LOCAL NEWS : “ಬೀದರ|ಗ್ರಾ.ಪಂ. ಸದಸ್ಯರ ಬೇಡಿಕೆ ಈಡೇರಿಕೆಗೆ ಒತ್ತಾಯ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಬೀದರ್ :
ಗ್ರಾಪಂ.ನ 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಸಾಮಗ್ರಿ ವೆಚ್ಚ ಬಿಡುಗಡೆ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಬೆಳಗಾವಿಯ ಸುವರ್ಣ ಸೌಧದ ಆವರಣದಲ್ಲಿ ಮಂಗಳವಾರ ಕರ್ನಾಟಕ ಗ್ರಾಪಂ. ಸದಸ್ಯರ ಮಹಾಒಕ್ಕೂಟದ ವತಿಯಿಂದ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬರೆದ ಮನವಿ ಪತ್ರವನ್ನು ವಿಧಾನ ಪರಿಷತ ಶಾಸಕ ಭೀಮರಾವ ಪಾಟೀಲ್ ಅವರಿಗೆ ಸಲ್ಲಿಸಿದರು.
ಬಳಿಕ ಕರ್ನಾಟಕ ಗ್ರಾಪಂ. ಸದಸ್ಯರ ಒಕ್ಕೂಟದ ಕೆಲ ಪದಾಧಿಕಾರಿಗಳು ಮಾತನಾಡಿ, 15ನೇ ಹಣಕಾಸಿನ ಹಾಗೂ ಉದ್ಯೋಗ ಖಾತ್ರಿಯ ಅನುದಾನ ಸೇರಿ ಸಾಮಗ್ರಿಗಳ ವೆಚ್ಚ ಬಿಡುಗಡೆ ಮಾಡದಿರುವ ಕಾರಣ ಗ್ರಾಪಂ.ಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗಳ್ಳುತ್ತಿವೆ. ಹೀಗಾಗಿ ಶೀಘ್ರವಾಗಿ ಗ್ರಾಪಂ. ಸದಸ್ಯರ ಎಲ್ಲ ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ ಶಾಸಕ ಭೀಮರಾವ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದ ಹಳ್ಳಿಗಳ ಸಮಗ್ರ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ. ಹೀಗಾಗಿ ಸಂಬಂದಿಸಿದ ಇಲಾಖೆ ಸಚಿವರ ಜತೆಯಲ್ಲಿ ಸಮಾಲೋಚನೆ ನಡೆಸಿ, ಶೀಘ್ರದಲ್ಲೇ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ ಶಾಸಕ ಪ್ರದೀಪ ಶಟ್ಟರ್ ಸೇರಿ ಕರ್ನಾಟಕ ಗ್ರಾಪಂ. ಸದಸ್ಯರ ಮಹಾಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು