LOCAL EXPRESS: “ನವದೆಹಲಿ| ಕಾರು  ಸ್ಫೋಟದಲ್ಲಿ ಅಮಾಯಕ ನಾಗರಿಕರ ಬಲಿ : ಎಸ್‌ ಯುಸಿಐ(ಸಿ) ಪಕ್ಷ ತೀವ್ರ ಆಘಾತ..!ಸೂಕ್ತ ಪರಿಹಾರಕ್ಕಾಗಿ ಒತ್ತಾಯ”

By admin

“ನವದೆಹಲಿ| ಕಾರು  ಸ್ಫೋಟದಲ್ಲಿ ಅಮಾಯಕ ನಾಗರಿಕರು ಬಲಿ : ಎಸ್‌ ಯುಸಿಐ(ಸಿ) ಪಕ್ಷ ತೀವ್ರ ಆಘಾತ : ಸೂಕ್ತ ಪರಿಹಾರಕ್ಕಾಗಿ ಒತ್ತಾಯ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌,ಕಲಬುರಗಿ: 

“ದೆಹಲಿಯ ಅತ್ಯಂತ ಜನಸಂದಣಿ ಪ್ರದೇಶವಾಗಿರುವ ಮತ್ತು ಪ್ರವಾಸಿ ಆಕರ್ಷಣೆಯ ಕೇಂದ್ರವಾದ ಕೆಂಪು ಕೋಟೆ ಬಳಿ ನಡೆದ ಭಾರೀ ಸ್ಫೋಟದಿಂದ ಸುಮಾರು 10 ಅಮಾಯಕ ನಾಗರಿಕರು ಸಾವನ್ನಪ್ಪಿ, ಅನೇಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೇಶವ್ಯಾಪಿ ನಮಗೆ ತೀವ್ರ ಆಘಾತವನ್ನುಂಟುಮಾಡಿದೆ” ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ(ಕಮ್ಯುನಿಸ್ಟ್)‌ ಪಕ್ಷವು ವ್ಯಕ್ತಪಡಿಸಿದೆ. 

ಈ  ಕುರಿತು  ಬುಧುವಾರ ಪತ್ರಿಕಾ ಹೇಳಿಕೆ ನೀಡಿರುವ  ಪಕ್ಷದ ಪ್ರಧಾನ ಕಾರ್ಯದರ್ಶಿ  ಪ್ರವಾಶ್ ಘೋಶ್  ಮತ್ತು ಜಿಲ್ಲಾ ಕಾರ್ಯದರ್ಶಿ ಆರ್.ಕೆ. ವೀರಭದ್ರಪ್ಪ ಅವರು ಪ್ರತಿಕ್ರೀಯಿಸಿ, “ವಿಧ್ವಂಸಕ ಕೃತ್ಯವೆಂದು ಸರ್ಕಾರ ಹೇಳಿಕೊಂಡಿದೆ. ಆದರೆ ತನ್ನ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿ ಎಂಬುದನ್ನು ಸರ್ಕಾರ ಮರೆಯಬಾರದು” ಎಂದು ತಿಳಿಸಿದ್ದಾರೆ,

 ಅವರು ಮುಂದುವರಿದು ,”ನಾಗರಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಸರ್ಕಾರ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಘಟನೆಯ ಕುರಿತು ಶೀಘ್ರ, ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತದೆ ಎಂದರು. 

ಮೃತರ ಕುಟುಂಬಗಳಿಗೆ  ತಕ್ಷಣ ಸೂಕ್ತ ಪರಿಹಾರ ನೀಡುವಂತೆ  ಮತ್ತು ಗಾಯಗೊಂಡವರಿಗೆ ಸರ್ಕಾರದ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ  ಎಸ್ಯುಸಿಐ(ಕಮ್ಯುನಿಸ್ಟ್)  ಒತ್ತಾಯಿಸಿಸುತ್ತದೆಂದರು.

 

Contents
“ನವದೆಹಲಿ| ಕಾರು  ಸ್ಫೋಟದಲ್ಲಿ ಅಮಾಯಕ ನಾಗರಿಕರು ಬಲಿ : ಎಸ್‌ ಯುಸಿಐ(ಸಿ) ಪಕ್ಷ ತೀವ್ರ ಆಘಾತ : ಸೂಕ್ತ ಪರಿಹಾರಕ್ಕಾಗಿ ಒತ್ತಾಯ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌,ಕಲಬುರಗಿ: “ದೆಹಲಿಯ ಅತ್ಯಂತ ಜನಸಂದಣಿ ಪ್ರದೇಶವಾಗಿರುವ ಮತ್ತು ಪ್ರವಾಸಿ ಆಕರ್ಷಣೆಯ ಕೇಂದ್ರವಾದ ಕೆಂಪು ಕೋಟೆ ಬಳಿ ನಡೆದ ಭಾರೀ ಸ್ಫೋಟದಿಂದ ಸುಮಾರು 10 ಅಮಾಯಕ ನಾಗರಿಕರು ಸಾವನ್ನಪ್ಪಿ, ಅನೇಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೇಶವ್ಯಾಪಿ ನಮಗೆ ತೀವ್ರ ಆಘಾತವನ್ನುಂಟುಮಾಡಿದೆ” ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ(ಕಮ್ಯುನಿಸ್ಟ್)‌ ಪಕ್ಷವು ವ್ಯಕ್ತಪಡಿಸಿದೆ. ಈ  ಕುರಿತು  ಬುಧುವಾರ ಪತ್ರಿಕಾ ಹೇಳಿಕೆ ನೀಡಿರುವ  ಪಕ್ಷದ ಪ್ರಧಾನ ಕಾರ್ಯದರ್ಶಿ  ಪ್ರವಾಶ್ ಘೋಶ್  ಮತ್ತು ಜಿಲ್ಲಾ ಕಾರ್ಯದರ್ಶಿ ಆರ್.ಕೆ. ವೀರಭದ್ರಪ್ಪ ಅವರು ಪ್ರತಿಕ್ರೀಯಿಸಿ, “ವಿಧ್ವಂಸಕ ಕೃತ್ಯವೆಂದು ಸರ್ಕಾರ ಹೇಳಿಕೊಂಡಿದೆ. ಆದರೆ ತನ್ನ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿ ಎಂಬುದನ್ನು ಸರ್ಕಾರ ಮರೆಯಬಾರದು” ಎಂದು ತಿಳಿಸಿದ್ದಾರೆ, ಅವರು ಮುಂದುವರಿದು ,”ನಾಗರಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಸರ್ಕಾರ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಘಟನೆಯ ಕುರಿತು ಶೀಘ್ರ, ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತದೆ ಎಂದರು. ಮೃತರ ಕುಟುಂಬಗಳಿಗೆ  ತಕ್ಷಣ ಸೂಕ್ತ ಪರಿಹಾರ ನೀಡುವಂತೆ  ಮತ್ತು ಗಾಯಗೊಂಡವರಿಗೆ ಸರ್ಕಾರದ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ  ಎಸ್ಯುಸಿಐ(ಕಮ್ಯುನಿಸ್ಟ್)  ಒತ್ತಾಯಿಸಿಸುತ್ತದೆಂದರು.