
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವಿ. ಜಿ . ಮಹಿಳಾ ಮಹಾವಿದ್ಯಾಲದಲ್ಲಿ ಪರ್ಸ್ ತಯಾರಿಕೆ ಕಾರ್ಯಾಗಾರವನ್ನು ಶ್ರೀಮತಿ ಜಯಶ್ರೀ ಐನಾಪುರ ಅವರು ಉದ್ಘಾಟಿಸಿ ವಿದ್ಯಾರ್ಥಿಗಳು ಓದಿನೊಂದಿಗೆ ಕೌಶಲ್ಯವನ್ನು ಬೆಳಿಸಿಕೊಳ್ಳಬೇಕೆಂಬ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ ನಾಗೇಂದ್ರ ಮಸೂತಿ , ಶ್ರೀಮತಿ ದಾನಮ್ಮ ಬಿರಾದಾರ, ಶೀಮತಿ ಕವಿತಾ ಎಂ, ಕು. ಮೇಘನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.
