🔴 LOCAL EXPRESS :” ಗದಗ | ಪರಿಕರವಿಲ್ಲದೆ ಮಲ ಸ್ವಚ್ಚಗೊಳಿಸುವ ಅನಿಷ್ಟ ಪದ್ದತಿ ಇನ್ನೂ ಜೀವಂತ; ಎಚ್ಚೆತ್ತುಕೊಳ್ಳದ ನಗರಸಭೆ!

By admin

◼️ LOCAL EXPRESS : ಗದಗ | ಪರಿಕರವಿಲ್ಲದೆ ಮಲ ಸ್ವಚ್ಚಗೊಳಿಸುವ ಅನಿಷ್ಟ ಪದ್ದತಿ ಇನ್ನೂ ಜೀವಂತ; ಎಚ್ಚೆತ್ತುಕೊಳ್ಳದ ನಗರಸಭೆ!

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗದಗ :

ಮಲ ಹೊರುವ ಹಾಗೂ ಮಲದ ಗುಂಡಿ ಸ್ವಚ್ಛಗೊಳಿಸುವ(ಮ್ಯಾನ್ಯುವೆಲ್ ಸ್ನಾವೆಂಜಿಂಗ್) ಅನಿಷ್ಟ ಪದ್ಧತಿ ಸಂಪೂರ್ಣ ನಿಷೇಧವಿದ್ದರೂ ಗದಗ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿರುವುದು ಮತ್ತೆ ಬೆಳಕಿಗೆ ಬಂದಿದೆ.

ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯ ಹಾತಲಗೇರಿ ರಸ್ತೆ  ಎಪಿಎಮ್‌ಸಿ ಹಮಾಲರ್ ಕಾಲೋನಿ ವಾರ್ಡ ನಂಬರ್ -11 ರ ಶುದ್ಧ ಕುಡಿಯುವ ನೀರಿನ ಹತ್ತಿರ ಯಾವುದೇ ಪರಿಕರಗಳಿಲ್ಲದೆ ಮಲದ ಗುಂಡಿ ಸ್ವಚ್ಛ(ಮ್ಯಾನ್ಯುವೆಲ್ ಸ್ಥಾವೆಂಜರ್ಸ್‌)ಗೊಳಿಸುತ್ತಿರುವುದು ಕಂಡುಬಂದಿದೆ.

ಇತ್ತಿಚೆಗೆ ಕೆಲವು ದಿನಗಳ ಹಿಂದೆ ಇದೆ ಹಾತಲಗೇರಿ ನಾಕಾದ ಹತ್ತಿರದ ಹಾಸ್ಟೆಲ್ ಮುಂಭಾಗದಲ್ಲಿ ಕೈಗಳಿಗೆ ರಕ್ಷಾ ಕವಚಗಳಿಲ್ಲದೆ ಮಲದ ಗುಂಡಿ ಸ್ವಚ್ಚಗೊಳಿಸುತ್ತಿರುವುದರ ಕುರಿತು “ಸೆಕ್ಯೂಲರ್‌ ವಾಯ್ಸ್” ವರದಿ ಮಾಡಿತ್ತು ಗುತ್ತಿಗೆದಾರರಿಗೆ ದಂಡವನ್ನೂ ವಿಧಿಸಿದ್ದರು. ಆದರೆ, ಇಷ್ಟಾದರೂ ಹೆಚ್ವೆತ್ತುಕೊಳ್ಳದೇ ನಗರಸಭೆ ತನ್ನ ಹಳೆಯ ದಾಳಿಯನ್ನು ಮುಂದುವರೆಸಿರುವಿದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಾನವರಿಂದ ಮಲದ ಗುಂಡಿ ಸ್ವಚ್ಚ ಮಾಡಿಸುವುಸುದು ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಕಾಯ್ದೆ-2013ರ ಪ್ರಕಾರ ಉಲ್ಲಂಘನೆಯಾಗಿದೆ. ಮಲವನ್ನು ಯಂತ್ರೋಪಕರಣಗಳಿಂದ ಸ್ವಚ್ಛಗೊಳಿಸಬೇಕು. ಆದರೆ, ಯಾವುದೇ ರಕ್ಷಾ ಕವಚಗಳಿಲ್ಲದೆ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ.