🚨 Follow Up news :” ಯಾದಗಿರಿ| ಫೋಟೋಗಳಿಂದ ಬಯಲಾಯಿತು ಒಬ್ಬರಲ್ಲ; ನಾಲ್ವರೂ ಶಿಕ್ಷಕರಿಂದಲೂ ನೀರಾಟ; ದಂಗಾದ ಫೋಷಕರು.! ಪೋಷಕರ ಕೋಪಕ್ಕೆ ಕಾರಣವಾದ ಆ ಶಾಲಾ ವಿದ್ಯಾರ್ಥಿನಿಯರ ಪ್ರವಾಸದ  ಲೀಕ್‌ ಫೋಟೋಗಳಲ್ಲಿ ಏನಿದೆ? ಇಲ್ಲಿದೆ ಡಿಟೆಲ್ಸ್‌ ..!

By admin

  🚨Follow Up News : ಯಾದಗಿರಿ| ಫೋಟೋಗಳಿಂದ ಬಯಲಾಯಿತು ಒಬ್ಬರಲ್ಲ; ನಾಲ್ವರೂ ಶಿಕ್ಷಕರಿಂದಲೂ ನೀರಾಟ; ದಂಗಾದ ಫೋಷಕರು.! ಪೋಷಕರ ಕೋಪಕ್ಕೆ ಕಾರಣವಾದ ಆ ಶಾಲಾ ವಿದ್ಯಾರ್ಥಿನಿಯರ ಪ್ರವಾಸದ  ಲೀಕ್‌ ಫೋಟೋಗಳಲ್ಲಿ ಏನಿದೆ? ಇಲ್ಲಿದೆ ಡಿಟೆಲ್ಸ್‌ ..!👇👇

• ಸೆಕ್ಯುಲರ್ ವಾಯ್ಸ್ ನ್ಯೂಸ್ ಸುರಪುರ : 

ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶೈಕ್ಷಣಿಕ ಪ್ರವಾಸದ ವೇಳೆ ಒಬ್ಬರಲ್ಲ ನಾಲ್ವರೂ ಶಿಕ್ಷಕರಿಂದ ನೀರಿನಲ್ಲಿ ತುಂಟಾಟ, ಅಸಭ್ಯ ವರ್ತನೆಯ ಆರೋಪ ಹಿನ್ನೆಲೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ರಕ್ಷಣೆ ವಿಚಾರದಲ್ಲಿ ಶಾಲಾ ಶಿಕ್ಷಕರರ ನಿರ್ಲಕ್ಷ್ಯ ಪ್ರಶ್ನಾರ್ಥಕವಾಗಿದೆ.

ಹೌದು,ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸರ್ಕಾರಿ ಬಾಲಕಿಯರ(ಕನ್ಯಾ) ಪ್ರೌಢಶಾಲೆಯ 9 ಮತ್ತು 10ನೇ ತರಗತಿಯ 93 ವಿದ್ಯಾರ್ಥಿನಿಯರು ಮೂರು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸಕ್ಕೆ ಐದು ಮಂದಿ ಶಿಕ್ಷಕರು ತೆರಳಿದ್ದು, ಅವರಲ್ಲಿ ನಾಲ್ವರು ಪುರುಷರು ಹಾಗೂ ಕೇವಲ ಒಬ್ಬರೇ ಮಹಿಳಾ ಶಿಕ್ಷಕಿ ಇದ್ದರು. ನಾಲ್ವರು ಶಿಕ್ಷಕರು ಸಹ ಪ್ರೌಢ ಶಾಲಾ‌ ವಿದ್ಯಾರ್ಥಿನಿಯರ ಜತೆ ನೀರಿನಾಟವಾಡಿರುವ ಫೋಟೋಗಳು ಪೋಷಕರ ಆಕ್ರೋಶಕ್ಕೆ ಗುರಿಯಾಗಿದೆ.

ಪ್ರವಾಸದ ವೇಳೆ ನೀರಿನಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಕೆಲ ಶಿಕ್ಷಕರು ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಸಹ ಕೇಳಿಬಂದಿದೆ.

ಪ್ರವಾಸದಿಂದ ಮರಳಿದ ಬಳಿಕ ಮಕ್ಕಳ ಫೋಟೋಗಳನ್ನು ಗಮನಿಸಿದ ಪೋಷಕರು ಘಟನೆ ಕುರಿತು ಪ್ರಶ್ನಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.

ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕರ ಈ ರೀತಿಯ ವರ್ತನೆ ಅತೀವ ಖಂಡನೀಯವಾಗಿದ್ದು, ಶಿಕ್ಷಣ ಕ್ಷೇತ್ರವೇ ತಲೆತಗ್ಗಿಸುವಂತಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ಶಿಕ್ಷಕ ಹಾಗೂ ಅತಿಥಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆಯ ಕುರಿತು ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಒತ್ತಾಯ ಹೆಚ್ಚಾಗಿದೆ.