🛑STATE NEWS : “ಬೆಂಗಳೂರು| 2022ರ ಮೀಸಲಾತಿ ಕಾಯ್ದೆ ಶೆಡ್ಯೂಲ್–9ಕ್ಕೆ ಸೇರಿಸಿ : ವಿ.ಎಸ್. ಉಗ್ರಪ್ಪ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಬೆಂಗಳೂರು :
ಮೀಸಲಾತಿ ಭಿಕ್ಷೆಯಲ್ಲ, ಇದು ಸಂವಿಧಾನಾತ್ಮಕ ಹಕ್ಕು. 2022ರ ಮೀಸಲಾತಿ ಕಾಯ್ದೆಯನ್ನು ತಕ್ಷಣ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸದಿದ್ದರೆ, ವಾಲ್ಮೀಕಿ ಸಮಾಜ ಹಾಗೂ ಇಡೀ ತಳ ಸಮುದಾಯಗಳು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧವಾಗಿವೆ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರು ಎಚ್ಚರಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶತಮಾನಗಳಿಂದ ನಡೆದ ಅನ್ಯಾಯ, ನಿರಂತರ ಶೋಷಣೆ ಮತ್ತು ರಾಜಕೀಯ ಮೋಸಗಳಿಂದ ಬೇಸತ್ತ ಸಮುದಾಯದ ಕಿಡಿಕಾರುವ ಕೂಗು ಇದಾಗಿದೆ ಎಂದು ಹೇಳಿದರು.
2022ರಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸುವ ಕಾಯ್ದೆ ಜಾರಿಗೊಂಡಿದ್ದರೂ, ಅದನ್ನು ಶೆಡ್ಯೂಲ್–9ಕ್ಕೆ ಸೇರಿಸದೆ ಇಡುವ ಮೂಲಕ ತಳ ಸಮುದಾಯಗಳ ಭವಿಷ್ಯವನ್ನು ಅಸ್ಥಿರಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರಗಳ ಮೌನವನ್ನು ದುರ್ಬಲತೆ ಎಂದು ಅರ್ಥೈಸಿಕೊಳ್ಳಬಾರದು ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕೆಲ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸಿದ್ದಾರೆ. ಇದರ ಪರಿಣಾಮವಾಗಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು. ಸುಳ್ಳು ಪ್ರಮಾಣ ಪತ್ರಗಳಿಂದ ನಿಜವಾದ ಎಸ್‌ಸಿ–ಎಸ್‌ಟಿ ಮಕ್ಕಳ ಹಕ್ಕುಗಳು ಕಬಳಿಸಲಾಗುತ್ತಿದ್ದು, ಇದು ಸಾಮಾಜಿಕ ನ್ಯಾಯದ ಮೇಲಿನ ನೇರ ದಾಳಿ ಎಂದು ಹೇಳಿದರು.
ಮುಂದಿನ ಬಜೆಟ್ ಗಾತ್ರ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಯಾಗುವ ಸಾಧ್ಯತೆ ಇದ್ದರೂ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಕಾನೂನು ಇದ್ದರೂ ಅನುಷ್ಠಾನ ಇಲ್ಲದಿರುವುದು ತಳ ಸಮುದಾಯಗಳಿಗೆ ಮಾಡಿದ ದೊಡ್ಡ ದ್ರೋಹ ಎಂದು ಬೇಸರ ವ್ಯಕ್ತಪಡಿಸಿದರು.
ಆರ್ಥಿಕ ಮೀಸಲಾತಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಮೇಲ್ವರ್ಗದವರಿಗೆ 8.5 ಲಕ್ಷ ರೂ. ಆದಾಯ ಮಿತಿ ನಿಗದಿಪಡಿಸಿರುವಾಗ, ತಲೆತಲಾಂತರದಿಂದ ಶೋಷಣೆಗೆ ಒಳಗಾದ ಎಸ್‌ಸಿ–ಎಸ್‌ಟಿ ಮಕ್ಕಳಿಗೆ 2.5 ಲಕ್ಷ ರೂ. ಮಿತಿ ವಿಧಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮೀಸಲಾತಿ ಹೆಚ್ಚಳವನ್ನು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದರಿಂದ ಶಾಶ್ವತ ಪರಿಹಾರವೆಂದರೆ ಶೆಡ್ಯೂಲ್–9ಕ್ಕೆ ಸೇರಿಸುವುದೇ ಎಂದು ಹೇಳಿದರು. ತಮಿಳುನಾಡು ರಾಜ್ಯದಲ್ಲಿ ಶೇ.69 ಮೀಸಲಾತಿಯನ್ನು ಶೆಡ್ಯೂಲ್–9ಕ್ಕೆ ಸೇರಿಸಿರುವ ಉದಾಹರಣೆ ನೀಡಿದ ಅವರು, ಕರ್ನಾಟಕದಲ್ಲಿ ಅದು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಶೆಡ್ಯೂಲ್–9ಕ್ಕೆ ಸೇರಿಸುವ ನಿರ್ಣಯ ಕೈಗೊಂಡಿದ್ದರೂ, ಕೇಂದ್ರ ಸರ್ಕಾರ ಇನ್ನೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಶೆಡ್ಯೂಲ್–9ಕ್ಕೆ ಸೇರಿಸುವ ನಿರ್ಣಯ ಕೈಗೊಂಡಿದ್ದರೂ, ಕೇಂದ್ರ ಸರ್ಕಾರ ಇನ್ನೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಸರ್ವಪಕ್ಷ ನಿಯೋಗವನ್ನು ಪ್ರಧಾನಿಯವರ ಬಳಿ ಕರೆದೊಯ್ದು ಸಂವಿಧಾನ ತಿದ್ದುಪಡಿ ಮೂಲಕ ಶೇ.50 ಮಿತಿ ಕುರಿತ ಸುಪ್ರೀಂಕೋರ್ಟ್ ಆದೇಶವನ್ನು ತಟಸ್ಥಗೊಳಿಸುವಂತೆ ಒತ್ತಡ ತರಬೇಕೆಂದು ಆಗ್ರಹಿಸಿದರು.
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ಮೇಲೂ, ಅದನ್ನು ನೀಡಿದ ಅಧಿಕಾರಿಗಳ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೀಸಲಾತಿ ವ್ಯವಸ್ಥೆಯೇ ಅರ್ಥಹೀನವಾಗುತ್ತದೆ ಎಂದು ಎಚ್ಚರಿಸಿದರು.
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ಮೇಲೂ, ಅದನ್ನು ನೀಡಿದ ಅಧಿಕಾರಿಗಳ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೀಸಲಾತಿ ವ್ಯವಸ್ಥೆಯೇ ಅರ್ಥಹೀನವಾಗುತ್ತದೆ ಎಂದು ಎಚ್ಚರಿಸಿದರು.