ಇಂದು‌ ಮುಡಬೂಳದಲ್ಲಿ ಕಡಕೋಳ ಮಡಿವಾಳೇಶ್ವರ ಮಹಾರಥೋತ್ಸವ

By admin


ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ

ತಾಲೂಕಿನ ಸುಕ್ಷೇತ್ರ ಮುಡಬೂಳದ ಶ್ರೀ ಕಡಕೋಳ ಮಡಿವಾಳೇಶ್ವರ ಶಾಖಾ ಮಠದಲ್ಲಿ 30ನೇ ಜಾತ್ರಾ‌‌ ಮಹೋತ್ಸವ ನಿಮಿತ್ತ ಇಂದು ಸಂಜೆ ಮಹಾರಥೋತ್ಸವ ಜರುಗಲಿದೆ.

ಜಾತ್ರಾ ಮಹೋತ್ಸವ ಪ್ರಯುಕ್ತ ಬೆಳಗ್ಗೆ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದ್ದು ನಾಡಿನ ಹಲವು ಶ್ರೀಗಳು ಪಾಲ್ಗೊಂಡು ಆಶೀರ್ವಾದಿಸಲಿದ್ದಾರೆ.

ಕಡಕೋಳ-ಮುಡಬೂಳ ಮಠದ ಪೀಠಾಧಿಪತಿಗಳಾದ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಮಹಾರಥೋತ್ಸವ ನಡೆಯಲಿದ್ದು, ಹಲವು ಧಾರ್ಮಿಕ ಕಾರ್ಯಕ್ರಮ 21 ದಿನಗಳವರಿಗೂ ಸತತವಾಗಿ ನಡೆದುಕೊಂಡು ಬಂದಿವೆ.ವೇ.ಮೂ.ಸಿದ್ಧಲಿಂಗಯ್ಯ ಸ್ವಾಮಿ, ಮುಖಂಡರಾದ ಶಂಕರಗೌಡ ಮಾಲಿ ಪಾಟೀಲ,  ಸಿದ್ದಣ್ಣ ಗೌಡ ಪೊಲೀಸ್ ಪಾಟೀಲ, ಬಸನಗೌಡ ಪೊಲೀಸ್ ಪಾಟೀಲ, ಬಾಪುಗೌಡ ಹಿರೇಗೌಡರ್, ರಾಜಶೇಖರಗೌಡ ಮಾಲಿಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಣ್ಣಗೌಡ ಮಾಲಿಪಾಟೀಲ್, ಶ್ರೀಶೈಲಪ್ಪ ಸಾಹು ಬುಕಿಷ್ಟಗಾರ್, ಬಸವರಾಜ ಮುದ್ನೂರ ಸಾಹು, ಶರಣು ಮುದ್ನೂರ ಸಾಹು, ನಾಗಣ್ಣ ಸಾಹು ಬುಕಿಷ್ಟಗಾರ್, ರಯುವ ಮುಖಂಡ ಶಾಂತಗೌಡ ಮಾಲಿ ಪಾಟೀಲ್, ಸೋಮಣ್ಣಗೌಡ ಚನ್ನಪಟ್ಟಣ, ಬಸವರಾಜ ಸಿರಿಮನಿ, ಶಿವಶರಣಪ್ಪ ಬುಸ್ಸಾ, ಅಂಬ್ರಣ್ಣ ಸಾಹು ಬುಸ್ಸಾ, ನಿಂಗಣ್ಣ ಸಜ್ಜನ್, ಬಸವರಾಜ ಸಜ್ಜನ್, ಮಲ್ಲಿಕಾರ್ಜುನ ಚಿಕ್ಕಮಠ, ಡಾ.ದೇವಿದಾಸ ಚಿಕ್ಕಮಠ, ಡಾ.ಶಿವಾನಂದರೆಡ್ಡಿ, ಶಿವು‌ ದೇಸಾಯಿ, ರವಿ ಚಿಕ್ಕಮಠ, ಮಾಹಂತೇಶ ಮಾಲಗತ್ತಿ, ಗುರುಲಿಂಗಯ್ಯ ಹಿರೇಮಠ್, ಹಣಮಂತ ಗುರಿಕಾರ, ನಿಂಗಣ್ಣ ಬಬಲಾದಿ ರವಿಕುಮಾರ್ ಬಬಲಾದಿ , ಬಸವರಾಜ ಕವಲ್ದಾರ್, ಶ್ರಿಶೈಲ್ ಅಗಸರ್, ಲಕ್ಷ್ಮಣ ಯಾದವ, ವಿಶ್ವ ಚನ್ನಪಟ್ಟಣ, ಪ್ರವೀಣ ದೇಸಾಯಿ, ಶರಣು ಸಿಂಪಿಗೇರ, ಮಾಳಪ್ಪ ಡ್ಯಾವಗುಂದ ಸೇರಿದಂತೆ ಸಾವಿರಾರು ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಳ್ಳಲಿದ್ದಾರೆ.