ನಕಲಿ ಚಿಕಿತ್ಸಾಲಯದ ಮೇಲೆ ದಾಳಿ;ಕಟ್ಟಿಮನಿ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಯಾದಗಿರಿ ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಬಗ್ಗೆ ಸಾರ್ವಜನಿಕರಿಂದ ಅರೋಪಗಳನ್ನು ಬರುತ್ತಿರುವ ಹಿನ್ನೆಲೆಯಲ್ಲಿ ಓರ್ವ ನಕಲಿ ಕ್ಲಿನಿಕ್ ವೈದ್ಯನನ್ನು ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಗಿದೆ ಕುಟುಂಬ ಕಲ್ಯಾಣ ಅಧಿಕಾರಿಗಳ ಜ್ಯೋತಿ ಕಟ್ಟಿಮನಿ ಅವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ವೈದ್ಯಧಿಕಾರಿಳ ತಂಡವು ಇಂದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಹೈಯಾಳ (ಬಿ) ಗ್ರಾಮದಲ್ಲಿ ನಕಲಿ ಕ್ಲಿನಿಕ ತಪಾಸಣ ವೇಳೆ ಅರಬಾಜ್ ಅಲಿ ಎಂಬುವ ನಕಲಿ ವೈದ್ಯನ ಮೇಲೆ ಏಠಿme ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಅವರ ನಿರ್ದೇಶನ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್, ಕುಟುಂಬ ಕಲ್ಯಾಣ ಡಾ.ಜೋತಿ ಕಟ್ಟಿಮನಿ ವೈದ್ಯಕೀಯ ತಂಡಗಳು ರಚಿಸಿ ಮುಂದಿನ ದಿನಗಳಲ್ಲಿ ಚುರಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಮಟ್ಟಹಾಕುವ ಕ್ರಮ ಕೈಗೊಂಡಿದ್ದಾರೆ.

ಡಿಹೆಚ್‌ಓ ಡಾ.ಪ್ರಭುಲಿಂಗ ಮಾನಕರ್. ಕುಟುಂಬ ಕಲ್ಯಾಣ ಡಾ.ಜೋತಿ ಮಾರ್ಗದರ್ಶನದಲ್ಲಿ ಹೈಯಾಳ (ಬಿ) ಗ್ರಾಮದಲ್ಲಿ ನಕಲಿ ಕ್ಲಿನಿಕ್ ತಾಪಸಣೆ ವೇಳೆ ಶಹಾಪುರ ತಾಲೂಕ ವೈದ್ಯಧಿಕಾರಿ ಡಾ.ರಮೇಶ ಗುತ್ತೇದಾರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.