LOCAL NEWS: “ಕಾರಟಗಿ| ಪಠ್ಯದ ಜೊತೆ ಸರ್ವಾಂಗೀಣ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯ: ಕರ್ಣಕುಮಾರ”

By admin

“ಕಾರಟಗಿ| ಪಠ್ಯದ ಜೊತೆ ಸರ್ವಾಂಗೀಣ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯ: ಕರ್ಣಕುಮಾರ”

Contents
“ಕಾರಟಗಿ| ಪಠ್ಯದ ಜೊತೆ ಸರ್ವಾಂಗೀಣ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯ: ಕರ್ಣಕುಮಾರ”•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಾರಟಗಿ: ಪಠ್ಯದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯವಾಗಿವೆ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಅಭಿಪ್ರಾಯಪಟ್ಟರು.ಶುಕ್ರವಾರ ಕಾರಟಗಿಯ ಶ್ರೀ ಶರಣಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 2025–26 ನೇ ಸಾಲಿನ “ಚಿಗುರು – ಬಾಲಪ್ರತಿಭೆಗಳ ಸಾಂಸ್ಕೃತಿಕ ವೇದಿಕೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.“ವಿದ್ಯಾರ್ಥಿಗಳು ಪಠ್ಯಾಧ್ಯಯನಕ್ಕೆ ಮಾತ್ರ ಸೀಮಿತವಾಗದೆ ಸೃಜನಶೀಲ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸಿದಾಗ ಮಾತ್ರ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಯುವ ಸೌರಭ, ಚಿಗುರು, ಕಲಾ ಪ್ರತಿಭೋತ್ಸವ, ಕಲಾ ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಇಲಾಖೆ ನಾಡಿನ ಭಾಷೆ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿಡುತ್ತಿದೆ,” ಎಂದರು.“ಇಂದಿನ ದಿನದಲ್ಲಿ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಕಳವಳಕಾರಿ. ಪಾಶ್ಚಾತ್ಯ ಸಂಸ್ಕೃತಿಗೆ ಆಳವಾದ ಇತಿಹಾಸವಿಲ್ಲ. ಆದರೆ ನಮ್ಮ ಜನಪದ ಮತ್ತು ಗ್ರಾಮೀಣ ಸಾಂಸ್ಕೃತಿಕ ಪರಂಪರೆ ವಿಶ್ವದ ಶ್ರೀಮಂತ ಸಂಸ್ಕೃತಿಗಳಲ್ಲಿ ಮೆರೆಯುತ್ತದೆ. ಮಕ್ಕಳು ಮೂಲ ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗಲೇ ಸಮಾಜ ಬಲವಾಗುತ್ತದೆ” ಎಂದು ಕರ್ಣಕುಮಾರ ಹೇಳಿದರು.ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಶೆಟ್ಟರ್ ಮಾತನಾಡಿ, “ಮಾನವೀಯತೆ, ನೈತಿಕತೆ, ದೈಹಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಿಗೆ ಅಗತ್ಯ. ಇದು ಬದುಕಿನ ಗುಣಮಟ್ಟವನ್ನೇ ಹೆಚ್ಚಿಸುವ ಶಕ್ತಿ ಹೊಂದಿದೆ,” ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಅವರು, “ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾಷೆ, ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸುವ ಅನೇಕ ಸಕಾರಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡಿದೆ” ಎಂದು ಪ್ರಶಂಸಿಸಿದರು.ತಾಲೂಕು ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ್ ಅವರು ಮಾತನಾಡಿ, “ಕನ್ನಡ ನಾಡು, ನುಡಿ, ನೆಲಗಳಿಗೆ ಸಾವಿರಾರು ವರ್ಷಗಳ ಪರಂಪರೆ ಇದೆ. ಈ ಪರಂಪರೆಯ ಅರಿವು ಮಕ್ಕಳಲ್ಲಿ ಮೂಡಿಸುವಲ್ಲಿ ಚಿಗುರು ಮಹತ್ತರ ಪಾತ್ರ ವಹಿಸುತ್ತಿದೆ. ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಇಂತಹ ವೇದಿಕೆಗಳ ಸದುಪಯೋಗ ಪಡೆಯಬೇಕು” ಎಂದು ಸಲಹೆ ನೀಡಿದರು.• ಬಾಲಪ್ರತಿಭೆಗಳ ಕಲೆಗಿಂದು ರಂಗುಚಿಗುರು ಕಾರ್ಯಕ್ರಮದಲ್ಲಿ ಬಾಲಕಲಾವಿದರ ಮನಮುಟ್ಟಿದ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚನ್ನು ಪಡೆದವು. ವೈಷ್ಣವಿ ಕಮ್ಮಾರ್ ಮತ್ತು ತಂಡ: ಸುಗಮ ಸಂಗೀತ ಗಾಯನ ‘ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ’, ನಯನ ಹಾಗೂ ತಂಡ: ಜನಪದ ನೃತ್ಯ – ಮಲೆ ಮಾದೇಶ್ವರ, ಅಮಿತ್ ಮತ್ತು ತಂಡ: ಶಾಸ್ತ್ರೀಯ ಸಂಗೀತ,ಅಸರ ಜರಿನ್ ತಂಡ: ಲವಕುಶರ ಕಾಳಗ – ಬಯಲಾಟ ಪ್ರದರ್ಶನ, ಏಕಪಾತ್ರ ಅಭಿನಯ ಮತ್ತು ಸಮೂಹ ನೃತ್ಯ: ಸಾಂಸ್ಕೃತಿಕ ಸಂಭ್ರಮಕ್ಕೆ ಮತ್ತಷ್ಟು ಹಾಲೆ ಎರಚಿತು.

•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಾರಟಗಿ: 

ಪಠ್ಯದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯವಾಗಿವೆ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಅಭಿಪ್ರಾಯಪಟ್ಟರು.

ಶುಕ್ರವಾರ ಕಾರಟಗಿಯ ಶ್ರೀ ಶರಣಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 2025–26 ನೇ ಸಾಲಿನ “ಚಿಗುರು – ಬಾಲಪ್ರತಿಭೆಗಳ ಸಾಂಸ್ಕೃತಿಕ ವೇದಿಕೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ವಿದ್ಯಾರ್ಥಿಗಳು ಪಠ್ಯಾಧ್ಯಯನಕ್ಕೆ ಮಾತ್ರ ಸೀಮಿತವಾಗದೆ ಸೃಜನಶೀಲ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸಿದಾಗ ಮಾತ್ರ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಯುವ ಸೌರಭ, ಚಿಗುರು, ಕಲಾ ಪ್ರತಿಭೋತ್ಸವ, ಕಲಾ ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಇಲಾಖೆ ನಾಡಿನ ಭಾಷೆ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿಡುತ್ತಿದೆ,” ಎಂದರು.

“ಇಂದಿನ ದಿನದಲ್ಲಿ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಕಳವಳಕಾರಿ. ಪಾಶ್ಚಾತ್ಯ ಸಂಸ್ಕೃತಿಗೆ ಆಳವಾದ ಇತಿಹಾಸವಿಲ್ಲ. ಆದರೆ ನಮ್ಮ ಜನಪದ ಮತ್ತು ಗ್ರಾಮೀಣ ಸಾಂಸ್ಕೃತಿಕ ಪರಂಪರೆ ವಿಶ್ವದ ಶ್ರೀಮಂತ ಸಂಸ್ಕೃತಿಗಳಲ್ಲಿ ಮೆರೆಯುತ್ತದೆ. ಮಕ್ಕಳು ಮೂಲ ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗಲೇ ಸಮಾಜ ಬಲವಾಗುತ್ತದೆ” ಎಂದು ಕರ್ಣಕುಮಾರ ಹೇಳಿದರು.

ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಶೆಟ್ಟರ್ ಮಾತನಾಡಿ, “ಮಾನವೀಯತೆ, ನೈತಿಕತೆ, ದೈಹಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಿಗೆ ಅಗತ್ಯ. ಇದು ಬದುಕಿನ ಗುಣಮಟ್ಟವನ್ನೇ ಹೆಚ್ಚಿಸುವ ಶಕ್ತಿ ಹೊಂದಿದೆ,” ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಅವರು, “ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾಷೆ, ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸುವ ಅನೇಕ ಸಕಾರಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡಿದೆ” ಎಂದು ಪ್ರಶಂಸಿಸಿದರು.

ತಾಲೂಕು ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ್ ಅವರು ಮಾತನಾಡಿ, “ಕನ್ನಡ ನಾಡು, ನುಡಿ, ನೆಲಗಳಿಗೆ ಸಾವಿರಾರು ವರ್ಷಗಳ ಪರಂಪರೆ ಇದೆ. ಈ ಪರಂಪರೆಯ ಅರಿವು ಮಕ್ಕಳಲ್ಲಿ ಮೂಡಿಸುವಲ್ಲಿ ಚಿಗುರು ಮಹತ್ತರ ಪಾತ್ರ ವಹಿಸುತ್ತಿದೆ. ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಇಂತಹ ವೇದಿಕೆಗಳ ಸದುಪಯೋಗ ಪಡೆಯಬೇಕು” ಎಂದು ಸಲಹೆ ನೀಡಿದರು.

• ಬಾಲಪ್ರತಿಭೆಗಳ ಕಲೆಗಿಂದು ರಂಗು

ಚಿಗುರು ಕಾರ್ಯಕ್ರಮದಲ್ಲಿ ಬಾಲಕಲಾವಿದರ ಮನಮುಟ್ಟಿದ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚನ್ನು ಪಡೆದವು. ವೈಷ್ಣವಿ ಕಮ್ಮಾರ್ ಮತ್ತು ತಂಡ: ಸುಗಮ ಸಂಗೀತ ಗಾಯನ ‘ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ’, ನಯನ ಹಾಗೂ ತಂಡ: ಜನಪದ ನೃತ್ಯ – ಮಲೆ ಮಾದೇಶ್ವರ, ಅಮಿತ್ ಮತ್ತು ತಂಡ: ಶಾಸ್ತ್ರೀಯ ಸಂಗೀತ,ಅಸರ ಜರಿನ್ ತಂಡ: ಲವಕುಶರ ಕಾಳಗ – ಬಯಲಾಟ ಪ್ರದರ್ಶನ, ಏಕಪಾತ್ರ ಅಭಿನಯ ಮತ್ತು ಸಮೂಹ ನೃತ್ಯ: ಸಾಂಸ್ಕೃತಿಕ ಸಂಭ್ರಮಕ್ಕೆ ಮತ್ತಷ್ಟು ಹಾಲೆ ಎರಚಿತು.