
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಸುರಪುರ ಶಾಸಕ ಹಾಗೂ ಉಗ್ರಾಣ ನಿಗಮದ ಅಧ್ಯಕ್ಷರಾದ ರಾಜಾ ವೆಂಕಟಪ್ಪ ನಾಯಕ (68) ಬೆಂಗಳೂರಿನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಶ್ರೀ ಕಡಕೋಳ ಮಡಿವಾಳೇಶ್ವರ ಮಹಾಮಠದ ಪೀಠಾಧಿಪತಿ ಷ.ಬ್ರ.ಡಾ.ರುದ್ರಮುನಿ ಶಿವಾಚಾರ್ಯರು, ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಸಂಘದ ತಾಲೂಕು ಗೌರವ ಅಧ್ಯಕ್ಷ ರವಿ ಯಕ್ಷಂತಿ, ಕಾರ್ಯದರ್ಶಿ ಹನುಮಂತ್ರಾಯ ದೊರೆ ಟೋಕಾಪುರ, ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಸಮಾಜದ ಮುಖಂಡರಾದ ಶೇಖರ ದೊರೆ ಸೇರಿದಂತೆ ನಾಯಕ ಸಮಾಜದ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.
