ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಗಳ ನೋಂದಾವಣಿಗೆ ಆಹ್ವಾನ

By admin

ಯಾದಗಿರಿ :  2025-26ನೇ ಸಾಲಿನ ಯಾದಗಿರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಗಳ ನೋಂದಾವಣಿಗೆ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ರಾಜು ಬಾವಿಹಳ್ಳಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಯಾದಗಿರಿ ಜಿಲ್ಲಾ ಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪೂರ, ಸುರಪುರ, ಗುರುಮಠಕಲ್, ವಡಗೇರಾ, ಹುಣಸಗಿ, ತಾಲ್ಲೂಕುಗಳ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು, ಆಯಾ ತಾಲ್ಲೂಕುಗಳ ಕ್ರೀಡಾಕೂಟುಗಳು 2025ರ ಆಗಸ್ಟ್ 22ರ ಒಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ತಾಲ್ಲೂಕು ಮಟ್ಟದಲ್ಲಿ ನಡೆಸಲಾಗುವ ಅಥ್ಲಟಿಕ್ಸ್, ವಾಲಿಬಾಲ್, ಖೋ, ಖೋ, ಕಬ್ಬಡ್ಡಿ, ಥ್ರೋಭಾಲ್, ಫುಟ್‌ಬಾಲ್ ಮತ್ತು ಯೋಗ ವಿಭಾಗದಲ್ಲಿ ಭಾಗವಹಿಸಬೇಕು, ಕ್ರೀಡಾಪಟುಗಳು 2025ರ ಆಗಸ್ಟ್ 22ರ ಒಳಗೆ ಹೆಸರು ಮತ್ತು ವಿವರಗಳೊಂದಿಗೆ ನೀಡಲಾದ ಕ್ಯೂಆರ್ ಕೋಡ್ ಲಿಂಕ್ ಮುಖಾಂತರ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.