🛑 BREAKING  NEWS :”ಸುರಪುರ‌ | ಕೆಂಭಾವಿ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿನಿರೊಂದಿಗೆ  ಶಿಕ್ಷಕರ ಜಲಕ್ರೀಡೆ ಪ್ರಕರಣ:  ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು

By admin

🛑 BREAKING  NEWS ಸುರಪುರ| ಕೆಂಭಾವಿ  ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿನಿರೊಂದಿಗೆ  ಶಿಕ್ಷಕರ ಜಲಕ್ರೀಡೆ ಪ್ರಕರಣ : ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಯಾದಗಿರಿ:

ಸುರಪುರ ತಾಲ್ಲೂಕಿನ ಕೆಂಭಾವಿ ಬಾಲಕಿಯರ ಪ್ರೌಢಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರವಾಸದಲ್ಲಿ ಅದೇ ಶಾಲೆಯ ಶಿಕ್ಷಕರು ಸ್ವಿಮಿಂಗ್ ಪೊಲ್‌ನಲ್ಲಿ ವಿದ್ಯಾರ್ಥಿನಿಯರೊಂದಿಗೆ ಈಜಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.

ಅಲ್ಲದೆ ಸಂಬಂಧಪಟ್ಟ ಫೋಟೋ ಮತ್ತು ವೀಡಿಯೋಗಳನ್ನು ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಅಪ್‌ಲೋಡ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದಾಖಲಿಸಿಕೊಂಡಿದೆ.

ಆಯೋಗವು ಸುರಪುರ ತಾಲ್ಲೂಕಿನ ಶಾಲೆಯ ಶಿಕ್ಷಕರ ವಿರುದ್ಧ ತೆಗೆದುಕೊಂಡ ಕ್ರಮ ಮತ್ತು ಪ್ರಕರಣದ ಎಫ್‌ಐಆರ್ ನ ಪ್ರತಿಯನ್ನು 3 ದಿನಗಳ ಒಳಗಾಗಿ ಸಲ್ಲಿಸಲು ಜಿಲ್ಲಾಧಿಕಾರಿಗಳನ್ನು ಕೋರಿದೆ.

ಈ ಕುರಿತು ಮಾಹಿತಿ ಮಾಧ್ಯಮಗಳಲ್ಲಿ ಹೊರಬಂದ ಈ ವರದಿ ಹಾಗೂ ಪೋಷಕರ ಅಹವಾಲಿನ ಆಧಾರವಾಗಿ, ಶಿಕ್ಷಕರ ಅಸಭ್ಯ ವರ್ತನೆಯ ಕುರಿತು ಸಮಗ್ರ ತನಿಖೆ ನಡೆಯುವಂತೆ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಆದೇಶಿಸಿದ್ದಾರೆ.


“ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರವಾಸದ ವೇಳೆ ಕೆಲ ಶಿಕ್ಷಕರು ಅಸಭ್ಯ ವರ್ತನೆ ಗಂಭೀರ ವಿಷಯವಾಗಿದ್ದು,  ಮಕ್ಕಳ ಗೌರವ ಮತ್ತು ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಸಂಬಂಧಿಸಿದ ವರದಿ ಹಾಗೂ ಎಫ್‌ಐಆರ್ ಪ್ರತಿಯನ್ನು ಮೂರು ದಿನಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ.”
— ಶಶಿಧರ ಕೋಸಂಬೆ, ಅಧ್ಯಕ್ಷರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

 

Contents
🛑 BREAKING  NEWS ಸುರಪುರ| ಕೆಂಭಾವಿ  ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿನಿರೊಂದಿಗೆ  ಶಿಕ್ಷಕರ ಜಲಕ್ರೀಡೆ ಪ್ರಕರಣ : ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಯಾದಗಿರಿ:ಸುರಪುರ ತಾಲ್ಲೂಕಿನ ಕೆಂಭಾವಿ ಬಾಲಕಿಯರ ಪ್ರೌಢಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರವಾಸದಲ್ಲಿ ಅದೇ ಶಾಲೆಯ ಶಿಕ್ಷಕರು ಸ್ವಿಮಿಂಗ್ ಪೊಲ್‌ನಲ್ಲಿ ವಿದ್ಯಾರ್ಥಿನಿಯರೊಂದಿಗೆ ಈಜಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.ಅಲ್ಲದೆ ಸಂಬಂಧಪಟ್ಟ ಫೋಟೋ ಮತ್ತು ವೀಡಿಯೋಗಳನ್ನು ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಅಪ್‌ಲೋಡ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದಾಖಲಿಸಿಕೊಂಡಿದೆ.ಆಯೋಗವು ಸುರಪುರ ತಾಲ್ಲೂಕಿನ ಶಾಲೆಯ ಶಿಕ್ಷಕರ ವಿರುದ್ಧ ತೆಗೆದುಕೊಂಡ ಕ್ರಮ ಮತ್ತು ಪ್ರಕರಣದ ಎಫ್‌ಐಆರ್ ನ ಪ್ರತಿಯನ್ನು 3 ದಿನಗಳ ಒಳಗಾಗಿ ಸಲ್ಲಿಸಲು ಜಿಲ್ಲಾಧಿಕಾರಿಗಳನ್ನು ಕೋರಿದೆ.ಈ ಕುರಿತು ಮಾಹಿತಿ ಮಾಧ್ಯಮಗಳಲ್ಲಿ ಹೊರಬಂದ ಈ ವರದಿ ಹಾಗೂ ಪೋಷಕರ ಅಹವಾಲಿನ ಆಧಾರವಾಗಿ, ಶಿಕ್ಷಕರ ಅಸಭ್ಯ ವರ್ತನೆಯ ಕುರಿತು ಸಮಗ್ರ ತನಿಖೆ ನಡೆಯುವಂತೆ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಆದೇಶಿಸಿದ್ದಾರೆ.“ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರವಾಸದ ವೇಳೆ ಕೆಲ ಶಿಕ್ಷಕರು ಅಸಭ್ಯ ವರ್ತನೆ ಗಂಭೀರ ವಿಷಯವಾಗಿದ್ದು,  ಮಕ್ಕಳ ಗೌರವ ಮತ್ತು ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಸಂಬಂಧಿಸಿದ ವರದಿ ಹಾಗೂ ಎಫ್‌ಐಆರ್ ಪ್ರತಿಯನ್ನು ಮೂರು ದಿನಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ.” — ಶಶಿಧರ ಕೋಸಂಬೆ, ಅಧ್ಯಕ್ಷರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ