🔴 CRIME NEWS :”ವಿಜಯ ನಗರ| ತಂಗಿ ಗರ್ಭಿಣಿಯಾದ ಕಾರಣಕ್ಕೆ ಇಡೀ ಕುಟುಂಬವನ್ನೇ ಕೊಂದ ಅಣ್ಣ: ಕೊಟ್ಟೂರಿನಲ್ಲಿ  ರಾಜ್ಯವೇ ಬೆಚ್ಚಿಬೀಳಿಸಿದ ಮರ್ಯಾದೆಗೇಡು ಹತ್ಯೆ”

By admin

🔴 CRIME NEWS :“ವಿಜಯ ನಗರ| ತಂಗಿ ಗರ್ಭಿಣಿಯಾದ ಕಾರಣಕ್ಕೆ ಇಡೀ ಕುಟುಂಬವನ್ನೇ ಕೊಂದ ಅಣ್ಣ: ಕೊಟ್ಟೂರಿನಲ್ಲಿ ರಾಜ್ಯವೇ ಬೆಚ್ಚಿಬೀಳಿಸಿದ ಮರ್ಯಾದೆಗೇಡು ಹತ್ಯೆ”

Contents
🔴 CRIME NEWS :“ವಿಜಯ ನಗರ| ತಂಗಿ ಗರ್ಭಿಣಿಯಾದ ಕಾರಣಕ್ಕೆ ಇಡೀ ಕುಟುಂಬವನ್ನೇ ಕೊಂದ ಅಣ್ಣ: ಕೊಟ್ಟೂರಿನಲ್ಲಿ ರಾಜ್ಯವೇ ಬೆಚ್ಚಿಬೀಳಿಸಿದ ಮರ್ಯಾದೆಗೇಡು ಹತ್ಯೆ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ವಿಜಯನಗರ : ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ಭೀಕರ ತ್ರಿವಳಿ ಕೊಲೆ ಪ್ರಕರಣದ ಹಿಂದಿನ ಅಸಲಿ ಕಾರಣ ಇದೀಗ ಬಯಲಾಗಿದ್ದು, ಇದು ಮರ್ಯಾದೆಗೇಡು ಹತ್ಯೆ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ತಂಗಿ ಬೇರೆ ಜಾತಿಯ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿ ಗರ್ಭಿಣಿಯಾಗಿದ್ದಾಳೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಅಣ್ಣ ಅಕ್ಷಯ್, ತಂದೆ–ತಾಯಿ ಹಾಗೂ ತಂಗಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಆರೋಪಿ ಅಕ್ಷಯ್‌ನ ತಂಗಿ ಅಮೃತ (18) ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಯುವಕನೊಬ್ಬನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಈ ವಿಚಾರ ನಾಲ್ಕು ತಿಂಗಳ ಹಿಂದೆಯೇ ತಿಳಿದಿದ್ದ ಅಕ್ಷಯ್ ಮನೆಯಲ್ಲೇ ಗಲಾಟೆ ನಡೆಸಿದ್ದ. ಇತ್ತೀಚೆಗೆ ಅಮೃತ ಮೂರು ತಿಂಗಳ ಗರ್ಭಿಣಿ ಎಂಬುದು ತಿಳಿದ ನಂತರ ಅಕ್ಷಯ್ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ. ಆದರೆ ತಂದೆ–ತಾಯಿ ಇದಕ್ಕೆ ಒಪ್ಪದ ಕಾರಣ, ಇಡೀ ಕುಟುಂಬವನ್ನೇ ಮುಗಿಸುವ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.ಜ. 26ರಂದು ಮೊದಲು ತಾಯಿಯನ್ನು ಹತ್ಯೆ ಮಾಡಿದ ಅಕ್ಷಯ್, ಸಂಜೆ ಮನೆಗೆ ಬಂದ ತಂಗಿಯನ್ನೂ ಕೊಂದಿದ್ದಾನೆ. ಬಳಿಕ ರಾತ್ರಿ 10.30ರ ವೇಳೆಗೆ ಮನೆಗೆ ಬಂದ ತಂದೆಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಹತ್ಯೆಯ ನಂತರ ಸಾಕ್ಷಿ ನಾಶ ಮಾಡಲು ಯತ್ನಿಸಿದ ಅಕ್ಷಯ್, ಬೆಂಗಳೂರಿಗೆ ತೆರಳಿ ತಾನು ಅಲ್ಲಿ ಇದ್ದಂತೆ ನಾಟಕವಾಡಿದ್ದಾನೆ. ನಂತರ ತನ್ನ ಮಾವ ವಸಂತನ ಸಹಾಯದಿಂದ ಕೊಟ್ಟೂರಿಗೆ ಮರಳಿ, ಮನೆಯಲ್ಲೇ ಸುಮಾರು 5 ಅಡಿ ಆಳದ ಗುಂಡಿ ತೋಡಿ ಮೂವರ ಶವಗಳನ್ನು ಹೂತು ಹಾಕಿದ್ದಾನೆ.ಶವಗಳನ್ನು ಹೂತ ಬಳಿಕ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ ಅಕ್ಷಯ್‌ನ ನಡವಳಿಕೆ ಮೇಲೆ ಪೊಲೀಸರಿಗೆ ಅನುಮಾನ ಬಂದು ತೀವ್ರ ವಿಚಾರಣೆ ನಡೆಸಿದಾಗ ಈ ಭೀಕರ ಹತ್ಯಾಕಾಂಡ ಬಯಲಾಗಿದೆ.ಪ್ರಸ್ತುತ ಪೊಲೀಸರು ಆರೋಪಿ ಅಕ್ಷಯ್ ಹಾಗೂ ಸಾಕ್ಷಿ ನಾಶಕ್ಕೆ ಸಹಕರಿಸಿದ ಮಾವ ವಸಂತನನ್ನು ಬಂಧಿಸಿದ್ದಾರೆ. ತಂಗಿ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಆಕೆಯ ಪ್ರಿಯತಮನ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ವಿಜಯನಗರ : 

ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ಭೀಕರ ತ್ರಿವಳಿ ಕೊಲೆ ಪ್ರಕರಣದ ಹಿಂದಿನ ಅಸಲಿ ಕಾರಣ ಇದೀಗ ಬಯಲಾಗಿದ್ದು, ಇದು ಮರ್ಯಾದೆಗೇಡು ಹತ್ಯೆ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ತಂಗಿ ಬೇರೆ ಜಾತಿಯ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿ ಗರ್ಭಿಣಿಯಾಗಿದ್ದಾಳೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಅಣ್ಣ ಅಕ್ಷಯ್, ತಂದೆ–ತಾಯಿ ಹಾಗೂ ತಂಗಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಆರೋಪಿ ಅಕ್ಷಯ್‌ನ ತಂಗಿ ಅಮೃತ (18) ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಯುವಕನೊಬ್ಬನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಈ ವಿಚಾರ ನಾಲ್ಕು ತಿಂಗಳ ಹಿಂದೆಯೇ ತಿಳಿದಿದ್ದ ಅಕ್ಷಯ್ ಮನೆಯಲ್ಲೇ ಗಲಾಟೆ ನಡೆಸಿದ್ದ. ಇತ್ತೀಚೆಗೆ ಅಮೃತ ಮೂರು ತಿಂಗಳ ಗರ್ಭಿಣಿ ಎಂಬುದು ತಿಳಿದ ನಂತರ ಅಕ್ಷಯ್ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ. ಆದರೆ ತಂದೆ–ತಾಯಿ ಇದಕ್ಕೆ ಒಪ್ಪದ ಕಾರಣ, ಇಡೀ ಕುಟುಂಬವನ್ನೇ ಮುಗಿಸುವ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.

ಜ. 26ರಂದು ಮೊದಲು ತಾಯಿಯನ್ನು ಹತ್ಯೆ ಮಾಡಿದ ಅಕ್ಷಯ್, ಸಂಜೆ ಮನೆಗೆ ಬಂದ ತಂಗಿಯನ್ನೂ ಕೊಂದಿದ್ದಾನೆ. ಬಳಿಕ ರಾತ್ರಿ 10.30ರ ವೇಳೆಗೆ ಮನೆಗೆ ಬಂದ ತಂದೆಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಹತ್ಯೆಯ ನಂತರ ಸಾಕ್ಷಿ ನಾಶ ಮಾಡಲು ಯತ್ನಿಸಿದ ಅಕ್ಷಯ್, ಬೆಂಗಳೂರಿಗೆ ತೆರಳಿ ತಾನು ಅಲ್ಲಿ ಇದ್ದಂತೆ ನಾಟಕವಾಡಿದ್ದಾನೆ. ನಂತರ ತನ್ನ ಮಾವ ವಸಂತನ ಸಹಾಯದಿಂದ ಕೊಟ್ಟೂರಿಗೆ ಮರಳಿ, ಮನೆಯಲ್ಲೇ ಸುಮಾರು 5 ಅಡಿ ಆಳದ ಗುಂಡಿ ತೋಡಿ ಮೂವರ ಶವಗಳನ್ನು ಹೂತು ಹಾಕಿದ್ದಾನೆ.

ಶವಗಳನ್ನು ಹೂತ ಬಳಿಕ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ ಅಕ್ಷಯ್‌ನ ನಡವಳಿಕೆ ಮೇಲೆ ಪೊಲೀಸರಿಗೆ ಅನುಮಾನ ಬಂದು ತೀವ್ರ ವಿಚಾರಣೆ ನಡೆಸಿದಾಗ ಈ ಭೀಕರ ಹತ್ಯಾಕಾಂಡ ಬಯಲಾಗಿದೆ.

ಪ್ರಸ್ತುತ ಪೊಲೀಸರು ಆರೋಪಿ ಅಕ್ಷಯ್ ಹಾಗೂ ಸಾಕ್ಷಿ ನಾಶಕ್ಕೆ ಸಹಕರಿಸಿದ ಮಾವ ವಸಂತನನ್ನು ಬಂಧಿಸಿದ್ದಾರೆ. ತಂಗಿ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಆಕೆಯ ಪ್ರಿಯತಮನ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.