“ಕೊಪ್ಪಳ |ಪ್ರಾಧ್ಯಾಪಕ ಡಾ. ನಾಗರಾಜ ದಂಡೋತಿ ಸೇರಿ ಐದು ಜನ ಸದಸ್ಯರನ್ನು ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ನೇಮಕ”

Contents
“ಕೊಪ್ಪಳ |ಪ್ರಾಧ್ಯಾಪಕ ಡಾ. ನಾಗರಾಜ ದಂಡೋತಿ ಸೇರಿ ಐದು ಜನ ಸದಸ್ಯರನ್ನು ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ನೇಮಕ” • ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ : ಕೊಪ್ಪಳ : ರಾಜ್ಯದಲ್ಲಿ ಕನ್ನಡ ಅಭಿವೃದ್ದಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೊಪ್ಪಳ ಜಿಲ್ಲಾ ಜಾಗೃತಿ ಸಮಿತಿಗೆ ಹಿರಿಯ ಪತ್ರಕರ್ತ ಸಾಹಿತಿ ಹಾಗೂ ಬರಹಗಾರ ಜಿ.ಎಸ್. ಗೋನಾಳ ರವರು ಸೇರಿದಂತೆ ಐದು ಜನ ಸದಸ್ಯರು ನೇಮಕಗೊಂಡಿದ್ದಾರೆ.ಇಲ್ಲಿನ ಗವಿಸಿದ್ದೇಶ್ವರ ಪದವಿ ವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ್ ದಂಡೋತಿ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಬರಹಗಾರ ಜಿ.ಎಸ್.ಗೋನಾಳ, ಮಹೇಶ್ ಬಳ್ಳಾರಿ, ಕನ್ನಡ ಉಪನ್ಯಾಸಕ ಡಾ.ಸಿದ್ದಲಿಂಗಪ್ಪ ಕೊಟೆಕಲ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಕಂಬಳಿ ಅವರನ್ನು ಜಿಲ್ಲಾ ಜಾಗೃತಿ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.ರಾಜ್ಯಪಾಲರ ಸರಕಾರದ ಶಿಫಾರಸ್ಸಿ ನ ಮೇರೆಗೆ ಕರ್ನಾಟಕ ಆದೇಶಾನುಸಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ರವರು ಈ ಐದು ಜನ ಸದಸ್ಯರನ್ನು ಕೊಪ್ಪಳ ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಕನ್ನಡ ಜಿಲ್ಲಾ ಜಾಗೃತಿ ಸಮಿತಿಗೆ ನೇಮಕಗೊಂಡಿರುವ ಈ ಎಲ್ಲಾ ಐದು ಜನ ಸದಸ್ಯರಿಗೆ ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಗಳು,ಪತ್ರಕರ್ತ ಮಿತ್ರರು ಹಾಗೂ ಸ್ನೇಹಿತರು ಹರ್ಷವ್ಯಕ್ತಪಡಿಸಿ ಅಭಿನಂದಿಸುತ್ತಿದ್ದಾರೆ.
