CRIME NEWS: “ಕಾರಟಗಿ| ಉಳೆನೂರಿನಲ್ಲಿ ಮುಳ್ಳಿನ ಪೊದೆಯಲ್ಲಿ ಶಿಶುವಿನ ಶವ ಪತ್ತೆ: ಪೊಲೀಸರು ತನಿಖೆ ಆರಂಭ”

By admin

“ಕಾರಟಗಿ| ಉಳೆನೂರಿನಲ್ಲಿ ಮುಳ್ಳಿನ ಪೊದೆಯಲ್ಲಿ ಶಿಶುವಿನ ಶವ ಪತ್ತೆ: ಪೊಲೀಸರು ತನಿಖೆ ಆರಂಭ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಾರಟಗಿ:

ಕೊಪ್ಪಳ ಜಿಲ್ಲೆಯ ಉಳೆನೂರು ಗ್ರಾಮದಲ್ಲಿ ಮುಳ್ಳಿನ ಪೊದೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿಟ್ಟು ಬಿಸಾಡಲಾಗಿದ್ದ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ. ಗ್ರಾಮದ ಹೊರಹೊಲಯಲ್ಲಿ ಸ್ವಚ್ಛತೆಗೆಂದು ತೆರಳಿದ ಮನೆಯ ಮಾಲಕ ಕೆಟ್ಟ ವಾಸನೆ ಗಮನಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಶಿಶುವನ್ನು ಜನಿಸಿದ ತಕ್ಷಣವೇ ದುಷ್ಕರ್ಮಿಗಳು ಚೀಲಕ್ಕೆ ಹಾಕಿ ಮುಳ್ಳಿನ ಪೊದೆಯಲ್ಲಿ ಎಸೆದಿರುವ ಆತಂಕ ವ್ಯಕ್ತವಾಗಿದೆ. ವಿಷಯ ತಿಳಿದ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಕಾರಟಗಿ ಪಿಎಸ್‌ಐ ಕಾಮಣ್ಣ, ಎಎಸ್‌ಐ ವೆಂಕಟರಡ್ಡಿ ಹಾಗೂ ಬೆನ್ನೂರು ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

 

Contents
“ಕಾರಟಗಿ| ಉಳೆನೂರಿನಲ್ಲಿ ಮುಳ್ಳಿನ ಪೊದೆಯಲ್ಲಿ ಶಿಶುವಿನ ಶವ ಪತ್ತೆ: ಪೊಲೀಸರು ತನಿಖೆ ಆರಂಭ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಾರಟಗಿ:ಕೊಪ್ಪಳ ಜಿಲ್ಲೆಯ ಉಳೆನೂರು ಗ್ರಾಮದಲ್ಲಿ ಮುಳ್ಳಿನ ಪೊದೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿಟ್ಟು ಬಿಸಾಡಲಾಗಿದ್ದ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ. ಗ್ರಾಮದ ಹೊರಹೊಲಯಲ್ಲಿ ಸ್ವಚ್ಛತೆಗೆಂದು ತೆರಳಿದ ಮನೆಯ ಮಾಲಕ ಕೆಟ್ಟ ವಾಸನೆ ಗಮನಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.ಶಿಶುವನ್ನು ಜನಿಸಿದ ತಕ್ಷಣವೇ ದುಷ್ಕರ್ಮಿಗಳು ಚೀಲಕ್ಕೆ ಹಾಕಿ ಮುಳ್ಳಿನ ಪೊದೆಯಲ್ಲಿ ಎಸೆದಿರುವ ಆತಂಕ ವ್ಯಕ್ತವಾಗಿದೆ. ವಿಷಯ ತಿಳಿದ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಕಾರಟಗಿ ಪಿಎಸ್‌ಐ ಕಾಮಣ್ಣ, ಎಎಸ್‌ಐ ವೆಂಕಟರಡ್ಡಿ ಹಾಗೂ ಬೆನ್ನೂರು ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.