LOCAL EXPRESS: ಕಲಬುರಗಿ| “ಹಜಾಮ” ಎಂಬ ನಿಷೇಧಿತ ಪದ ಬಳಕೆ ತಡೆಗೆ ಆಂಧ್ರ ಮಾದರಿಯಂತೆ ಕಾನೂನು ರಚಿಸಲು ಸವಿತಾ ಸಮಾಜ ಆಗ್ರಹ.! ಚಳಿಗಾಲದ ಪರಿಷತ್‌ ಅಧಿವೇಶದಲ್ಲಿ ಧ್ವನಿ ಎತ್ತುವಂತೆ  ಎಂಎಲ್ಸಿ ಗುತ್ತೇದಾರ ಅವರಿಗೆ ಮನವಿ”  

By admin

ಕಲಬುರಗಿ| “ಹಜಾಮ” ಎಂಬ ನಿಷೇಧಿತ ಪದ ಬಳಕೆ ತಡೆಗೆ  ಆಂಧ್ರ ಮಾದರಿಯಲ್ಲಿ ಕಾನೂನು ರಚಿಸಲು ಸವಿತಾ ಸಮಾಜ ಆಗ್ರಹ.!

• ಚಳಿಗಾಲದ ಪರಿಷತ್‌ ಅಧಿವೇಶದಲ್ಲಿ ಧ್ವನಿ ಎತ್ತುವಂತೆ  ಎಂಎಲ್ಸಿ ಗುತ್ತೇದಾರ ಅವರಿಗೆ  ಮನವಿ” 

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಲಬುರಗಿ:  

ಸಮಾಜದಲ್ಲಿ ಇನ್ನೂ ಕೆಲವೆಡೆ  ಜನಪತ್ರಿನಿಧಿಗಳು ಮತ್ತು ಜನ ಸಾಮಾನ್ಯರು ಸಹ  ಸವಿತಾ ಸಮುದಾಯದ “ಹಜಾಮ” ಎಂಬ ನಿಷೇಧಿತ ಪದವನ್ನು ಹೀನಾರ್ಥದಲ್ಲಿ ಬಳಸುವ ಅಸಹ್ಯ ಪ್ರಕ್ರಿಯೆ ಮುಂದುವರೆದಿರುವ ಹಿನ್ನೆಲ್ಲೆಯಲ್ಲಿಅದನ್ನು ತಡೆದು, ಆಂಧ್ರ ಮಾದರಿಯಲ್ಲಿ ಕಾನೂನು ರಚಿಸಿ ಕ್ರಮ ಕೈಗೊಳ್ಳುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುವಂತೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ  ಅವರಿಗೆ  ಸವಿತಾ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ವಾರೀಕ್‌ ಅವರ  ನೇತೃತ್ವದಲ್ಲಿ ಮಂಗಳವಾರ ಮನವಿ ಪತ್ರ ನೀಡಿದರು.

ಬಳಿಕ ಮನವಿ ಪತ್ರ ನೀಡಿ ಮಾತನಾಡಿದ ಆನಂದ ವಾರೀಕ್‌ ಅವರು, ಯಾವದೇ  ವೃತ್ತಿಯ ಆಧಾರದ ಮೇಲೆ ಯಾರನ್ನೂ ಹೀನವಾಗಿ ಕಾಣುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ. ತಲೆ ತಲಾಂತರದಿಂದ ರೋಗ ರುಜಿನಗಳು ಲೆಕ್ಕಿಸದೆ ಕ್ಷೌರ ಸೇವೆ ಮಾಡುತ್ತಾ ಜೀವನ ಸಾಗಿಸುತ್ತಿರುವ  ನಮ್ಮ ಸಮುದಾಯದ  ನಿಷೇಧಿತ ಪದ  ಬಳಸಿ  ಕುಲ ವೃತ್ತಿಗೆ ಅವಮಾನಿಸಿದ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ  ಸಿ. ಟಿ. ರವಿ  ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕೆಂದು ಕೇಳಿಕೊಂಡರು.

 ಸರ್ಕಾರವು ನಿಷೇಧಿತ ಪದ ಬಳಕೆಗೆ ತಡೆ ನೀಡುವ ಕಾನೂನು ರಚಿಸಿ, ಸವಿತಾ ಸಮಾಜಕ್ಕೆ  ಗೌರವಯುತ  ಭಾಷೆ ಬಳಸುವಂತೆ ಪ್ರೋತ್ಸಾಹಿಸಬೇಕು ಹಾಗೂ ಕಾನೂನು ರಚಿಸಬೇಕು ಮತ್ತು  ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು . ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು .ವೃತ್ತಿ ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಚಳಿಗಾಲದ ಪರಿಷತ್‌ ಅಧಿವೇಶದಲ್ಲಿ ಈ  ವಿಷಯವನ್ನು ಪ್ರಸ್ತಾಪಿಸಬೇಕೆಂದು ಮತ್ತು ಮುಖ್ಯಮಂತ್ರಿ ಅವರ ಗಮನಕ್ಕೆ ಚರ್ಚಿಸಬೇಕೆಂದು ಎಎಲ್ಸಿ ಗುತ್ತೆದಾರ ರಿಗೆ ಮನವಿ ಮಾಡಲಾಗಿದೆ ಎಂದರು. 

 ಈ ವೇಳೆ ಸಮಾಜ ಖಜಾಂಚಿ ಮಹೇಶ ಪಾಣೇಗಾಂವ ಅವರು ಉಪಸ್ಥಿತರಿದ್ದರು.