CRIME NEWS:”ಯಲಬುರ್ಗಾ|ದೇವರಿಗೆ ಬಿಟ್ಟ ಹಸುವಿನ ಕಾಲ ಕಡಿದು ವಿಕೃತಿ ಮೆರೆದ ಕಿಡಿಗೇಡಿ : ಆರೋಪಿಗೆ ಕಠಿಣ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ”

By admin

“ದೇವರಿಗೆ ಬಿಟ್ಟ ಹಸುವಿನ ಕಾಲ ಕಡಿದು ವಿಕೃತಿ ಮೆರೆದ ಕಿಡಿಗೇಡಿ : ಆರೋಪಿಗೆ ಕಠಿಣ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ”

Contents
“ದೇವರಿಗೆ ಬಿಟ್ಟ ಹಸುವಿನ ಕಾಲ ಕಡಿದು ವಿಕೃತಿ ಮೆರೆದ ಕಿಡಿಗೇಡಿ : ಆರೋಪಿಗೆ ಕಠಿಣ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಯಲಬುರ್ಗಾ:ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾಟರಂಗಿ ಗ್ರಾಮದಲ್ಲಿ ಅಮಾನವೀಯ ಹಾಗೂ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ದೇವರಿಗೆ ಬಿಟ್ಟಿದ್ದ ಹಸುವಿನ ಕಾಲನ್ನು ಅಂಥಹ ಪಾಪಿಗಳು ಕೊಡಲಿಯಿಂದ ಕಡಿದು ವಿಕೃತಿ ಮೆರೆದಿರುವ ಘಟನೆ ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.ಸುಮಾರು ಹತ್ತು–ಹದಿನೈದು ವರ್ಷಗಳ ಹಿಂದೆ ಗ್ರಾಮಸ್ಥರು ಮಾರುತೇಶ್ವರ ದೇವರಿಗೆ ಬಿಟ್ಟಿದ್ದ ಈ ಗೋವನ್ನು ಗ್ರಾಮಸ್ಥರು ದೈವದ ರೂಪವೆಂದು ಗೌರವದಿಂದ ನೋಡಿಕೊಳ್ಳುತ್ತಿದ್ದರು. ಯಾವುದೇ ಹೊಲಕ್ಕೂ ಮೇಯಲು ಹೋದರೂ ಇದನ್ನು ದೇವರ ಸ್ವರೂಪಿ ಎಂದು ಎಲ್ಲರೂ ಸ್ನೇಹಭಾವದಿಂದ ನೋಡಿಕೊಳ್ಳುತ್ತಿದ್ದರು. ಯಾರಿಗೂ ತೊಂದರೆ ಮಾಡದ ಈ ಗೋವು ನಿತ್ಯ ಗ್ರಾಮದಲ್ಲಿ ಸಂಚರಿಸುತ್ತಾ ಎಲ್ಲರ ಪ್ರೀತಿ ಗಳಿಸಿತ್ತು.ಆದರೆ ನ. 23ರಂದು ಗೋವು ಮಾಟರಂಗಿ ಗ್ರಾಮದ ಪಕ್ಕದಲ್ಲಿರುವ ಲಿಂಗನಬಂಡಿ ರಮೇಶ್ ಎನ್ನುವವರ ಹೊಲದಲ್ಲಿ ಮೇಯುವ ವೇಳೆ ಕೊಡಲಿಯಿಂದ ಕಾಲ ಕಡಿಯಲ್ಪಟ್ಟಿರುವುದು ನಿಟ್ಟುಸಿರು ಮೂಡಿಸಿದೆ. ಜಮೀನಿನ ಮಾಲೀಕರಾದ ರಮೇಶ್ ವಿರುದ್ಧ ಗ್ರಾಮಸ್ಥರು ಗಂಭೀರ ಆರೋಪ ಹೊರಿಸಿದ್ದು, ಈ ಬಗ್ಗೆ ಗ್ರಾಮದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.ದೇವರಿಗೆ ಬಿಟ್ಟ ಗೋವಿನ ಮೇಲೆ ಇಂತಹ ಕ್ರೂರ ಹಿಂಸೆ ನಡೆಸಿರುವ ಘಟನೆಯ ವಿರುದ್ಧ ಗ್ರಾಮಸ್ಥರು ಗಟ್ಟಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಆಗ್ರಹಿಸಿದ್ದಾರೆ.“ಇದು ದೇವರ ಸ್ವರೂಪಿ ಎನ್ನುವ ಭಾವನೆಯ ಮೇಲೆ ಹಲ್ಲೆ. ತಾಳಲಾಗದ ಕ್ರೌರ್ಯ!” ಎಂದು ಗ್ರಾಮಸ್ಥರು ವ್ಯಥೆಗೊಂಡಿದ್ದಾರೆ. ಘಟನೆ ನಂತರ ಗ್ರಾಮದಲ್ಲಿ ಅಸಮಾಧಾನದ ವಾತಾವರಣ ಮೂಡಿದ್ದು, ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸುವ ಸಂಕಲ್ಪ ಗ್ರಾಮಸ್ಥರಲ್ಲಿ ಗೋಚರಿಸಿದೆ.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಯಲಬುರ್ಗಾ:

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾಟರಂಗಿ ಗ್ರಾಮದಲ್ಲಿ ಅಮಾನವೀಯ ಹಾಗೂ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ದೇವರಿಗೆ ಬಿಟ್ಟಿದ್ದ ಹಸುವಿನ ಕಾಲನ್ನು ಅಂಥಹ ಪಾಪಿಗಳು ಕೊಡಲಿಯಿಂದ ಕಡಿದು ವಿಕೃತಿ ಮೆರೆದಿರುವ ಘಟನೆ ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು ಹತ್ತು–ಹದಿನೈದು ವರ್ಷಗಳ ಹಿಂದೆ ಗ್ರಾಮಸ್ಥರು ಮಾರುತೇಶ್ವರ ದೇವರಿಗೆ ಬಿಟ್ಟಿದ್ದ ಈ ಗೋವನ್ನು ಗ್ರಾಮಸ್ಥರು ದೈವದ ರೂಪವೆಂದು ಗೌರವದಿಂದ ನೋಡಿಕೊಳ್ಳುತ್ತಿದ್ದರು. ಯಾವುದೇ ಹೊಲಕ್ಕೂ ಮೇಯಲು ಹೋದರೂ ಇದನ್ನು ದೇವರ ಸ್ವರೂಪಿ ಎಂದು ಎಲ್ಲರೂ ಸ್ನೇಹಭಾವದಿಂದ ನೋಡಿಕೊಳ್ಳುತ್ತಿದ್ದರು. ಯಾರಿಗೂ ತೊಂದರೆ ಮಾಡದ ಈ ಗೋವು ನಿತ್ಯ ಗ್ರಾಮದಲ್ಲಿ ಸಂಚರಿಸುತ್ತಾ ಎಲ್ಲರ ಪ್ರೀತಿ ಗಳಿಸಿತ್ತು.

ಆದರೆ ನ. 23ರಂದು ಗೋವು ಮಾಟರಂಗಿ ಗ್ರಾಮದ ಪಕ್ಕದಲ್ಲಿರುವ ಲಿಂಗನಬಂಡಿ ರಮೇಶ್ ಎನ್ನುವವರ ಹೊಲದಲ್ಲಿ ಮೇಯುವ ವೇಳೆ ಕೊಡಲಿಯಿಂದ ಕಾಲ ಕಡಿಯಲ್ಪಟ್ಟಿರುವುದು ನಿಟ್ಟುಸಿರು ಮೂಡಿಸಿದೆ. ಜಮೀನಿನ ಮಾಲೀಕರಾದ ರಮೇಶ್ ವಿರುದ್ಧ ಗ್ರಾಮಸ್ಥರು ಗಂಭೀರ ಆರೋಪ ಹೊರಿಸಿದ್ದು, ಈ ಬಗ್ಗೆ ಗ್ರಾಮದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ದೇವರಿಗೆ ಬಿಟ್ಟ ಗೋವಿನ ಮೇಲೆ ಇಂತಹ ಕ್ರೂರ ಹಿಂಸೆ ನಡೆಸಿರುವ ಘಟನೆಯ ವಿರುದ್ಧ ಗ್ರಾಮಸ್ಥರು ಗಟ್ಟಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಆಗ್ರಹಿಸಿದ್ದಾರೆ.

“ಇದು ದೇವರ ಸ್ವರೂಪಿ ಎನ್ನುವ ಭಾವನೆಯ ಮೇಲೆ ಹಲ್ಲೆ. ತಾಳಲಾಗದ ಕ್ರೌರ್ಯ!” ಎಂದು ಗ್ರಾಮಸ್ಥರು ವ್ಯಥೆಗೊಂಡಿದ್ದಾರೆ. ಘಟನೆ ನಂತರ ಗ್ರಾಮದಲ್ಲಿ ಅಸಮಾಧಾನದ ವಾತಾವರಣ ಮೂಡಿದ್ದು, ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸುವ ಸಂಕಲ್ಪ ಗ್ರಾಮಸ್ಥರಲ್ಲಿ ಗೋಚರಿಸಿದೆ.