“ಕೊಪ್ಪಳ| ದಲಿತ ಮಹಿಳೆಯರಿಗೆ ನಿಂದನೆ ಮಾಡಿದ ಆರೋಪ : ಶಾಸಕ ಯತ್ನಾಳ ವಿರುದ್ಧ ಕೊಪ್ಪಳದಲ್ಲಿ ಪ್ರಕರಣ ದಾಖಲು”
Contents
“ಕೊಪ್ಪಳ| ದಲಿತ ಮಹಿಳೆಯರಿಗೆ ನಿಂದನೆ ಮಾಡಿದ ಆರೋಪ : ಶಾಸಕ ಯತ್ನಾಳ ವಿರುದ್ಧ ಕೊಪ್ಪಳದಲ್ಲಿ ಪ್ರಕರಣ ದಾಖಲು” • ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ : ಕೊಪ್ಪಳ : ಸದಾ ಒಂದಲ್ಲ ಒಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಬರುತ್ತಿರುವ ವಿಜಯಪೂರ ನಗರ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಅವರು ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಅದೆನೆಂದರೆ ದಲಿತ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇರೆಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಖಾಸಗಿ ವಾಹಿನಿಯೊಂದಿಗೆ ದಸರಾ ಉದ್ಘಾಟನೆಯ ಬಗ್ಗೆ ಮಾತನಾಡುವ ವೇಳೆ “ಸನಾತನ ಧರ್ಮದವರು ಚಾಮುಂಡಿ ದೇವಿಗೆ ಹೂ ಮುಡಿಸಬೇಕು ಹೊರತು ಒಬ್ಬ ಸಾಮಾನ್ಯ ದಲಿತ ಮಹಿಳೆಗೂ ಕೂಡ ಅವಕಾಶ ಇಲ್ಲ ಎಂಬ ಹೇಳಿಕೆ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿತು .ಈ ವಿಡಿಯೋ ಸೂಕ್ಮವಾಗಿ ಗಮನಿಸಿದ ಪೂಜಾರ ಇದರ ಆಧಾರದ ಮೇಲೆ ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರ ಅವರು ಮಂಗಳವಾರ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಯತ್ನಾಳ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.ಇಂತಹ ಕೊಳಕು ಮನಸ್ಥಿತಿಯ ಯತ್ನಾಳ ರಾಜ್ಯದ ಮೂಲೆಮೂಲೆಗಳಲ್ಲಿ ಕೋಮು ಸಂಘರ್ಷದ ಹೇಳಿಕೆ, ಪ್ರಚೋದನಕಾರಿ ಹೇಳಿಕೆ,ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಇವರ ದಿನನಿತ್ಯದ ಅಭ್ಯಾಸವಾಗಿದೆ. ಈಗ ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದು, ಸಾರ್ವಜನಿಕವಾಗಿ ದಲಿತ ಹೆಣ್ಣು ಮಕ್ಕಳಿಗೆ ಹಾಗೂ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿ ಆತ ವಿಕೃತ ಮನಸ್ಥಿತಿಯನ್ನು ಮೆರೆದಿದ್ದಾನೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.“ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು,ಇದನ್ನೂ ಇನಷ್ಟು ಚುರುಕುಗೊಳಿಸಿ ಯತ್ನಾಳ ಮೇಲೆ ಎಸ್‌ಸಿ .ಎಸ್‌ಟಿ. ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಅವರನ್ನು ಜೈಲಿಗೆ ಅಟ್ಟಬೇಕೆಂದು ನನ್ನ ಆಗ್ರಹ”– ಮಲ್ಲಿಕಾರ್ಜುನ ಬಿ.ಪೂಜಾರ, ಮುಖಂಡ, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಈ ಹೇಳಿಕೆ ನೀಡಿದ ವಿಡಿಯೋ ಆಧಾರದಲ್ಲಿ ಯತ್ನಾಳ ಮೇಲೆ ಎಸ್‌ಸಿ .ಎಸ್‌ಟಿ. ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಅವರನ್ನು ಜೈಲಿಗೆ ಅಟ್ಟಬೇಕೆಂದು ದೂರಿನಲ್ಲಿ ಉಲ್ಲೇಖಿಸಿ ಒತ್ತಾಯಿಸಿದ್ದಾರೆ.


