🚨ACCIDENT NEWS : “ಗಂಗಾವತಿ |ಪ್ರೀ-ವೆಡ್ಡಿಂಗ್ ನಂತರ ವಾಪಸ್ ದಾರಿಯಲ್ಲಿ ಭೀಕರ ಅಪಘಾತ: ಜೋಡಿ ಸ್ಥಳದಲ್ಲೇ ಸಾವು”

By admin

🚨ACCIDENT NEWS : “ಗಂಗಾವತಿ |ಪ್ರೀ-ವೆಡ್ಡಿಂಗ್ ನಂತರ ವಾಪಸ್ ದಾರಿಯಲ್ಲಿ ಭೀಕರ ಅಪಘಾತ: ಜೋಡಿ ಸ್ಥಳದಲ್ಲೇ ಸಾವು”

•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗಂಗಾವತಿ : 

ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಜೋಡಿ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಡಿ-7ರ ರಾತ್ರಿ ನಡೆದಿದೆ.

ಕೊಪ್ಪಳ ತಾಲೂಕಿನ ಹನಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳ (26) ಹಾಗೂ ಕಾರಟಗಿ ತಾಲೂಕಿನ ಕವಿತಾ ಪವಾಡೆಪ್ಪ ಮಡಿವಾಳ (19) ಮೃತರು ಎಂದು ಗುರುತಿಸಲಾಗಿದೆ. ಇದೇ ಡಿ-21ರಂದು ಇವರ ವಿವಾಹ ನಿಗದಿಯಾಗಿದ್ದು, ಭಾನುವಾರ ಇಬ್ಬರೂ ಬೆಣಕಲ್ ಪ್ರದೇಶಕ್ಕೆ ಪ್ರೀ-ವೆಡ್ಡಿಂಗ್ ಶೂಟ್ಗೆ ತೆರಳಿದ್ದರು.

ಗಂಗಾವತಿ ತಾಲೂಕಿನ ಬೆಣಕಲ್ ಗುಡ್ಡ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುವ ವೇಳೆ, ಬೆಣಕಲ್–ಗಾಳೆಮ್ಮಗುಡಿ ಟರ್ನಿಂಗ್ ಬಳಿ ವೇಗವಾಗಿ ಬಂದ ಟಿಪ್ಪರ್‌ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮದುವೆಗೆ ಕೇವಲ ಎರಡು ವಾರ ಬಾಕಿ ಇರುವಾಗಲೇ ಈ ದುರಂತ ಸಂಭವಿಸಿದ್ದು, ಹೊಸ ಬದುಕಿನ ಕನಸು ಕಂಡಿದ್ದ ಜೋಡಿ ಸ್ಥಳದಲ್ಲೇ ಅಂತಿಮ ಶ್ವಾಸ ಬಿಟ್ಟಿದ್ದಾರೆ. ಗಂಗಾವತಿ ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ ಮಡಿಲು ಮುಟ್ಟುವಂತಿತ್ತು.