LOCAL EXPRESS: “ಶಹಾಪುರ|ನ. 26 ರಂದು ಐವರು ಸಾಧಕರಿಗೆ ‘ಅಪ್ಪ ಪ್ರಶಸ್ತಿ’ ಪ್ರದಾನ”

By admin

“ಶಹಾಪುರ|ನ. 26 ರಂದು ಐವರು ಸಾಧಕರಿಗೆ ‘ಅಪ್ಪ ಪ್ರಶಸ್ತಿ’ ಪ್ರದಾನ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಶಹಾಪುರ:

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ದಿ|| ಯಂಕೋಬ ದೊರೆ ಸ್ಮರಣಾರ್ಥ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ‘ಅಪ್ಪ ಪ್ರಶಸ್ತಿ’ಗೆ ಐವರು ಸಾಧಕರು ಆಯ್ಕೆಯಾಗಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕರು ಹಾಗೂ ಟ್ರಸ್ಟ್ ಅಧ್ಯಕ್ಷ ಕು. ಬಸವರಾಜ ವನದುರ್ಗ ಅವರು ತಿಳಿಸಿದ್ದಾರೆ.

 ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು , ಪತ್ರಿಕೋದ್ಯಮ ಕ್ಷೇತ್ರದಲ್ಲಿ (ಲಕ್ಷ್ಮೀಕಾಂತ ನಾಯಕ ಕೊಳ್ಳೂರು), ರಾಜಕೀಯ ಕ್ಷೇತ್ರದಲ್ಲಿ (ಮೌನೇಶ ನಾಟೇಕಾರ ಶಹಾಪುರ), ಸಾಹಿತ್ಯ ಕ್ಷೇತ್ರದಲ್ಲಿ (ನಾಗೇಶ ಜೆ. ನಾಯಕ ಸವದತ್ತಿ), ರೈತ ಪರ ಹೋರಾಟಗಾರ (ಮಹೇಶಗೌಡ ಎಂ. ಸುಬೇದಾರ ಸಗರ) ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಈರಪ್ಪ ಎಸ್. ಆಲ್ದಾಳ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ನ. 26ರಂದು ಶಹಾಪುರ ನಗರದ ಶುಭಶ್ರೀ ಹೋಟೆಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‘ಅಪ್ಪ ಪ್ರಶಸ್ತಿ’ ಪ್ರದಾನ, ಸಂಚಾಲಕರಾದ ಕು. ಬಸವರಾಜ ವನದುರ್ಗ ಅವರ ಸ್ವರಚಿತ ‘ಕೆಂಪು ಬಸ್ಸಿನ ಸುಂದ್ರಿ’ ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.

ಈ ಸಂದರ್ಭದಲ್ಲಿ ತಮ್ಮ ತಂದೆಯವರಾದ ದಿ|| ಯಂಕೋಬ ದೊರೆ ಮುಡಬೂಳ ಅವರ ಸ್ಮರಣಾರ್ಥವಾಗಿ ಸಾಧಕರಿಗೆ ‘ಅಪ್ಪ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆ ಮೂಲಕ  ತಿಳಿಸಿದ್ದಾರೆ.