🔴FOLLOW UP BREAKING NEWS : “ಕೆಂಭಾವಿ |ಅರೆಬೆತ್ತಲಾಗಿ ಶಿಕ್ಷಕರ ನೀರಾಟ : ಭುಗಿಲೆದ್ದ ಆಕ್ರೋಶ!  ಸರ್ಕಾರಿ ಬಾಲಕಿಯರ ಶಾಲೆಗೆ ಬಿಇಒ ಭೇಟಿ.! | ತಪ್ಪಿಸ್ಥರ  ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪಾಲಕರು ಪ್ರತಿಭಟಿಸಿ  ಆಗ್ರಹ”

By admin

  ⚠️FOLLOW UP BREAKING NEWS : “ಕೆಂಭಾವಿ |ಅರೆಬೆತ್ತಲಾಗಿ ಶಿಕ್ಷಕರ ನೀರಾಟ : ಭುಗಿಲೆದ್ದ ಆಕ್ರೋಶ!  ಸರ್ಕಾರಿ ಬಾಲಕಿಯರ ಶಾಲೆಗೆ ಬಿಇಒ ಭೇಟಿ.! | ತಪ್ಪಿಸ್ಥರ  ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪಾಲಕರು ಪ್ರತಿಭಟಿಸಿ ಆಗ್ರಹ”

• ಸೆಕ್ಯುಲರ್ ವಾಯ್ಸ್ ನ್ಯೂಸ್ ಸುರಪುರ: 

ತಾಲೂಕಿನ ಕೆಂಭಾವಿ ಪಟ್ಟಣದ ಸರಕಾರಿ ಬಾಲಕಿಯರ (ಕನ್ಯಾ) ಪ್ರೌಢಶಾಲೆಯ ಶೈಕ್ಷಣಿಕ ಪ್ರವಾಸದ ವೇಳೆ ನಾಲ್ವರು ಶಿಕ್ಷಕರು ಆ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ನೀರಾಟವಾಡಿ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಪಾಲಕರು ಶಾಲಾ ಶಿಕ್ಷಕರ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

“ಸೆಕ್ಯುಲರ್ ವಾಯ್ಸ್” ಮಾಧ್ಯಮ ವರದಿ ಪ್ರಕಟಿಸಿದ ಪರಿಣಾಮ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಮೇಲಾಧಿಕಾರಿಗಳು ಶಾಲೆಗೆ ಭೇಟಿದ ಸಂದರ್ಭದಲ್ಲಿ ಪೋಷಕರ ಪ್ರತಿಭಟನೆ ಬಿಸಿ ಅನುಭವಿಸಿದರು.

ಕೂಡಲೇ ಈ ಎಲ್ಲ ಶಿಕ್ಷಕರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

• ಶಿಕ್ಷಕರಿಗೆ ಮುತ್ತಿಗೆ: ಪ್ರವಾಸದ ಸಂದÀರ್ಭದಲ್ಲಿ ವಿದ್ಯಾರ್ಥಿನಿಯರÀ ಜೊತೆಯಲ್ಲಿ ಜಲಕ್ರೀಡೆಯಾಡಿದ ಪೋಟೋ ಮತ್ತು ವಿಡಿಯೋಗಳನ್ನು ಕಂಡ ಪೋಷಕರು ಕನ್ಯಾಪ್ರೌಢ ಶಾಲೆಗೆ ತೆರಳಿ ಶಿಕ್ಷಕರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು,

• ಮಾತಿನ ಚಕಮಕಿ: ಮುತ್ತಿಗೆ ಸಂದರ್ಭದಲ್ಲಿ ಶಿಕ್ಷಕರು ಮತ್ತು ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು. ನಿಮ್ಮ ನಂಬಿದ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದೆ ಈ ರೀತಿಯಲ್ಲಿ ನಡೆದುಕೊಂಡಿದ್ದು, ತಪ್ಪಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಇಲ್ಲಿದ್ದ ಶಿಕ್ಷಕರೊಬ್ಬರು ಹೌದುಂ ತಪ್ಪಾಗಿದೆ ಕ್ಷಮಿಸಿ ಎಂದಷ್ಟೇ ಉತ್ತರಿಸಿದ ಮುಂದೆ ಸಾಗಿದರು.

• ಪೊಲೀಸರ ಭೇಟಿ: ಈ ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಂಭಾವಿ ಪೋಲಿಸ್ ಠಾಣೆಯ ಸಿಬ್ಬಂದಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

• ಕಠಿಣ ಕ್ರಮದ ಭರವಸೆ : ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ್ ಮಾತನಾಡಿ, ಈ ಘಟನೆ ಕುರಿತು ನನಗೆ ಸಮಗ್ರ ಮಾಹಿತಿ ಇದೆ. ಈ ವಿಷಯವನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಷಕರಿಕೆ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಪೋಷಕರು ಹಾಗೂ ನಾನಾ ಸಂಘಟನೆಗಳ ಮುಖಂಡರು ಇದ್ದರು.
———————————————–
“ಕೆಂಭಾವಿ ಸರಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಅತಿಥಿ ಶಿಕ್ಷಕರೊಬ್ಬರು ಜಲಕ್ರೀಡೆಯಲ್ಲಿ ತೊಡಗಿರುವುದು ಮಾಧ್ಯಮದಲ್ಲಿ ಮೊದಲು ಬಂದ ನಂತರ ಕ್ರಮಕ್ಕೆ ಬಿಇಒ ಅವರಿಗೆ ಸೂಚಿಸಲಾಗಿತ್ತು. ಆದರೆ ಬಳಿಕ ಮುಖ್ಯಶಿಕ್ಷಕರು ಸೇರಿ ಎಲ್ಲ ಶಿಕ್ಷಕರು ಸಹ ಈ ಜಲಕ್ರೀಡೆಯಲ್ಲಿ ತೊಡಗಿದ್ದಾರೆಂದು ಗೊತ್ತಾಗಿದೆ. ತಕ್ಷಣವೇ ಶಾಲೆಗೆ ಬಿಇಒ ಅವರನ್ನು ಕಳುಹಿಸಿಕೊಡಲಾಗಿತ್ತು. ಅವರಿಂದ ಸಮಗ್ರ ವರದಿ ಬಂದ ಕೂಡಲೇ ಕ್ರಮಕ್ಕಾಗಿ ಮಾನ್ಯ ಅಪಾರ ಆಯುಕ್ತರಿಗೆ ಸಲ್ಲಿಸುತ್ತೇನೆ, ನಮ್ಮ ವ್ಯಾಪ್ತಿಯಲ್ಲಿ ಸಹ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ಚನ್ನಬಸಪ್ಪ ಮುಧೋಳ, ಡಿಡಿಪಿಐ
——————————————–
“ವಿಷಯ ಗಮನಕ್ಕೆ ಬಂದಿಲ. ಕೆಂಭಾವಿ ಸುರಪುರ ತಾಲೂಕಿನಲ್ಲಿ ಬರುತ್ತದೆ. ಆದರೆ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಿರುವುದರಿಂದ ಕೆಂಭಾವಿಯ ಯಾವುದೇ ಸಮಸ್ಯೆ ಇದ್ದರು ಕೂಡಾ ಅಧಿಕಾರಿಗಳು ಮೊದಲು ಉಸ್ತುವಾರಿ ಸಚಿವರ ಗಮನಕ್ಕೆ ತರುತ್ತಾರೆ. ಶಿಕ್ಷಕರು ವಿದ್ಯಾರ್ಥಿನಿಯ ರೊಂದಿಗೆ ಅರೆ ಬೆತ್ತಲಾಗಿ ನೀರಾಟವಾಡಿರುವುದು ಸರಿಯಲ್ಲ. ಇದನ್ನು ನಾನು ಸಹ ಖಂಡಿಸುತ್ತೇನೆ. ತಪ್ಪು ಮಾಡಿದವರ ಮೇಲೆ ಶಿಸ್ತು ಕ್ರಮ ಆಗಬೇಕು”.
 -ರಾಜಾವೇಣುಗೋಪಾಲ ನಾಯಕ, ಶಾಸಕರು ಸುರಪುರ.
—————————————————-
“ಘಟನೆ ಕುರಿತು ಸೆಕ್ಯುಲರ್ ವಾಯ್ಸ್ ಪತ್ರಿಕೆಯಿಂದ ಸಮಗ್ರವಾಗಿ ವಿಷಯ ಗಮನಕ್ಕೆ ಬಂದಿದೆ. ಪತ್ರಿಕೆಗೆ ಮೊದಲು ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಹೈಸ್ಕೂಲ್ ಹುಡುಗಿರು ಅಂದ್ರೆ ಬಹುತೇಕ ಪ್ರಾಯಕ್ಕೆ ಬಂದಿರುತ್ತಾರೆ. ಶಿಕ್ಷಕರು ಈ ರೀತಿ ವಿದ್ಯಾರ್ಥಿನಿಯರೊಂದಿಗೆ ಅರೆ ಬೆತ್ತಲಾಗಿ ಈಜಾಡಿರುವುದು, ನೀರಿನ ಚೆಲ್ಲಾಟವಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಈ ಕುರಿತು ಶಿಕ್ಷಣ ಇಲಾಖೆ ತಪ್ಪು ಮಾಡಿವರ ಮೇಲೆ ಸೂಕ್ತ ಕಾನೂನು ಕ್ರಮ ಜರಿಗಸಬೇಕು. ಮುಂದೆ ಈಗಾಗದಂತೆ ಶಿಕ್ಷಣ ಇಲಾಖೆ ಎಚ್ಚ್ಚೆರಿಕೆ ಕ್ರಮ ಕೈ ಗೊಳ್ಳಬೇಕು”.
 -ನರಸಿಂಹ ನಾಯಕ (ರಾಜುಗೌಡ), ಮಾಜಿ ಸಚಿವ.

————————————————————-

Contents
  ⚠️FOLLOW UP BREAKING NEWS : “ಕೆಂಭಾವಿ |ಅರೆಬೆತ್ತಲಾಗಿ ಶಿಕ್ಷಕರ ನೀರಾಟ : ಭುಗಿಲೆದ್ದ ಆಕ್ರೋಶ!  ಸರ್ಕಾರಿ ಬಾಲಕಿಯರ ಶಾಲೆಗೆ ಬಿಇಒ ಭೇಟಿ.! | ತಪ್ಪಿಸ್ಥರ  ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪಾಲಕರು ಪ್ರತಿಭಟಿಸಿ ಆಗ್ರಹ”• ಸೆಕ್ಯುಲರ್ ವಾಯ್ಸ್ ನ್ಯೂಸ್ ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ಸರಕಾರಿ ಬಾಲಕಿಯರ (ಕನ್ಯಾ) ಪ್ರೌಢಶಾಲೆಯ ಶೈಕ್ಷಣಿಕ ಪ್ರವಾಸದ ವೇಳೆ ನಾಲ್ವರು ಶಿಕ್ಷಕರು ಆ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ನೀರಾಟವಾಡಿ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಪಾಲಕರು ಶಾಲಾ ಶಿಕ್ಷಕರ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.“ಸೆಕ್ಯುಲರ್ ವಾಯ್ಸ್” ಮಾಧ್ಯಮ ವರದಿ ಪ್ರಕಟಿಸಿದ ಪರಿಣಾಮ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಮೇಲಾಧಿಕಾರಿಗಳು ಶಾಲೆಗೆ ಭೇಟಿದ ಸಂದರ್ಭದಲ್ಲಿ ಪೋಷಕರ ಪ್ರತಿಭಟನೆ ಬಿಸಿ ಅನುಭವಿಸಿದರು.ಕೂಡಲೇ ಈ ಎಲ್ಲ ಶಿಕ್ಷಕರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.• ಶಿಕ್ಷಕರಿಗೆ ಮುತ್ತಿಗೆ: ಪ್ರವಾಸದ ಸಂದÀರ್ಭದಲ್ಲಿ ವಿದ್ಯಾರ್ಥಿನಿಯರÀ ಜೊತೆಯಲ್ಲಿ ಜಲಕ್ರೀಡೆಯಾಡಿದ ಪೋಟೋ ಮತ್ತು ವಿಡಿಯೋಗಳನ್ನು ಕಂಡ ಪೋಷಕರು ಕನ್ಯಾಪ್ರೌಢ ಶಾಲೆಗೆ ತೆರಳಿ ಶಿಕ್ಷಕರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು,• ಮಾತಿನ ಚಕಮಕಿ: ಮುತ್ತಿಗೆ ಸಂದರ್ಭದಲ್ಲಿ ಶಿಕ್ಷಕರು ಮತ್ತು ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು. ನಿಮ್ಮ ನಂಬಿದ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದೆ ಈ ರೀತಿಯಲ್ಲಿ ನಡೆದುಕೊಂಡಿದ್ದು, ತಪ್ಪಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಇಲ್ಲಿದ್ದ ಶಿಕ್ಷಕರೊಬ್ಬರು ಹೌದುಂ ತಪ್ಪಾಗಿದೆ ಕ್ಷಮಿಸಿ ಎಂದಷ್ಟೇ ಉತ್ತರಿಸಿದ ಮುಂದೆ ಸಾಗಿದರು.• ಪೊಲೀಸರ ಭೇಟಿ: ಈ ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಂಭಾವಿ ಪೋಲಿಸ್ ಠಾಣೆಯ ಸಿಬ್ಬಂದಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.• ಕಠಿಣ ಕ್ರಮದ ಭರವಸೆ : ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ್ ಮಾತನಾಡಿ, ಈ ಘಟನೆ ಕುರಿತು ನನಗೆ ಸಮಗ್ರ ಮಾಹಿತಿ ಇದೆ. ಈ ವಿಷಯವನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಷಕರಿಕೆ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಪೋಷಕರು ಹಾಗೂ ನಾನಾ ಸಂಘಟನೆಗಳ ಮುಖಂಡರು ಇದ್ದರು. ———————————————– “ಕೆಂಭಾವಿ ಸರಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಅತಿಥಿ ಶಿಕ್ಷಕರೊಬ್ಬರು ಜಲಕ್ರೀಡೆಯಲ್ಲಿ ತೊಡಗಿರುವುದು ಮಾಧ್ಯಮದಲ್ಲಿ ಮೊದಲು ಬಂದ ನಂತರ ಕ್ರಮಕ್ಕೆ ಬಿಇಒ ಅವರಿಗೆ ಸೂಚಿಸಲಾಗಿತ್ತು. ಆದರೆ ಬಳಿಕ ಮುಖ್ಯಶಿಕ್ಷಕರು ಸೇರಿ ಎಲ್ಲ ಶಿಕ್ಷಕರು ಸಹ ಈ ಜಲಕ್ರೀಡೆಯಲ್ಲಿ ತೊಡಗಿದ್ದಾರೆಂದು ಗೊತ್ತಾಗಿದೆ. ತಕ್ಷಣವೇ ಶಾಲೆಗೆ ಬಿಇಒ ಅವರನ್ನು ಕಳುಹಿಸಿಕೊಡಲಾಗಿತ್ತು. ಅವರಿಂದ ಸಮಗ್ರ ವರದಿ ಬಂದ ಕೂಡಲೇ ಕ್ರಮಕ್ಕಾಗಿ ಮಾನ್ಯ ಅಪಾರ ಆಯುಕ್ತರಿಗೆ ಸಲ್ಲಿಸುತ್ತೇನೆ, ನಮ್ಮ ವ್ಯಾಪ್ತಿಯಲ್ಲಿ ಸಹ ಕಠಿಣ ಕ್ರಮ ಕೈಗೊಳ್ಳಲಾಗುವುದು. -ಚನ್ನಬಸಪ್ಪ ಮುಧೋಳ, ಡಿಡಿಪಿಐ ——————————————– “ವಿಷಯ ಗಮನಕ್ಕೆ ಬಂದಿಲ. ಕೆಂಭಾವಿ ಸುರಪುರ ತಾಲೂಕಿನಲ್ಲಿ ಬರುತ್ತದೆ. ಆದರೆ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಿರುವುದರಿಂದ ಕೆಂಭಾವಿಯ ಯಾವುದೇ ಸಮಸ್ಯೆ ಇದ್ದರು ಕೂಡಾ ಅಧಿಕಾರಿಗಳು ಮೊದಲು ಉಸ್ತುವಾರಿ ಸಚಿವರ ಗಮನಕ್ಕೆ ತರುತ್ತಾರೆ. ಶಿಕ್ಷಕರು ವಿದ್ಯಾರ್ಥಿನಿಯ ರೊಂದಿಗೆ ಅರೆ ಬೆತ್ತಲಾಗಿ ನೀರಾಟವಾಡಿರುವುದು ಸರಿಯಲ್ಲ. ಇದನ್ನು ನಾನು ಸಹ ಖಂಡಿಸುತ್ತೇನೆ. ತಪ್ಪು ಮಾಡಿದವರ ಮೇಲೆ ಶಿಸ್ತು ಕ್ರಮ ಆಗಬೇಕು”.  -ರಾಜಾವೇಣುಗೋಪಾಲ ನಾಯಕ, ಶಾಸಕರು ಸುರಪುರ. —————————————————- “ಘಟನೆ ಕುರಿತು ಸೆಕ್ಯುಲರ್ ವಾಯ್ಸ್ ಪತ್ರಿಕೆಯಿಂದ ಸಮಗ್ರವಾಗಿ ವಿಷಯ ಗಮನಕ್ಕೆ ಬಂದಿದೆ. ಪತ್ರಿಕೆಗೆ ಮೊದಲು ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಹೈಸ್ಕೂಲ್ ಹುಡುಗಿರು ಅಂದ್ರೆ ಬಹುತೇಕ ಪ್ರಾಯಕ್ಕೆ ಬಂದಿರುತ್ತಾರೆ. ಶಿಕ್ಷಕರು ಈ ರೀತಿ ವಿದ್ಯಾರ್ಥಿನಿಯರೊಂದಿಗೆ ಅರೆ ಬೆತ್ತಲಾಗಿ ಈಜಾಡಿರುವುದು, ನೀರಿನ ಚೆಲ್ಲಾಟವಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಈ ಕುರಿತು ಶಿಕ್ಷಣ ಇಲಾಖೆ ತಪ್ಪು ಮಾಡಿವರ ಮೇಲೆ ಸೂಕ್ತ ಕಾನೂನು ಕ್ರಮ ಜರಿಗಸಬೇಕು. ಮುಂದೆ ಈಗಾಗದಂತೆ ಶಿಕ್ಷಣ ಇಲಾಖೆ ಎಚ್ಚ್ಚೆರಿಕೆ ಕ್ರಮ ಕೈ ಗೊಳ್ಳಬೇಕು”.  -ನರಸಿಂಹ ನಾಯಕ (ರಾಜುಗೌಡ), ಮಾಜಿ ಸಚಿವ. “ಕೆಂಭಾವಿ ಸರಕಾರಿ ಬಾಲಕಿಯರ ಪ್ರೌಢಶಾಲಾ ಶಿಕ್ಷಕರ ಈ ನಡೆ ಅತ್ಯಂತ ನಾಚಿಕೆಗೇಡಿ ಸಂಗತಿಯಾಗಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ಮತ್ತು ನಾನಾ ಸಬೂಬು ಹೇಳದೇ ಇಲಾಖೆ ಇವರ ವಿರುದ್ಧ ಕಠಿಣ ಕ್ರಮಗೊಳ್ಳಬೇಕು. ಕೇಸ್ ದಾಖಲಿಸಬೇಕು. ಇಲ್ಲದಿದ್ದರೆ ನಮ್ಮ ಸಂಘದಿಂದ ಧರಣಿ ನಡೆಸಲಾಗುವುದು”.  -ಮಲ್ಲನಗೌಡ ಹಗರಟಗಿ, ಜಿಲ್ಲಾಧ್ಯಕ್ಷರು, ರೈತ ಸಂಘ, ಯಾದಗಿರಿ.

 “ಕೆಂಭಾವಿ ಸರಕಾರಿ ಬಾಲಕಿಯರ ಪ್ರೌಢಶಾಲಾ ಶಿಕ್ಷಕರ ಈ ನಡೆ ಅತ್ಯಂತ ನಾಚಿಕೆಗೇಡಿ ಸಂಗತಿಯಾಗಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ಮತ್ತು ನಾನಾ ಸಬೂಬು ಹೇಳದೇ ಇಲಾಖೆ ಇವರ ವಿರುದ್ಧ ಕಠಿಣ ಕ್ರಮಗೊಳ್ಳಬೇಕು. ಕೇಸ್ ದಾಖಲಿಸಬೇಕು. ಇಲ್ಲದಿದ್ದರೆ ನಮ್ಮ ಸಂಘದಿಂದ ಧರಣಿ ನಡೆಸಲಾಗುವುದು”.
 -ಮಲ್ಲನಗೌಡ ಹಗರಟಗಿ, ಜಿಲ್ಲಾಧ್ಯಕ್ಷರು, ರೈತ ಸಂಘ, ಯಾದಗಿರಿ.