🔥PROTEST NEWS :”ಕಲಬುರ್ಗಿ|MGNREGA ಹಕ್ಕು ಕಸಿದುಕೊಳ್ಳುವ ಮಸೂದೆಗೆ ಭಾರೀ ಆಕ್ರೋಶ: ಎಡಪಕ್ಷಗಳಿಂದ ದೇಶವ್ಯಾಪಿ ಹೋರಾಟ”

By admin

🛑 PROTEST NEWS : “ಕಲಬುರಗಿ | ಮನರೇಗಾ  ದುರ್ಬಲಗೊಳಿಸುವ  ಮಸೂದೆ ವಿರೋಧಿಸಿ : ಎಡಪಕ್ಷಗಳಿಂದ ಬೃಹತ್‌ ಪ್ರತಿಭಟನೆ.!”

Contents
🛑 PROTEST NEWS : “ಕಲಬುರಗಿ | ಮನರೇಗಾ  ದುರ್ಬಲಗೊಳಿಸುವ  ಮಸೂದೆ ವಿರೋಧಿಸಿ : ಎಡಪಕ್ಷಗಳಿಂದ ಬೃಹತ್‌ ಪ್ರತಿಭಟನೆ.!”• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಕಲಬುರಗಿ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA)ಯ ಮೂಲ ಸ್ವರೂಪವನ್ನೇ ಬದಲಾಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಕ್ಷಿತ್ ಭಾರತ್–ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)–2025 (VB G-RAM-G) ಮಸೂದೆ ತರಲು ಮುಂದಾಗಿರುವುದನ್ನು ಖಂಡಿಸಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಸಿ) ಪಕ್ಷಗಳು ಸೋಮವಾರ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ನಗರದಲ್ಲಿ ಜಂಟಿ ಪ್ರತಿಭಟನೆ ನಡೆಸಿವೆ.ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.ನರೆಗಾ  ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗದ ಕಾನೂನುಬದ್ಧ ಹಕ್ಕು ನೀಡುವ ಯೋಜನೆಯಾಗಿದ್ದು, ಹೊಸ ಮಸೂದೆ ಮೂಲಕ ಆ ಹಕ್ಕನ್ನೇ ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಉದ್ಯೋಗ ಕಾರ್ಡ್‌ಗಳ ತರ್ಕಬದ್ಧಗೊಳಿಸುವಿಕೆ, ಕಡ್ಡಾಯ ಡಿಜಿಟಲ್ ಹಾಜರಾತಿ ಮತ್ತು ಹಣಕಾಸಿನ ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹಾಕುವ ಕ್ರಮಗಳು ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ಎಂದು ಟೀಕಿಸಲಾಯಿತು.ನರೇಗಾ  ಹೆಸರನ್ನು ಬದಲಿಸಿ ಮಹಾತ್ಮ ಗಾಂಧಿಯ ಪರಂಪರೆಯನ್ನು ಮರೆಸುವ ಬಿಜೆಪಿ–ಆರ್‌ಎಸ್‌ಎಸ್ ಅಜೆಂಡಾವನ್ನು ದೇಶ ಒಪ್ಪುವುದಿಲ್ಲ. VB G-RAM-G ಮಸೂದೆಯನ್ನು ತಕ್ಷಣ ಹಿಂತೆಗೆದು ಯೋಜನೆಯನ್ನು ಸಾರ್ವತ್ರಿಕಗೊಳಿಸಿ ಕನಿಷ್ಠ 200 ದಿನಗಳ ಉದ್ಯೋಗ ಖಾತರಿಗಾಗಿ ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ  ಕಾರ್ಯದರ್ಶಿ ಕೆ. ನೀಲಾ, ಸಿಪಿಐ ಕಾರ್ಯದರ್ಶಿ ಪಕ್ಷದ  ಜಿಲ್ಲಾ ಕಾರ್ಯದರ್ಶಿ  ಮಹೇಶ್ಕುಮಾರ  ರಾಠೋಡ ಮತ್ತು ಎಸ್‌ಯುಸಿಐ(ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್‌. ಕೆ.ವೀರಭದ್ರಪ್ಪ ಅವರು ಮಾತನಾಡಿದರು.ಪ್ರತಿಭಟನೆಯಲ್ಲಿ ಮುಖಂಡರಾದ ವಿ.ಜಿ.ದೇಸಾಯಿ, ಎಸ್. ಎಂ. ಶರ್ಮಾ, ಮಹೇಶ್ ನಾಡಗೌಡ, ಮಹೇಶ್ ಎಸ್.ಬಿ., ಶಿವರಾಜ್ ಗಂಗಾಣಿ, ಶಿವರಾಜ್, ಈಶ್ವರ್, ವಿಶಾಲಾಕ್ಷಿ ಪಾಟೀಲ್, ವರುಣ್ ದೇಸಾಯಿ, ಸಂತೋಷ್ ಕುಮಾರ್ ಹಿರವೇ, ಶ್ರೀಮಂತ ಬಿರಾದಾರ್, ಸುಧಾಮ್ ಧನ್ನಿ, ಮೀನಾಕ್ಷಿ ಬಾಳಿ, ಲವಿತ್ರ ವಸ್ತ್ರದ್, ಭೀಮಾಶಂಕರ್ ಮಾಡಿಯಾಳ, ಮೌಲಾ ಮುಲ್ಲಾ, ಸೂರ್ಯಕಾಂತ ಸೊನ್ನದ್ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಕಲಬುರಗಿ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA)ಯ ಮೂಲ ಸ್ವರೂಪವನ್ನೇ ಬದಲಾಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಕ್ಷಿತ್ ಭಾರತ್–ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)–2025 (VB G-RAM-G) ಮಸೂದೆ ತರಲು ಮುಂದಾಗಿರುವುದನ್ನು ಖಂಡಿಸಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಸಿ) ಪಕ್ಷಗಳು ಸೋಮವಾರ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ನಗರದಲ್ಲಿ ಜಂಟಿ ಪ್ರತಿಭಟನೆ ನಡೆಸಿವೆ.

ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ನರೆಗಾ  ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗದ ಕಾನೂನುಬದ್ಧ ಹಕ್ಕು ನೀಡುವ ಯೋಜನೆಯಾಗಿದ್ದು, ಹೊಸ ಮಸೂದೆ ಮೂಲಕ ಆ ಹಕ್ಕನ್ನೇ ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಉದ್ಯೋಗ ಕಾರ್ಡ್‌ಗಳ ತರ್ಕಬದ್ಧಗೊಳಿಸುವಿಕೆ, ಕಡ್ಡಾಯ ಡಿಜಿಟಲ್ ಹಾಜರಾತಿ ಮತ್ತು ಹಣಕಾಸಿನ ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹಾಕುವ ಕ್ರಮಗಳು ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ಎಂದು ಟೀಕಿಸಲಾಯಿತು.

ನರೇಗಾ  ಹೆಸರನ್ನು ಬದಲಿಸಿ ಮಹಾತ್ಮ ಗಾಂಧಿಯ ಪರಂಪರೆಯನ್ನು ಮರೆಸುವ ಬಿಜೆಪಿ–ಆರ್‌ಎಸ್‌ಎಸ್ ಅಜೆಂಡಾವನ್ನು ದೇಶ ಒಪ್ಪುವುದಿಲ್ಲ. VB G-RAM-G ಮಸೂದೆಯನ್ನು ತಕ್ಷಣ ಹಿಂತೆಗೆದು ಯೋಜನೆಯನ್ನು ಸಾರ್ವತ್ರಿಕಗೊಳಿಸಿ ಕನಿಷ್ಠ 200 ದಿನಗಳ ಉದ್ಯೋಗ ಖಾತರಿಗಾಗಿ ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ  ಕಾರ್ಯದರ್ಶಿ ಕೆ. ನೀಲಾ, ಸಿಪಿಐ ಕಾರ್ಯದರ್ಶಿ ಪಕ್ಷದ  ಜಿಲ್ಲಾ ಕಾರ್ಯದರ್ಶಿ  ಮಹೇಶ್ಕುಮಾರ  ರಾಠೋಡ ಮತ್ತು ಎಸ್‌ಯುಸಿಐ(ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್‌. ಕೆ.ವೀರಭದ್ರಪ್ಪ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ವಿ.ಜಿ.ದೇಸಾಯಿ, ಎಸ್. ಎಂ. ಶರ್ಮಾ, ಮಹೇಶ್ ನಾಡಗೌಡ, ಮಹೇಶ್ ಎಸ್.ಬಿ., ಶಿವರಾಜ್ ಗಂಗಾಣಿ, ಶಿವರಾಜ್, ಈಶ್ವರ್, ವಿಶಾಲಾಕ್ಷಿ ಪಾಟೀಲ್, ವರುಣ್ ದೇಸಾಯಿ, ಸಂತೋಷ್ ಕುಮಾರ್ ಹಿರವೇ, ಶ್ರೀಮಂತ ಬಿರಾದಾರ್, ಸುಧಾಮ್ ಧನ್ನಿ, ಮೀನಾಕ್ಷಿ ಬಾಳಿ, ಲವಿತ್ರ ವಸ್ತ್ರದ್, ಭೀಮಾಶಂಕರ್ ಮಾಡಿಯಾಳ, ಮೌಲಾ ಮುಲ್ಲಾ, ಸೂರ್ಯಕಾಂತ ಸೊನ್ನದ್ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.