⚫ TRAGEDY NEWS : “ಗದಗ| ಕೆರೆಯಲ್ಲಿ ಈಜಲು ಹೋಗಿ ಯುವಕ ದಾರುಣ ಸಾವು”

By admin

  TRAGEDY NEWS : “ಗದಗ| ಕೆರೆಯಲ್ಲಿ ಈಜಲು ಹೋಗಿ ಯುವಕ ದಾರುಣ ಸಾವು”

Contents
  TRAGEDY NEWS : “ಗದಗ| ಕೆರೆಯಲ್ಲಿ ಈಜಲು ಹೋಗಿ ಯುವಕ ದಾರುಣ ಸಾವು”• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಗದಗ:ಜಿಲ್ಲೆಯ ರೋಣ ತಾಲೂಕಿನ ಗುಜಮಾಗಡಿ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.ಗುಜಮಾಗಡಿ ಗ್ರಾಮದ ಶರಣಪ್ಪ ಅಸೂಟಿ (25) ಮೃತ ಯುವಕನಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಗ್ರಾಮದ ಕೆರೆಗೆ ಈಜಲು ತೆರಳಿದ್ದ ಶರಣಪ್ಪ, ಈಜಲು ನೀರಿಗೆ ಜಿಗಿದ ಬಳಿಕ ಬಹಳ ಸಮಯವಾದರೂ ಮೇಲಕ್ಕೆ ಬರಲಿಲ್ಲ. ಇದರಿಂದ ಆತಂಕಗೊಂಡ ಸ್ನೇಹಿತರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಬಂದ ಗ್ರಾಮಸ್ಥರು ಯುವಕನನ್ನು ಹುಡುಕಲು ಕೆರೆಯ ನೀರನ್ನು ಪಂಪ್‌ಸೆಟ್ ಮೂಲಕ ಹೊರಹಾಕಲು ಪ್ರಯತ್ನಿಸಿದರು. ಬಳಿಕ ಮುಳುಗು ತಜ್ಞರನ್ನು ಕರೆಸಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.ಈ ಸಂಬಂಧ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಗದಗ:

ಜಿಲ್ಲೆಯ ರೋಣ ತಾಲೂಕಿನ ಗುಜಮಾಗಡಿ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಗುಜಮಾಗಡಿ ಗ್ರಾಮದ ಶರಣಪ್ಪ ಅಸೂಟಿ (25) ಮೃತ ಯುವಕನಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಗ್ರಾಮದ ಕೆರೆಗೆ ಈಜಲು ತೆರಳಿದ್ದ ಶರಣಪ್ಪ, ಈಜಲು ನೀರಿಗೆ ಜಿಗಿದ ಬಳಿಕ ಬಹಳ ಸಮಯವಾದರೂ ಮೇಲಕ್ಕೆ ಬರಲಿಲ್ಲ. ಇದರಿಂದ ಆತಂಕಗೊಂಡ ಸ್ನೇಹಿತರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಗ್ರಾಮಸ್ಥರು ಯುವಕನನ್ನು ಹುಡುಕಲು ಕೆರೆಯ ನೀರನ್ನು ಪಂಪ್‌ಸೆಟ್ ಮೂಲಕ ಹೊರಹಾಕಲು ಪ್ರಯತ್ನಿಸಿದರು. ಬಳಿಕ ಮುಳುಗು ತಜ್ಞರನ್ನು ಕರೆಸಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.

ಈ ಸಂಬಂಧ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.