“ಸುರುಪುರ|ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಠಲ್ ಯಾದವ ಅವರಿಗೆ ಗೌರವ ಸನ್ಮಾನ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಸುರಪುರ:
ಯಾದಗಿರಿ ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟವು ನೂತನವಾಗಿ ಆಯ್ಕೆಯಾದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಿಠಲ್ ಯಾದವ ಅವರನ್ನು ಗೌರವ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪೂರು ನೇತೃತ್ವದಲ್ಲಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಠಲ್ ಯಾದವ ಅವರು “ಈ ಭಾಗದ ರೈತರು ಮತ್ತು ಸಹಕಾರಿ ಸಂಘಗಳಿಗೆ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸುವುದು ನಮ್ಮ ಗುರಿ. ಸಹಕಾರ ಸಂಘಗಳ ಬೆಳವಣಿಗೆಗೆ ಒಕ್ಕೂಟದ ಮೂಲಕ ಶಕ್ತಿಶಾಲಿ ಸಹಕಾರ ನೀಡುವುದು ನಮ್ಮ ಉದ್ದೇಶ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬಹುಮುಖ್ಯ” ಎಂದು ಹೇಳಿದರು.
ಈ ವೇಳೆ ಯಾದಗಿರಿ ಯೂನಿಯನ್ ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ, ನಿರ್ದೇಶಕರು ಕೆಂಚಪ್ಪ ನಗನೂರು, ಶಾಂತಗೌಡ ಸಾಧ್ಯಪುರ, ಪ್ರಕಾಶ ಅಂಗಡಿ, ಕನ್ನಳಿ ಮಲ್ಲಿಕಾರ್ಜುನ, ಸ್ವಾಮಿ ಕೌಳೂರ, ರಾಜು ಗೂನಾಲ್, ಬಸವರಾಜ ಶಿವರುದ್ರಪ್ಪ ಹಾಗೂ ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.