ಬೆಂಗಳೂರು: ’ಮೈಸೂರಿನ ಹುಲಿ’ ಎಂದೇ ಪ್ರಖ್ಯಾತರಾಗಿದ್ದ ದೊರೆ ಟಿಪ್ಪು ಸುಲ್ತಾನ್ ಜಯಂತಿ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಜಮೀರ್ ಅಹ್ಮದ್ ಖಾನ್, ಮಹಾಮಂಡಳ ರಾಜ್ಯ ಉಪಾಧ್ಯಕ್ಷ ಸೋಪಿಸಾಬ ಡಿ ಸುರಪುರ ಸಹಿತ ಹಲವು ಗಣ್ಯರು ನಾಡಿನ ಜನತೆಗೆ ಟಿಪ್ಪು ಜಯಂತಿಯ ಶುಭಾಶಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಅಪ್ರತಿಮ ದೇಶಪ್ರೇಮಿ,ವೀರ ಸ್ವಾತಂತ್ರ್ಯ ಹೋರಾಟಗಾರ,ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶಸ್ವರೂಪಿ ಜನನಾಯಕ ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.
ಶಾಸಕ ಜಮೀರ್ ಅಹ್ಮದ್ ಖಾನ್ ಟಿಪ್ಪು ಜಯಂತಿಯ ಶುಭ ಕೋರಿದ್ದಾರೆ.ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಬ್ರಿಟೀಷ್ ವಸಾಹತುಶಾಹಿ ಆಡಳಿತದ ವಿರುದ್ಧ ಸೆಟೆದು ನಿಂತು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಅಪ್ರತಿಮ ವೀರ,ತಾಯ್ನಾಡಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ನಿಸ್ವಾರ್ಥ ಸೇನಾನಿ “ಹಜ್ರತ್ ಟಿಪ್ಪು ಸುಲ್ತಾನ್” ಅವರನ್ನು ಅವರ ಜನ್ಮದಿನದಂದು ಗೌರವದಿಂದ ಸ್ಮರಿಸುತ್ತೇನೆ.ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಸೋಪಿಸಾಬ ಡಿ ಸುರಪುರ ಟಿಪ್ಪು ಸುಲ್ತಾನ್ ಜಯಂತಿ ಶುಭಕೋರಿದ್ದು
ಟಿಪ್ಪು ಸುಲ್ತಾನ್ ಅಪ್ಪಟ ದೇಶ ಪ್ರೇಮಿ.ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಎರಡು ಮಕ್ಕಳನ್ನು ಒತ್ತೆಯಿಟ್ಟ ಸ್ವಾತಂತ್ರ್ಯ ವೀರ.ಅವರ ಜನ್ಮದಿನದ ಸಂದರ್ಭದಲ್ಲಿ ಅವರ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾ,ನನ್ನ ಗೌರವ ನಮನಗಳನ್ನು ಅರ್ಪಿಸುತ್ತೇನೆ.ಶುಭಾಶಯ ಹೇಳಿದ್ದಾರೆ.
ಉಳಿದಂತೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್,ರಿಜ್ವಾನ್ ಅರ್ಷದ ನಾಡಿನ ಜನತೆಗೆ “ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯ ಶುಭ ಹಾರೈಸಿದ್ದಾರೆ.
