ಭವಾನಿ, ರಾಜರಾಜೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಪಾಟೀಲ್ ಪರಿವಾರಸ್ಥರು |ಹುಮನಾಬಾದ್ ನಲ್ಲಿ  ವಿಜಯ ದಶಮಿ ಸಂಭ್ರಮಾಚರಣೆ

By admin

ಸೆಕ್ಯುಲರ್ ವಾಯ್ಸ್ ಹುಮನಾಬಾದ್

ನಗರದ ಹೊರ ವಲಯದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ವಿಜಯ ದಶಮಿ ಸಂಭ್ರಮದಿಂದ ಆಚರಿಸಲಾಯಿತು.

ಬೆಳಗ್ಗೆ ಭವಾನಿ ಮಾತೆ, ಐತಿಹಾಸಿಕ ದೇವಸ್ಥಾನ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಪಾಟೀಲ್ ಪರಿವಾಸ್ಥರು ಭೇಟಿ ನೀಡಿ, ಮಾಜಿ ಸಚಿವ ರಾಜಶೇಖರ ಪಾಟೀಲ್, ಎಂಎಲ್ಸಿ ಡಾ. ಚಂದ್ರಶೇಖರ ಪಾಟೀಲ್, ಎಂಎಲ್ಸಿ ಭೀಮರಾವ ಪಾಟೀಲ್ ದಂಪತಿಗಳು ಧಾರ್ಮಿಕ ವಿಧಿ ವಿಧಾನದಂತೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಯುವ ಮುಖಂಡರಾದ ಅಕ್ಷಯ ಪಾಟೀಲ್, ರುದ್ರಂ ಪಾಟೀಲ್ ಸೇರಿದಂತೆ ಪಾಟೀಲ್ ಪರಿವಾಸ್ಥರು ಉಪಸ್ಥಿತರಿದ್ದರು.