LOCAL EXPRESS: “ಗಂಗಾವತಿ| ನವಬೃಂದಾವನದಲ್ಲಿ ‘ನಿರ್ಮಲ ತುಂಗಭದ್ರಾ’ ಪಾದಯಾತ್ರೆ ಕರಪತ್ರ ಬಿಡುಗಡೆ”

By admin

“ಗಂಗಾವತಿ|ನವಬೃಂದಾವನದಲ್ಲಿ ‘ನಿರ್ಮಲ ತುಂಗಭದ್ರಾ’ ಪಾದಯಾತ್ರೆ ಕರಪತ್ರ ಬಿಡುಗಡೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗಂಗಾವತಿ :

ಇಲ್ಲಿನ ಆನೆಗುಂದಿಯ ನವಬೃಂದಾವನದಲ್ಲಿ ನಡೆದ ಸಮಾರಂಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರು, ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನ ಬಾಳಗಾರು ಮಠದ ಪೀಠಾಧಿಪತಿ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ಮತ್ತು ಮುಳಬಾಗಿಲು ಶ್ರೀಪಾದರಾಜ ಮಠದ ಪೀಠಾಧಿಪತಿ ಶ್ರೀ ಸುಜಯನಿಧಿತೀರ್ಥರು ಡಿಸೆಂಬರ್‌ನಲ್ಲಿ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ನಡೆಯುವ ‘ನಿರ್ಮಲ ತುಂಗಭದ್ರಾ’ ಅಭಿಯಾನದ 3ನೇ ಹಂತದ ಜಲಜಾಗೃತಿ–ಜನಜಾಗೃತಿ ಪಾದಯಾತ್ರೆಯ ಕರಪತ್ರ, ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಮಂತ್ರಾಲಯ ಶ್ರೀಗಳು “ನಿರ್ಮಲ ತುಂಗಭದ್ರ ಅಭಿಯಾನ ಅತ್ಯಂತ ಉಪಯುಕ್ತ ಮತ್ತು ಮಹತ್ತರ ಕಾರ್ಯ. ಜಲ ಜಾಗೃತಿ ಪಾದಯಾತ್ರೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಎಲ್ಲರೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ನದಿಗಳ ಉಳಿವಿಗೆ ಶ್ರಮಿಸಬೇಕು” ಎಂದು ಹೇಳಿದರು.

ಕರಪತ್ರ ಮತ್ತು ಪೋಸ್ಟರ್ ಬಿಡುಗಡೆಗೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಬಸವರಾಜ ಪಾಟೀಲ್ ವೀರಾಪೂರ್ ಸೇರಿದಂತೆ ಶ್ರೀ ಮಾಧವನ್, ಬಾಲಕೃಷ್ಣ ನಾಯ್ಡು, ಲೋಕೇಶ್ವರಪ್ಪ, ಶ್ರೀಮತಿ ಲಲಿತಾರಾಣಿ, ಸಂತೋಷ ಕೆಲೋಜಿ, ಗುಂಡೂರ್ ಪವನ್ ಕುಮಾರ್ ಹಾಗೂ ಸಂಚಾಲಕರಾದ ಡಾ. ಶಿವಕುಮಾರ್ ಮಾಲಿಪಾಟೀಲ, ವಿಷ್ಣು ತೀರ್ಥ ಜೋಶಿ, ನಾಗರಾಜ ಗುತ್ತೇದಾರ ಮತ್ತು ಅನೇಕರು ಸಂತಸ ವ್ಯಕ್ತಪಡಿಸಿದರು.