುಲಿ, ಕಂಬದ ಮೇಲೆಯೇ ಮರಣ ಸಂಭವಿಸಿದ ದಾರುಣ ಘಟನೆ ನಡೆದಿದೆ.

ಘಟನೆಯ ಸುದ್ದಿ ಗ್ರಾಮದಲ್ಲಿ ವೇಗವಾಗಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಆತಂಕ ನಿರ್ಮಾಣವಾಗಿದ್ದು, ಸ್ಥಳೀಯರಲ್ಲಿ ಭಾರೀ ಆಘಾತ ಮೂಡಿಸಿದೆ. ಯುವಕನ ಅಕಾಲಿಕ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

ಘಟನಾ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ