“ಶಹಾಪುರ|ಮುಂಚೂಣಿ ಕಾರ್ಯಕರ್ತರ ಕೌಶಲ್ಯ ವೃದ್ಧಿಗೆ ತರಬೇತಿ: ವರ್ಲ್ಡ್ ವಿಷನ್ ಇಂಡಿಯಾ – ಐಸಿಡಿಎಸ್”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ :
ವರ್ಲ್ಡ್ ವಿಷನ್ ಇಂಡಿಯಾ ಎಡಿಪಿ ಯಾದಗಿರಿ ಮತ್ತು ಐಸಿಡಿಎಸ್ ಸಹಯೋಗದೊಂದಿಗೆ ಮುಂಚೂಣಿ ಕಾರ್ಯಕರ್ತರ ಜ್ಞಾನ ಮತ್ತು ಕೌಶಲ್ಯ ವೃದ್ಧಿ ಗುರಿಯನ್ನು ಹೊಂದಿದ ತರಬೇತಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಹಾಗೂ ಸಮುದಾಯ ಮಟ್ಟದ ಸಿಬ್ಬಂದಿಗಾಗಿ ಆಯೋಜಿಸಿದ ಈ ತರಬೇತಿಯಲ್ಲಿ ಮಕ್ಕಳ ಆರೋಗ್ಯ, ತಾಯಂದಿರ ಆರೈಕೆ, ಪೌಷ್ಟಿಕಾಂಶ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯ ಕುರಿತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸಿಡಿಪಿಒ ಸಿದ್ದಣ್ಣಗೌಡ ಬಿರಾದಾರ್ ಅವರು, ಮಕ್ಕಳ ಆರಂಭಿಕ ಆರೈಕೆ ಮತ್ತು ಸಮಗ್ರಾಭಿವೃದ್ಧಿಯ ಮಹತ್ವವನ್ನು ಒತ್ತಿಹೇಳಿ ಮುಂಚೂಣಿ ಕಾರ್ಯಕರ್ತರ ಪಾತ್ರಗಳು ಹಾಗೂ ಜವಾಬ್ದಾರಿಗಳನ್ನು ಮನದಟ್ಟಾಗಿಸುವಂತೆ ಕರೆ ನೀಡಿದರು. ಸಂಗೀತಾ ರೆಡ್ಡಿ ಅವರು ತಾಯಿ–ಮಕ್ಕಳ ಪೋಷಣೆಯ ಕುರಿತ ಸಮುದಾಯ ಸಮಾಲೋಚನೆಗೆ ಅಗತ್ಯವಾದ ಮುಖ್ಯ ವಿಷಯಗಳನ್ನು ವಿವರಿಸಿದರು. ವ್ಯವಸ್ಥಾಪಕ ಅನಿಲ್ ತೇಜಪ್ಪ ಬಲ್ಲೂರಕರ ಅವರು ಸಂಸ್ಥೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ವಿವರ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಶರಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಇಬ್ರಾಹಿಂ, ಶಿಕ್ಷಕ ಮಹಾದೇವ, ಸಿಬ್ಬಂದಿಗಳಾದ ಮೈಕಲ್, ರಾಬರ್ಟ್, ಸಿದ್ದಮ್ಮ, ಮೋಹನ್, ಮೇನಕ, ಚೈತ್ರ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮಾರ್ಟಿನ್ ನಿರೂಪಿಸಿದರು ಮತ್ತು ಮೋಹನ್ ವಂದನಾರ್ಪಣೆ ಸಲ್ಲಿಸಿದರು.