“ಶಹಾಪೂರ| ಮುಡಬೂಳದಲ್ಲಿ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ : ಸಾಧಕರಿಗೆ ಸನ್ಮಾನ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ
ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅರ್ಥಪೂರ್ಣ ರಾಜ್ಯೋತ್ಸವ ಕಾರ್ಯಕ್ರಮ ಸೋಮವಾರ ಜರುಗಿತು.
Contents
“ಶಹಾಪೂರ| ಮುಡಬೂಳದಲ್ಲಿ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ : ಸಾಧಕರಿಗೆ ಸನ್ಮಾನ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ”• ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅರ್ಥಪೂರ್ಣ ರಾಜ್ಯೋತ್ಸವ ಕಾರ್ಯಕ್ರಮ ಸೋಮವಾರ ಜರುಗಿತು.ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಅವರು ಕನ್ನಡ ಎನ್ನುವದು ಭಾಷೆಯಷ್ಟೇ ಅಲ್ಲ, ಅದೊಂದು ಪರಂಪರೆಯಾಗಿದೆ. ಕನ್ನಡ ತನ್ನದೆಯಾದ ಚಾರಿತ್ರಿಕ ನೆಲೆಯನ್ನು ಹೊಂದಿ, ಭಾರತೀಯ ಭಾಷಾ ಇತಿಹಾಸದಲ್ಲಿ ತನ್ನದೆಯಾದ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಹೇಳಿದರು.ಇಂತಹ ವಿಶಿಷ್ಟಪೂರ್ಣ ಗತವೈಭವನ್ನು ಹೊಂದಿರುವ ಕನ್ನಡವನ್ನು ಎಲ್ಲಾ ರಂಗಗಳಲ್ಲಿ ಆಧ್ಯತೆಯ ಮೂಲಕ ಪರಿಣಾಮಕಾರಿ ಬಳಸುವ ಹೃದಯವೈಶ್ಯಾಲತೆಯ ಕನ್ನಡಿಗರನ್ನು ಬಹುವಾಗಿ ಆವರಿಸಿಕೊಳ್ಳುವ ಜರೂರಿದೆ ಎಂದರು. ಪ್ರಾಸ್ತಾವಿಕವಾಗಿ ವಲಯ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಸಾಯಿಬಣ್ಣ ಮೂಡಬುಳ ಅವರು ಮಾತನಾಡಿ, ಕನ್ನಡವೇನ್ನುವದು ಕನ್ನಡಿಗರಲ್ಲಿರುವ ಅದಮ್ಯವಾದ ಭಾವವಾಗಿದೆ. ಕನ್ನಡತನವೆನ್ನುವದು ಬದುಕಿನ ಭಾಗವಾಗಿದೆ. ಕನ್ನಡವನ್ನು ಸಶಕ್ತಿಕರಣಗೊಳಿಸುವ ಪ್ರಕ್ರೀಯೆಯು ಭಾಷೆ ಬಳಸುವ ಬಳಕೆದಾರರ ಮೇಲಿರುವದರಿಂದ ಕನ್ನಡವನ್ನು ಜೀವವಾಹಿನಿಯಾಗಿ ಪರಿಭಾವಿಸುವ ಅಗತ್ಯವಿದೆ ಎಂದರು.ಮುಖ್ಯ ಅತಿಥಿ ನುಡಿಗಳನ್ನಾಡಿದ ಹಿರಿಯ ಸಾಹಿತಿ ಶಿವಣ್ಣ ಇಜೇರಿ ಅವರು ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳು ಕನ್ನಡ ಪರಿಸರದಲ್ಲಿ ಖಂಡಿತವಾಗಲೂ ಕನ್ನಡದ ಸಾರವನ್ನು ಹಂಚುತ್ತಿವೆ. ಕನ್ನಡ ಜೀವನದ ಭಾಷೆಯಾಗುವದಕ್ಕಿಂತಲೂ ಜೀವದ ಭಾಷೆಯಾಗುವ ಅವಶ್ಯಕತೆಯಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಲಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಾಗರಾಜ ದೊರೆ ಅವರು ಮಾತನಾಡತ್ತಾ ಇದೊಂದು ಅದ್ಭುತ ಮತ್ತು ಅಪೂರ್ವವಾದ ಕಾರ್ಯಕ್ರಮವಾಗಿದ್ದು ಕನ್ನಡದ ಸಾರ್ವಭೌಮತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ತರಹದ ಕಾರ್ಯಕ್ರಮಗಳು ತಮ್ಮದೆಯಾದ ಮಹತ್ವವನ್ನು ಪಡೆದುಕೊಳ್ಳುತ್ತವೆ. ಕನ್ನಡವನ್ನು ಉನ್ನತಿಕರಿಸುವ ಮುಖವಾಣಿಯ ಹೊಂದಿರುವ ಈ ಕಾರ್ಯಕ್ರಮ ಕನ್ನಡ ಘನತೆಯನ್ನು ಹೆಚ್ಚಿಸುವಲ್ಲಿ ಸದಾ ತೆರೆದುಕೊಳ್ಳುತ್ತದೆ ಎಂದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಸಂಗೀತ ಕಲಾವಿದರಾದ ಚಂದ್ರಕಾಂತ ಸುರಪುರ, ಸೌಭಾಗ್ಯ ಮತ್ತು ಗೀತಾ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಬಸಣ್ಣಗೌಡ ಪೊಲೀಸ್ ಪಾಟೀಲ್, ಈರಣ್ಣ ದೇಸಾಯಿ, ವಲಯ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಅಶೋಕರಾವ್ ಮಲ್ಲಬಾದಿ, ಮಲ್ಲಯ್ಯ ಸ್ವಾಮಿ ಚಿಕ್ಕಮಠ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಹುತಪ್ಪ ಹವಾಲ್ದಾರ, ಸಂಗನಬಸಪ್ಪ ದೊರಿ, ಬಸವರಾಜ ಹವಾಲ್ದಾರ, ಸೋಮಣ್ಣಗೌಡ ಚೆನ್ನಪಟ್ಟಣ, ಶಿವಮಾನಪ್ಪ ಹವಾಲ್ದಾರ ,ಚಂದರರಾವ್ ಕುಲಕರ್ಣಿ, ಮಲ್ಲಣ್ಣ ಹೊಸಮನಿ ಶಿರವಾಳ, ವಿಶ್ವರಾಧ್ಯ ಹವಾಲ್ದಾರ, ಮಲ್ಲಪ್ಪ ಯಾದವ, ಕೃಷ್ಣಪ್ಪ ನಾಯ್ಕೋಡಿ, ಮತ್ತು ರಕ್ಷಿತಾ ಅರವಿಂದ ರಡ್ಡಿ, ನಿಂಗಣ್ಣ ಹವಾಲ್ದಾರ, ವಿಶ್ವರಾಧ್ಯ ದೇಸಾಯಿ, ಚಂದ್ರಶೇಖರ ಹೂವಿನಳ್ಳಿ, ತಿಮ್ಮಯ್ಯ ಯಾದವ,ಲಕ್ಷ್ಮಣ ಯಾದವ, ಶ್ರೀಶೈಲ ಮಡಿವಾಳಕರ್, ಜಾವಿದ ಜಮಾಧಾರ, ಗೋಪಣ್ಣ ಗೋಪಾಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಗುರುಸ್ವಾಮಿ ನಿರೂಪಿಸಿದರು.ಹಣಮಂತ್ರಾಯ ಗುರಿಕಾರ ಸ್ವಾಗತಿಸಿದರು, ದೇವು ನಾಯಕ ವಂದಿಸಿದರು

