BBK12 NEWS : ಬೆಂಗಳೂರು| ಗಿಲ್ಲಿ – ರಿಷಾ ವಿವಾದ : ಬಿಗ್‌ಬಾಸ್ ಮನೆಯಿಂದ ರಿಷಾ ಗೌಡ ಸಂಡೇ ಔಟ್

By admin

“ಬೆಂಗಳೂರು| ಗಿಲ್ಲಿ – ರಿಷಾ ವಿವಾದ : ಬಿಗ್‌ಬಾಸ್ ಮನೆಯಿಂದ ರಿಷಾ ಗೌಡ ಸಂಡೇ ಔಟ್”

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌: 

ಬಿಗ್‌ಬಾಸ್‌ ಕನ್ನಡ ಸೀಸನ್–12ರ ‘ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ್‌’ ಸಂಚಿಕೆಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸ್ಪರ್ಧಿ ರಿಷಾ ಗೌಡ ಮನೆಗೆ ಹೊರಬಂದಿದ್ದಾರೆ.

ಈ ಬಾರಿ ನಾಮಿನೇಷನ್‌ನಲ್ಲಿ ಹಲವು ಸ್ಪರ್ಧಿಗಳು ಇದ್ದರೂ ಕ್ರಮವಾಗಿ ರಕ್ಷಿತಾ, ಸ್ಪಂದನಾ ಮತ್ತು ಅಭಿಷೇಕ್ ಸೇಫ್‌ ಆಗಿ ಘೋಷಿಸಲ್ಪಟ್ಟರು. ನಂತರ ಮಾಳು ಹಾಗೂ ಸೂರಜ್ ಕೂಡ ಅಪಾಯ ವಲಯದಿಂದ ಹೊರಬಂದರು. ಅಂತಿಮವಾಗಿ ರಿಷಾ ಗೌಡ ಬಿಗ್‌ಬಾಸ್ ಮನೆಯಿಂದ ಹೊರಬರುವಂತಾಯಿತು.

ಇತ್ತೀಚೆಗೆ ಮನೆಯಲ್ಲಿ ನಡೆದಿದ್ದ ‘ಬಕೆಟ್’ ವಿಷಯಕ್ಕೆ ಸಂಬಂಧಿಸಿದ ಗಿಲ್ಲಿ – ರಿಷಾ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಗಿಲ್ಲಿ ಬಟ್ಟೆಗಳನ್ನು ಬಾತ್‌ರೂಮ್ ಬಳಿ ತಂದು ಹಾಕಿದ್ದಕ್ಕೆ ಕೋಪಗೊಂಡ ರಿಷಾ ಗಿಲ್ಲಿ ಮೇಲೆ ಕೈಮಾಡಿದ್ದರೆಂಬ ಆರೋಪಕ್ಕೆ ಸ್ಪಂದಿಸುತ್ತ, ವೀಕೆಂಡ್‌ ಸಂಚಿಕೆಯಲ್ಲಿ ಸುದೀಪ್‌ ಅವರು ರಿಷಾಗೆ ಗಟ್ಟಿ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ರಿಷಾ ಅವರ ಆಟದ ಮೇಲೆ ನೇರ ಪರಿಣಾಮ ಬೀರಿದುದಾಗಿ ಅಭಿಮಾನಿಗಳ ಅಭಿಪ್ರಾಯ.

ಎಲಿಮಿನೇಷನ್ ಬಳಿಕ ಭಾವುಕರಾದ ರಿಷಾ

ವೇದಿಕೆ ತಲುಪಿದ ರಿಷಾ ಭಾವುಕರವಾಗಿದ್ದು, “ಇಷ್ಟು ದಿನ ನನ್ನನ್ನು ಮನೆ ಮಗಳಂತೆ ಸ್ವೀಕರಿಸಿದ್ದೀರಿ. ನನ್ನಲ್ಲೂ ಕೋಪವಿದೆ, ಆದರೆ ನಿಮ್ಮ ಪ್ರೀತಿ ಪಡೆಯುವುದೇ ನನ್ನ ಉದ್ದೇಶ. ಪ್ರೀತಿ ನೀಡುವುದನ್ನು ನಿಲ್ಲಿಸಬೇಡಿ,” ಎಂದು ಮನವಿ ಮಾಡಿದರು.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ತಮ್ಮ ಪೋಸ್ಟ್‌ನಲ್ಲಿ ಅವರು,

 “ತಪ್ಪಾಗುವಾಗ ಕ್ಷಮಿಸಿದ್ದೀರಿ, ಪ್ರತಿಬಾರಿ ಬೆಂಬಲಿಸಿದ್ದೀರಿ, ವೋಟ್ ನೀಡಿ ಆಶೀರ್ವದಿಸಿದ್ದೀರಿ. ಈ ಪ್ರೀತಿಗೆ ಸದಾ ಋಣಿ,” ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅದೇ ರೀತಿ, ಅವಕಾಶಕ್ಕಾಗಿ ಕಲರ್ಸ್ ವಾಹಿನಿಗೆ ಹಾಗೂ ನೈತಿಕ ಬೆಂಬಲಕ್ಕಾಗಿ ಕಿಚ್ಚ ಸುದೀಪ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.