LOCAL EXPRESS: “ಕೊಪ್ಪಳ|ಮಹಿಳೆಯ ಮೇಲೆ  ಲೈಂಗಿಕ ದೌರ್ಜನ್ಯ : ಎಐಎಂಎಸ್‌ಎಸ್‌ ತೀವ್ರ ಖಂಡನೆ! ತ್ವರಿತ ನ್ಯಾಯಕ್ಕೆ ಆಗ್ರಹ”

By admin

“ಕೊಪ್ಪಳ|ಮಹಿಳೆಯ ಮೇಲೆ  ಲೈಂಗಿಕ ದೌರ್ಜನ್ಯ : ಎಐಎಂಎಸ್‌ ಎಸ್‌ ತೀವ್ರ ಖಂಡನೆ, ತ್ವರಿತ ನ್ಯಾಯಕ್ಕೆ ಆಗ್ರಹ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ಇತ್ತೀಚೆಗೆ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಘಟನೆಯು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ಜಿಲ್ಲಾ ಸಮಿತಿ ಯಿಂದ ತೀವ್ರವಾಗಿ ಖಂಡಿಸುತ್ತದೆ.   ಈ ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿ, ತ್ವರಿತ ತನಿಖೆ ನಡೆಸಿ, ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದೆ.

 ಈ ಕುರಿತು  ಮಂಗಳವಾರ  ಸೆಕ್ಯುಲರ್‌ ವಾಯ್ಸ್‌ ಡಿಜಿಟಲ್‌ ಮಾಧ್ಯಮದೊಂದಿಗೆ ಎಐಎಂಎಸ್‌ ಎಸ್‌ ನ ಜಿಲ್ಲಾ ಸಂಚಾಲಕಿ ಶಾರದಾ ಗಡ್ಡಿ  ಅವರು  ಮಾತನಾಡಿ ,ಆರು ತಿಂಗಳ ಹಿಂದೆ ಪರಿಚಿತನಾಗಿದ್ದ ಆರೋಪಿ ಸಾಲ ಹಿಂದಿರುಗಿಸುವ ನೆಪದಲ್ಲಿ ಮಹಿಳೆಯನ್ನು ಕರೆಸಿ, ಕುಷ್ಟಗಿ–ಯಲಬುರ್ಗಾ ರಸ್ತೆಯ ಮದ್ಲೂರ ಸಮೀಪದ ಹೊಲದ ಪಾಳುಬಿದ್ದ ಮನೆಗೆ ಕರೆದುಕೊಂಡು ಹೋಗಿ, ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಜ್ಯೂಸ್ ನಂಬಿಸಿ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ನಾಲ್ಕು ಜನ ಆರೋಪಿಗಳು  ಈಗಾಗಲೇ ಬಂಧಿತರಾಗಿದ್ದಾರೆ. ಅವರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.

“ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯಗಳ ವಿರುದ್ಧ ಸರ್ಕಾರಗಳು ಸಂಕಷ್ಟಕಾರಿ ಕ್ರಮ ಕೈಗೊಳ್ಳದಿರುವುದು ಘಟನಾವಳಿಗಳನ್ನು ಹೆಚ್ಚಿಸುತ್ತಿದೆ. ಸಮಾಜದಲ್ಲಿ ಮೌಲ್ಯ ಕುಸಿತ, ಅಶ್ಲೀಲ ಚಿತ್ರ-ಸಾಹಿತ್ಯ, ಪೋರ್ನ್ ವೆಬ್ಸೈಟ್ ಮತ್ತು ಮದ್ಯವಸ್ತುಗಳು ಯುವಕರನ್ನು ವಿಕೃತ ಕೃತ್ಯಗಳಿಗೆ ಪ್ರೇರೇಪಿಸುತ್ತಿವೆ. ಈ ದುರ್ಬಲತೆಯ ವಿರುದ್ಧ ಜನತೆ ಒಗ್ಗಟ್ಟಾಗಿ ಹೋರಾಟ ಕಟ್ಟಬೇಕು.”ಎಂದು AIMSS  ಜಿಲ್ಲಾ ಸಂಚಾಲಕಿ ಶಾರದಾ ಗಡ್ಡಿ  ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.