“ಗಂಗಾವತಿ| ಎಬಿವಿಪಿ ಉತ್ತರ ರಾಜ್ಯ ಕಾರ್ಯಕಾರಿಣಿ ಸಭೆ ಯಶಸ್ವಿ: ಖಾಲಿ ಹುದ್ದೆ ಭರ್ತಿ ಮಾಡಬೇಕು–ಸಚಿನ್ ಕುಳಗೇರಿ ಒತ್ತಾಯ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಗಂಗಾವತಿ:
ರಾಜ್ಯ ಸರಕಾರದ ಅಸಮರ್ಪಕ ನಿರ್ವಹಣೆ ಮತ್ತು ಆರ್ಥಿಕ ಸಹಕಾರದ ಕೊರತೆಯಿಂದ ರಾಜ್ಯದ ಸರ್ಕಾರಿ ಶಾಲೆಗಳು, ಕಾಲೇಜುಗಳು ಗಂಭೀರ ಸ್ಥಿತಿಗೆ ತಲುಪಿವೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ದುಬಾರಿ ಶುಲ್ಕ, ಸ್ಕಾಲರ್‌ಶಿಪ್ ವಿಳಂಬ, ಹಾಸ್ಟೇಲ್ ಕಿಟ್ ತಲುಪದಿಕೆ ಕಾರಣದಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ದಟ್ಟ ಪೀಡನೆ ಆಗುತ್ತಿದೆ ಎಂದು ಹೇಳಿದರು. “ಸರ್ಕಾರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ರಾಜ್ಯದ ಶಾಲಾ-ಕಾಲೇಜುಗಳ ಪರಿಸ್ಥಿತಿ ಹದಗೆಟ್ಟಿದ್ದು, ಸಿಬ್ಬಂದಿ ಕಡಿಮೆ, ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ಸಹಾಯ ಯೋಜನೆಗಳು ತಲುಪುತ್ತಿಲ್ಲ,” ಎಂದು ಅವರು ಟೀಕೆ ಮಾಡಿದರು.
ಅವರು ಇನ್ನೂ ಹೇಳಿದರು, “ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಅವೈಜ್ಞಾನಿಕ ಪರೀಕ್ಷಾ ಕ್ರಮ, ಕಳಪೆ ನಿರ್ವಹಣೆ ಕಾರಣ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಏಕರೂಪ ಪರೀಕ್ಷಾ ಮಾದರಿಯಲ್ಲಿ ಒತ್ತಡ ಬೀಳುತ್ತಿದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದರು.”
ಎಬಿವಿಪಿ ಉತ್ತರ ರಾಜ್ಯ ಕಾರ್ಯಕಾರಿಣಿ ಸಭೆ ಗಂಗಾವತಿಯಲ್ಲಿ ನವೆಂಬರ್ 15–16 ರಂದು ಯಶಸ್ವಿಯಾಗಿ ಜರುಗಿದ್ದು, ರಾಜ್ಯದ 86 ಪ್ರತಿನಿಧಿಗಳು ಪಾಲ್ಗೊಂಡರು. ರಾಜ್ಯದಲ್ಲಿ ಒಟ್ಟು 2,73,812 ಸದಸ್ಯರೊಂದಿಗೆ, 118 ಶಾಖೆಗಳು, 182 ಸಂಪರ್ಕ ಸ್ಥಳಗಳು, 446 ಕಾಲೇಜು ಕಮಿಟಿಗಳು ಮತ್ತು 78 ಹಾಸ್ಟೇಲ್ ಸಮಿತಿಗಳ ಮೂಲಕ ಎಬಿವಿಪಿ ಕಾರ್ಯಚಟುವಟಿಕೆ ನಡೆಯುತ್ತಿದೆ ಎಂದು ಸಚಿನ್ ಕುಳಗೇರಿ ವಿವರಿಸಿದರು.
ಸಭೆಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳಾದ ಅಭಿಷೇಕ್, ಹಿರೇಮಠ ಕಿರಣ್ ವಸ್ತ್ಚದ್, ಶ್ರೇಯಾ ಉಪಸ್ಥಿತರಿದ್ದರು.