FLASH NEWS : “ನವದೆಹಲಿ|ಟಿಕೆಟ್ ರದ್ದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರಯಾಣಿಕರಿಗೆ  ಇಂಡಿಗೋ ಸಂಸ್ಥೆ ₹10ಸಾವಿರ ಪ್ರಯಾಣ ಗಿಫ್ಟ್ ವೋಚರ್”

By admin

 FLASH NEWS : “ನವದೆಹಲಿ|ಟಿಕೆಟ್ ರದ್ದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರಯಾಣಿಕರಿಗೆ  ಇಂಡಿಗೋ ಸಂಸ್ಥೆ ₹10ಸಾವಿರ ಪ್ರಯಾಣ ಗಿಫ್ಟ್ ವೋಚರ್”

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :

ನವದೆಹಲಿ, ಡಿ.12:  ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ವಿಮಾನ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದ ಪರಿಣಾಮ ಅನೇಕ ಪ್ರಯಾಣಿಕರ ವಿಮಾನ ಟಿಕೆಟ್‌ಗಳು ರದ್ದುಪಡಿಸಲ್ಪಟ್ಟಿದ್ದವು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಪರಿಹಾರದ ಕೈ ಚಾಚಿದೆ.

ಇತ್ತೀಚೆಗೆ ಉಂಟಾದ ತಾಂತ್ರಿಕ ಮತ್ತು ಕಾರ್ಯನಿರ್ವಹಣಾ ಸಮಸ್ಯೆಗಳ ಹಿನ್ನೆಲೆಯಲ್ಲಿ ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಪರಿಹಾರವಾಗಿ ಸಂಸ್ಥೆ ₹10,000 ಮೌಲ್ಯದ ‘ಗಿಫ್ಟ್ ವೌಚರ್’ ಅನ್ನು ನೀಡಲು ನಿರ್ಧರಿಸಿದೆ. ಈ ಕುರಿತು ಇಂಡಿಗೋ ಪ್ರಕಟಣೆ ಹೊರಡಿಸಿದ್ದು, ಡಿ. 3, 4, 5ರಂದು ರದ್ದಾದ ವಿಮಾನಗಳ ಪ್ರಯಾಣಿಕರು ಈ ಯೋಜನೆಗೆ ಅರ್ಹರಾಗಿರುವುದು ತಿಳಿಸಿದೆ.

ಸಂಸ್ಥೆಯ ಪ್ರಕಾರ, ಪಡೆಯಲಿರುವ ₹10,000 ಮೌಲ್ಯದ ಗಿಫ್ಟ್ ವೌಚರ್‌ನನ್ನು ಮುಂದಿನ 12 ತಿಂಗಳ ಒಳಗಾಗಿ ಯಾವುದೇ ಇಂಡಿಗೋ ವಿಮಾನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು. ಪ್ರಯಾಣಿಕರ ಅಸೌಕರ್ಯಕ್ಕೆ ಮನವಿ ವ್ಯಕ್ತಪಡಿಸಿರುವ ಸಂಸ್ಥೆ, ಭವಿಷ್ಯದಲ್ಲಿ ಇಂತಹ ತೊಂದರೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.