“ಕೊಪ್ಪಳ | ಸಮೀಕ್ಷೆಗೆ ಗೈರು ಹಾಜರು: ಶಿಕ್ಷಕನಿಗೆ ಅಮಾನತು ಮಾಡಿ ಡಿ. ಸಿ. ಆದೇಶ “

Contents
“ಕೊಪ್ಪಳ | ಸಮೀಕ್ಷೆಗೆ ಗೈರು ಹಾಜರು: ಶಿಕ್ಷಕನಿಗೆ ಅಮಾನತು ಮಾಡಿ ಡಿ. ಸಿ. ಆದೇಶ “• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ : ಕೊಪ್ಪಳ : ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ಸಮೀಕ್ಷೆಗೆ ನಿಯೋಜನೆ ಮಾಡಿದ್ದರೂ ಸಮೀಕ್ಷೆಗೆ ಹಾಜರಾಗದ ಶಿಕ್ಷಕನನ್ನು ಕರ್ತವ್ಯಲೋಪದ ಮೇಲೆ ಅಮಾನತು ಮಾಡಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅವರು ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂ ಕಿನ ಜೂಲಕುಂಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ರಾಮಪ್ಪ ತಳವಾರ ಅಮಾನತುಗೊಂಡವರು ಎನ್ನಲಾಗಿದೆ.ಸಮೀಕ್ಷೆಯಲ್ಲಿ ಶೂನ್ಯ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.ಕೆಲವು ದಿನಗಳಿಂದ ರಾಮಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದುವರೆಗೆ ಯಾವುದೇ ಮನೆ ಸಮೀಕ್ಷೆಗೆ ತೆರಳದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.
