“ಕಲಬುರಗಿ| ಡಿ.ಸಿ.ಸಿ ಬ್ಯಾಂಕ್ ಚುನಾವಣೆ : ಸುರೇಶ ಸಜ್ಜನ್ ಅವರಿಗೆ ಗೆಲುವು.!ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು“
•ಸೆಕ್ಯುಲರ್ ವಾಯ್ಸ್ ನ್ಯೂಸ್ ಕಲಬುರಗಿ :
ಇಲ್ಲಿನ ಡಿ.ಸಿ.ಸಿ ಬ್ಯಾಂಕ್ ಚುನಾವಣೆಯು ತೀವ್ರ ಹಣಾಹಣಿಗೆ ಕಾರಣವಾಗಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಎ.ಬಿ. ಮತ್ತು ಸಿ. ಸಹಕಾರ ಸಂಘಗಳನ್ನು ಹೊರತುಪಡಿಸಿ ಇನ್ನಿತರ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಒಟ್ಟು 104 ಮತಗಳಲ್ಲಿ 89 ಮತಗಳನ್ನು ಪಡೆಯುವ ಮೂಲಕ ಸುರೇಶ ಸಜ್ಜನ ದಾಖಲೆಯ ಮತ ಪಡೆದು, ಗೆಲುವು ಸಾಧಿಸಿದರು. ಅವರ ಎದುರಾಳಿ ಜ್ಯೋತಿ ಮರಗೋಳ 14 ಮತ ಪಡೆದರೆ, ಒಂದು ಮತ ತಿರಸ್ಕೃತವಾಯಿತು.
ಸಜ್ಜನ ಅವರು ವಿಜಯಶಾಲಿ ಆಗುತ್ತಿದ್ದಂತೆ ಬೆಂಬಲಿಗರು, ಅಭಿಮಾನಿಗಳು ಸಹಕಾರಿಗಳು, ಸೇರಿ ಸಹಸ್ರಾರು ಜನರು ಇಡೀ ಜಗತ್ ವೃತ್ತದಿಂದ ಸೂಪರ್ ಮಾರ್ಕೆಟ್ಟರವರೆಗೆ ಗುಲಾಲ್ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು .