🔥BREKING NEWS : “ಬೆಂಗಳೂರು| ಇಂಡಿಗೋ ವಿಮಾನ ಗೊಂದಲಕ್ಕೆ ಪ್ರಯಾಣಿಕರ ಆಕ್ರೋಶ: ಇಂಡಿಗೋ ಸಂಸ್ಥೆಯು 9.55 ಲಕ್ಷ ಟಿಕೆಟ್‌ಗಳಿಗೆ ₹827 ಕೋಟಿ ಮರುಪಾವತಿ”
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಬೆಂಗಳೂರು: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ (IndiGo)ಯಲ್ಲಿ ಕಳೆದ ಒಂದು ವಾರದಿಂದ ಮುಂದುವರಿದಿರುವ ಕಾರ್ಯಾಚರಣಾ ಅವ್ಯವಸ್ಥೆ ಸೋಮವಾರವೂ ಕಡಿಮೆಯಾಗದೆ, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಕಷ್ಟ ಗರಿಷ್ಠ ಮಟ್ಟ ತಲುಪಿದೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಅನೇಕ ನಗರಗಳಲ್ಲಿ ವಿಮಾನಗಳ ರದ್ದು–ವಿಳಂಬದಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಸಿಬ್ಬಂದಿ ಕೊರತೆ–ನಿರ್ವಹಣಾ ವೈಫಲ್ಯ
ಪೈಲಟ್‌ಗಳು ಮತ್ತು ಕೆಬಿನ್ ಸಿಬ್ಬಂದಿಗಳ ಕೊರತೆ, ಹೊಸ Flight Duty Time Limitation (FDTL) ನಿಯಮಗಳನ್ನು ಸರಿಯಾಗಿ ಜಾರಿಗೊಳಿಸದಿರುವುದು ಬಿಕ್ಕಟ್ಟಿಗೆ ಪ್ರಮುಖ ಕಾರಣವೆಂದು ಮೂಲಗಳು ತಿಳಿಸಿವೆ. ಪೂರ್ವ ಸೂಚನೆ ನೀಡದೆ ಅನೇಕ ವಿಮಾನಗಳನ್ನು ರದ್ದುಪಡಿಸಿರುವುದು ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಗೊಂದಲ–ಪ್ರಯಾಣಿಕರ ಅಸಮಾಧಾನ ತೀವ್ರ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಇಂಡಿಗೋ ಸಿಬ್ಬಂದಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೀರ್ಘ ಸಾಲು, ಗಂಟೆಗಳ ಕಾಯುವಿಕೆ, ಆಹಾರ–ನೀರು ಸೌಲಭ್ಯಗಳ ಅಭಾವಕ್ಕೆ ಹಲವು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಸ್ಥಳಗಳಲ್ಲಿ ವಾಗ್ವಾದ, ಗದ್ದಲದ ಘಟನೆಗಳೂ ದಾಖಲಾಗಿವೆ.
ಕೆಲವು ಸ್ಥಳಗಳಲ್ಲಿ ವಾಗ್ವಾದ, ಗದ್ದಲದ ಘಟನೆಗಳೂ ದಾಖಲಾಗಿವೆ.


