ಸೆಕ್ಯುಲರ್ ವಾಯ್ಸ್ ನ್ಯೂಸ್ ರಾಯಚೂರು
ಅವೈಜ್ಞಾನಿಕ ಕಾಂತರಾಜು ವರದಿ ತಿರಸ್ಕಾರ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಯಿತು.
ಅವೈಜ್ಞಾನಿಕ ಜಾತಿ ಗಣತಿಯಿಂದ ಕೂಡಿದ ಎಚ್.ಕಾಂತರಾಜು ವರದಿ ರಾಜ್ಯ ಕೂಡಲೇ ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವೀರಶೈವ ಲಿಂಗಾಯತ ಸಮಾಜದಿಂದ ತೀವ್ರ ವಿರೋಧ ಇದೇ ಎಂದು ಆರೋಪಿಸಿದರು.ವರದಿ ಹಲವು ಲೋಪ-ದೋಷಗಳಿಂದ ಕೂಡಿದೆ ಇದು ಜಾರಿಯಾದರೆ ವೀರಶೈವ ಲಿಂಗಾಯತ ಸಮಾಜ ಮೂಲ ಸೌಲಭ್ಯಗಳಿಂದ ವಂಚಿತಗೊಳ್ಳುತ್ತದೆ ಎಂದು ಆರೋಪಿಸಿದರು.
ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಸಭೆಯಲ್ಲಿ ಕಾಂತರಾಜು ವರದಿಯ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಅಂತಿಮವಾಗಿ 5 ನಿರ್ಣಯಗಳನ್ನು ಕೈಗೊಂಡಿದೆ ಎಂದರು.
ಕಳೆದ ಹತ್ತು ವರ್ಷಗಳ ಹಿಂದೆ ನಡೆಸಲಾದ ಸಮೀಕ್ಷೆಯ ವರದಿಯು ಹಲವು ಲೋಪಗಳಿಂದ ಕೂಡಿದೆ. ಆದ್ದರಿಂದ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು.ಕಾಂತರಾಜ್ ನೇತೃತ್ವದ ಆಯೋಗ ನಡೆಸಿದ ಸಮೀಕ್ಷೆಯ ವರದಿಯನ್ನು ಆಧರಿಸಿ, ಈಗ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಸಲ್ಲಿಸಿದೆ. ಅದು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿದೆ. ಆದ್ದರಿಂದ ವರದಿಗೆ ಸಂಬಂಧಿಸಿದ ಉದ್ದೇಶಿತ ಪ್ರಕ್ರಿಯೆಯನ್ನು ಸಿಎಂ ಕೈಬಿಡಬೇಕು.ಕಾಂತರಾಜ್ ನೇತೃತ್ವದ ಆಯೋಗ ನಡೆಸಿದ ಸಮೀಕ್ಷೆಯ ವರದಿಯನ್ನು ಆಧರಿಸಿ, ಈಗ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಸಲ್ಲಿಸಿದೆ. ಅದು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿದೆ. ಆದ್ದರಿಂದ ವರದಿಗೆ ಸಂಬಂಧಿಸಿದ ಉದ್ದೇಶಿತ ಪ್ರಕ್ರಿಯೆಯನ್ನು ಸಿಎಂ ಕೈಬಿಡಬೇಕು.ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಲಿಂಗಾಯತ ಉಪ ಜಾತಿಗಳ ಹೆಸರನ್ನು ಮಾತ್ರ ನಮೂದಿಸಲಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಲ್ಲಾ ಲಿಂಗಾಯತ ಉಪ ಪಂಗಡಗಳನ್ನು ಲಿಂಗಾಯತ ಎಂದು ನಮೂದಿಸಲು ಅವಕಾಶ ನೀಡಬೇಕು
ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಶಿಫಾರಸು ಮಾಡಬೇಕು. ಯಾವುದೆ ಕಾರಣಕ್ಕೆ ಕಾಂತರಾಜು ವರದಿ ಜಾರಿ ಮಾಡಬಾರದು ಜಾತಿಗಣತಿ ವರದಿ ಅಂಗೀಕಾರ ಸಮಾಜದಿಂದ ತೀವ್ರ ವಿರೋಧ ಇದೆ ಎಂದರು.ಈ ಕೂಡಲೇ ವರದಿ ತಿರಸ್ಕಾರ ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಚಂದ್ರಶೇಖರ್ ಪಾಟೀಲ್ ಮಿರ್ಜಾಪೂರು,ದೋತರ ಬಂಡಿ ಮಲ್ಲಿಕಾರ್ಜುನ ಸೇರಿದಂತೆ ಉಪಸ್ಥಿತರಿದ್ದರು.

