🚌 CRIME NEWS:“ಬಾಗಲಕೋಟೆ|ಬಸ್‌ನಲ್ಲಿ 40 ಗ್ರಾಂ ಮಾಂಗಲ್ಯ ಕಳವು ಶಂಕೆ:ಪ್ರಯಾಣಿಕರ ಸಮೇತ ಬಸ್ ನೇರವಾಗಿ ಪೊಲೀಸ್ ಠಾಣೆಗೆ! ಬ್ಯಾಗ್‌ಗಳ ಪರಿಶೀಲನೆ!
• ಸೆಕ್ಯುಲರ್ ವಾಯ್ಸ್ ಡೆಸ್ಕ ನ್ಯೂಸ್ :
ಇಳಕಲ್ ಬಸ್ ನಿಲ್ದಾಣದಲ್ಲಿ ಸಿಂದಗಿ–ಬ್ಯಾಡಗಿ ಬಸ್ ಹತ್ತುವ ವೇಳೆ ಮಹಿಳೆಯ ಬ್ಯಾಗಿನಿಂದ 40 ಗ್ರಾಂ ಬಂಗಾರದ ಮಾಂಗಲ್ಯ ಸರ ಕಳವಾಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಬಾಗಲಕೋಟೆ ತಾಲೂಕಿನ ಮಲ್ಲಾಪೂರ ಗ್ರಾಮದ ಬಸಮ್ಮ ರಾಜನಾಳ ಅವರು ಗಜೇಂದ್ರಗಡಕ್ಕೆ ತೆರಳಲು ಬಸ್ ಹತ್ತುವಾಗ, ಅಪರಿಚಿತರು ಅವರ ಬ್ಯಾಗಿನ ಜಿಪ್‌ನ್ನುತೆಗೆದು ಚಿನ್ನವನ್ನು ಎಗರಿಸಿದ್ದಾರೆ. ಬಸ್‌ನಲ್ಲಿ ಕುಳಿತ ಕೆಲವೇ ಕ್ಷಣದಲ್ಲಿ ಸಂಬಂಧಿಕರು ಜಿಪ್ ತೆರೆದಿರುವುದನ್ನು ಗಮನಿಸಿದ ನಂತರ ಮಹಿಳೆ ಬ್ಯಾಗ್ ಪರಿಶೀಲಿಸಿದಾಗ ಚಿನ್ನ ಕಾಣಿಸದೇ ಆತಂಕಗೊಂಡರು.
ಘಟನೆಯ ಬಳಿಕ ಬಸ್ ಸಿಬ್ಬಂದಿ ಬಸ್ ಹಾಗೂ ಎಲ್ಲ ಪ್ರಯಾಣಿಕರನ್ನೂ ಸಮೇತವಾಗಿ ನೇರವಾಗಿ ಇಳಕಲ್ ಶಹರ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.
ಅಲ್ಲಿ ಪ್ರತಿಯೊಬ್ಬ ಪ್ರಯಾಣಿಕರನ್ನೂ ಪ್ರತ್ಯೇಕವಾಗಿ ಚೆಕ್ಕಿಂಗ್ ಮಾಡಿ, ಅವರ ಬ್ಯಾಗ್ ಹಾಗೂ ಸಾಮಾನುಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು. ಆದರೂ ಕಳವಾದ ಮಾಂಗಲ್ಯ ಪತ್ತೆಯಾಗಿಲ್ಲ.
ಇಳಕಲ್ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.