🛑ALERT NEWS :”ಹಾವೇರಿ | ಕಲುಷಿತ ಆಹಾರ ಸೇವನೆ; ವಸತಿ ನಿಲಯ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು!”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಹಾವೇರಿ :
ಖಾಸಗಿ ಪಿಜಿ ಸೆಮರ್‌ನ 19 ವಿದ್ಯಾರ್ಥಿನಿಯರು ಕಲುಷಿತ ಆಹಾರ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡು ವೀರಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ವಿದ್ಯಾರ್ಥಿಗಳನ್ನು ಎಸ್ಎಫ್ಐ ನಿಯೋಗ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಮಾಹಿತಿ ಪಡೆದು ವೈದ್ಯರ ಹಾಗೂ ಪೋಷಕರ ಜೊತೆಗೆ ಚರ್ಚಿಸಿದರು.
ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಖಾಸಗಿ ಪಿ.ಜಿ.ಸೆಂಟರ್ ಆಹಾರ ಸೇವಿಸಿ ಅಸ್ವಸ್ಥವಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
“ಊಟ ಸೇವನೆ ಮಾಡಿದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ತೀವ್ರಗೊಂಡ ನಂತರ ಒಬ್ಬೊಬ್ಬರಾಗಿ ಆಟೋದಲ್ಲಿ ಹೋಗಿ ವೀರಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಈವರೆಗೂ ಯಾವುದೇ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಆಹಾರ ಇಲಾಖೆಯ ಅಧಿಕಾರಿಗಳು, ಹಾಗೂ ಸಂಬಂಧಿತ ಯಾವ ಅಧಿಕಾರಿಗಳು ಖುದ್ದು ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸದೇ ನಿರ್ಲಕ್ಷ್ಯವಹಿಸಿರುವುದನ್ನು” ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
“ಕಲುಷಿತ ಆಹಾರದಿಂದ ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿದ್ದಾರೆ ಅವರಿಗೆ ಸೂಕ್ತ ಚಿಕಿತ್ಸೆ ಮುಂದುವರೆಯಬೇಕು. 19 ವಿದ್ಯಾರ್ಥಿನಿಯರ ಪೈಕಿ 3-4 ವಿದ್ಯಾರ್ಥಿನಿಯರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಇದೆ ಅವರಿಗೆ ಉನ್ನತ ಚಿಕಿತ್ಸೆ ಒದಗಿಸಬೇಕು. ಒಟ್ಟಾರೆ ಘಟನೆಯ ಕುರಿತು ಸ್ವಯಂ ದೂರ ದಾಖಲು ಮಾಡಿಕೊಂಡು ಸಮಗ್ರ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದೆ.
“ದೂರದ ಜಿಲ್ಲೆಯಿಂದ ಇಂಜಿನಿಯರಿಂಗ್ ವ್ಯಾಸಾಂಗ್ಯಕ್ಕಾಗಿ ಜಿಲ್ಲೆಗೆ ಬಂದ ವಿದ್ಯಾರ್ಥಿಗಳಿಗೆ ಆರೋಗ್ಯ ಪೂರಕ ವಾತಾವರಣ ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಸರ್ಕಾರಕ್ಕೆ ಅನೇಕ ಬಾರಿ ಹೋರಾಟ ಮಾಡಿ ಮನವಿ ಪತ್ರ ಕೊಟ್ಟರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಿಕೊಡುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿವೆ. ಸರ್ಕಾರಿ ಹಾಸ್ಟೆಲ್ ಸೌಲಭ್ಯ ಸಿಗದೆ ಇರುವ ವಿದ್ಯಾರ್ಥಿಗಳು ಖಾಸಗಿ ವಸತಿ ನಿಲಯಗಳು ಹಾಗೂ ಬಾಡಿಗೆ ರೂಮ್ ಗಳ ಮೇಲೆ ಅವಲಂಬನೆ ಆಗಿದ್ದಾರೆ” ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಅವರು ಹೇಳಿದರು.
“ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಬಾಡಿಗೆ ಬಿಲ್ಡಿಂಗ್‌ನಲ್ಲಿ ನಡೆಯುತ್ತಿರುವ ವಸತಿ ನಿಲಯಕ್ಕೆ ಅಡ್ವಾನ್ಸ್ 5,000 ರೂ ಕಟ್ಟಿಸಿಕೊಂಡು ಪ್ರತಿ ತಿಂಗಳು 2,500 ರೂ ಮೆಸ್ ಬಿಲ್ ಪಾವತಿ ಮಾಡಿಸಿಕೊಂಡು ಬರುವ ಪದ್ಧತಿ ನಡೆಯುತ್ತಿದೆ. ಇದು ಬಡ ವಿದ್ಯಾರ್ಥಿಗಳಿಗೆ ಭಾರಿ ಹೊರೆಯಾಗುತ್ತಿದ್ದು, ಹಣ ಸುಲಿಯುವ ಹುನ್ನಾರಕ್ಕೆ ಕಡಿವಾಣ ಹಾಕಿ. ಕಾಲೇಜಿನ ಹಿಂದುಗಡೆ ಅನೇಕ ಕೊಠಡಿಗಳು ಖಾಲಿ ಬಿದ್ದಿದ್ದು, ಖಾಸಗಿ ಪಿಜಿ ಸೆಂಟರ್‌ಗಳಿಗೆ ಯಾಕೆ, ಲಕ್ಷಾಂತರ ರೂಪಾಯಿ ಬಾಡಿಗೆ ಕೊಡಬೇಕು? ಯಾರ ಜೇಬು ತುಂಬಿಸಲು ಖಾಸಗಿ ಬಿಲ್ಡಿಂಗ್ ನಲ್ಲಿ ವಿದ್ಯಾರ್ಥಿನಿಯರನ್ನು ಇರಿಸಲಾಗಿತ್ತು? ಇದರ ಸಮಗ್ರ ತನಿಖೆ ನಡೆಯಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೂಡಲೇ ಕಾಲೇಜಿನ ಹಿಂದುಗಡೆ ಇರುವ ಬೃಹತ್ ಕಟ್ಟಡಗಳಲ್ಲಿಯೇ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳನ್ನು ತೆರೆಯಬೇಕು. ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ಬಸ್ಸಿನ ಬೇಡಿಕೆ ಹೆಚ್ಚಾಗಿದ್ದು ಕೂಡಲೇ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ಕನಿಷ್ಟ 20 ಬಸ್ ಗಳನ್ನು ಬಿಡಬೇಕು. ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ ಘಟನೆಯಿಂದ ಎಚ್ಚೆತುಕೊಂಡು ನಿಯಮಗಳನ್ನು ಗಾಳಿಗೆ ತೂರಿದ ಅನಧಿಕೃತ ಖಾಸಗಿ ಪಿ.ಜಿ.ಸೆಂಟರ್ ಗಳನ್ನು ಪರಿಶೀಲನೆ ನಡೆಸಬೇಕು. ಶಿಸ್ತು ಕ್ರಮ ಜರುಗಿಸಬೇಕು”ಎಂದು ಆಗ್ರಹಿಸಿದರು.
ಎಸ್ಎಫ್ಐ ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಹಾಸ್ಟೆಲ್ ವಿದ್ಯಾರ್ಥಿಗಳ ಉಪಸಮಿತಿ ರಾಜ್ಯ ಸಂಚಾಲಕ ಅರುಣ್ ನಾಗವತ್, ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರಾ ಕೊರವರ, ಮುಖಂಡರಾದ ಸಿದ್ದು ಹೆಚ್, ದಯನಾಂದ ಎಸ್ ಕೆ ಉಪಸ್ಥಿತರಿದ್ದರು.