🛑LOCAL EXPRESS :”ಸಿಂಧನೂರು–ಹುಬ್ಬಳ್ಳಿ ಡೆಮೋ ರೈಲಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪ್ರಯಾಣಿಕರ ಸಮಿತಿ ಮುಖಂಡ  ಶರಣು ಪಾಟೀಲ್‌ ಆಗ್ರಹ”

By admin

🛑LOCAL EXPRESS :”ಸಿಂಧನೂರು–ಹುಬ್ಬಳ್ಳಿ ಡೆಮೋ ರೈಲಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪ್ರಯಾಣಿಕರ ಸಮಿತಿ ಮುಖಂಡ  ಶರಣು ಪಾಟೀಲ್‌ ಆಗ್ರಹ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ :

ಸಿಂಧನೂರುದಿಂದ ಹುಬ್ಬಳ್ಳಿ ತನಕ ಪ್ರತಿದಿನ ಸಂಚರಿಸುವ ಟ್ರೈನ್ ನಂ. 17304 ಆಗಿದ್ದು, ಪ್ರಯಾಣಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಹುಬ್ಬಳ್ಳಿ- ಧಾರವಾಡ ಪ್ರಯಾಣಿಕರ ಸಮಿತಿ ಮುಖಂಡ ಶರಣು ಪಾಟೀಲ್ ಅವರು ಬುಧುವಾರ ಆಗ್ರಹಿಸಿದ್ದಾರೆ.

ಕಳೆದ ಎರಡು–ಮೂರು ತಿಂಗಳಿಂದ ಬೆಳಗಿನ ಜಾವ ಸಂಚರಿಸುವ ಈ ರೈಲಿನಲ್ಲಿ ಸಾವಿರಾರು ಪ್ರಯಾಣಿಕರು, ವಿಶೇಷವಾಗಿ ವಯಸ್ಸಾದವರು, ಮಹಿಳೆಯರು ಹಾಗೂ ಅನಾರೋಗ್ಯದಿಂದ ಬಳಲುವವರು ಪ್ರಯಾಣಿಸುತ್ತಿದ್ದು, ಶೌಚಾಲಯ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳ ಕೊರತೆ ತೀವ್ರ ಅಸೌಕರ್ಯಕ್ಕೆ ಕಾರಣವಾಗುತ್ತಿದೆ ಎಂದು ಅವರು ದೂರಿದರು.

ಈ ಸಂಬಂಧ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕೆ. ರಾಜಶೇಖರ ಹಿಟ್ನಾಳ್ ಅವರಿಗೆ ಮನವಿ ಮಾಡಿ ಮಾಡಿ, ಸಂಬಂಧಪಟ್ಟ ಮಂತ್ರಿಗಳು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಯಾಣಿಕರಾದ ಗ್ಯಾನಪ್ಪ ಕನ್ನುಪೇಟೆ, ಸುರೇಶ ಸಿಂಧನೂರು, ಅಶೋಕ್ ಸಜ್ಜನ್ ಕಾರಟಗಿ, ಶರಣಬಸವ ವೀರಾಪುರ, ಚನ್ನಬಸವಸ್ವಾಮಿ ಸಿಂಧನೂರು, ಸುರೇಶ ಸಜ್ಜನ್ ತುರ್ವಿಹಾಳ್, ಟಿ.ವಿ. ರಾಮನ್ (ಗಂಗಾವತಿ), ಶ್ರೀದೇವಿ ಬುದುಗುಂಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.