DEATH NEWS :”ಗಂಗಾವತಿ| ಕಾರ್ಮಿಕ ನಾಯಕ ಎಸ್.ಎ.ಹೆಚ್.ಮೆಹೆರ್ ಪಾಶ ನಿಧನ”

By admin

“ಗಂಗಾವತಿಯ ಕಾರ್ಮಿಕ ನಾಯಕ ಎಸ್.ಎ.ಹೆಚ್.ಮೆಹೆರ್ ಪಾಶ ನಿಧನ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗಂಗಾವತಿ:

ಗಂಗಾವತಿಇಲ್ಲಿನ ಅಮರ್ ಭಗತ್ ಸಿಂಗ್ ನಗರಕ್ಕೆ ನಾಮಕರಣ ಮಾಡಲು ಕಾರಣಿಕರ್ತರಾದ ಎಸ್.ಎ.ಹೆಚ್.ಮೆಹೆರ್ ಪಾಶ ಅವರು ಗುರುವಾರ  ಮಧ್ಯಾಹ್ನ 2:30ಕ್ಕೆ ಅಂಬೇಡ್ಕರ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರ ನಿಧನದಿಂದ ಗಂಗಾವತಿ ನಗರ ರಾಜಕೀಯ, ಸಾಮಾಜಿಕ ವಲಯವು ಒಬ್ಬ ಸಕ್ರಿಯ ನಾಯಕನನ್ನು ಕಳೆದುಕೊಂಡಿದೆ. ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ.

ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 12:30ಕ್ಕೆ ಬೇರೊನಿ ಆಬಾದಿ ಮಸೀದಿಯ ಮುಸ್ಲಿಂ ಖಬರಸ್ಥಾನದಲ್ಲಿ ನೆರವೇರಲಿದೆ ಎಂದು ತಿಳಿಸಲಾಗಿದೆ.

ಮೃತರ ಆತ್ಮಕ್ಕೆ ಶಾಂತಿ ಕೋರಲು ಅವರ ಆತ್ಮೀಯರು, ಬಂಧುಗಳು, ಮಿತ್ರರು ಹಾಗೂ ಸಾರ್ವಜನಿಕರು  ಭಾಗವಹಿಸಬೇಕೆಂದು ಕುಟುಂಬಸ್ಥರು ವಿನಂತಿಸಿದ್ದಾರೆ.