3 ಕರ್ನಾಟಕ ಏರ್ ಎನ್‌ಸಿಸಿ ವತಿಯಿಂದ ಬ್ರಿಮ್ಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಬೀದರ

ನಗರದಲ್ಲಿ ಇಂದು ರಕ್ತದಾನದ ಮಹತ್ವದ ಬಗ್ಗೆ ಅರಿವು ಹೆಚ್ಚಿಸಲು ಮತ್ತು ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಎನ್‌ಸಿಸಿ ಕೆಡೆಟ್‌ಗಳಲ್ಲಿ ನಿರ್ದಿಷ್ಟವಾಗಿ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸಲು ಬೀದರ ಪೊಲೀಸ್ ಮತ್ತು ಬ್ರಿಮ್ಸ್ ಆಸ್ಪತ್ರೆಯ ಸಮನ್ವಯದಲ್ಲಿ 3 ಕರ್ನಾಟಕ ಏರ್ ಎನ್‌ಸಿಸಿ ಬೀದರ ವತಿಯಿಂದ ರಾಷ್ಟಿçÃಯ ಕೆಡೆಟ್ ಕಾರ್ಪ್ಸ್ ರೈಸಿಂಗ್ ದಿನವನ್ನು ಆಚರಿಸುವ ನಿಮಿತ್ಯ ರಕ್ತ ದಾನ ಶಿಬಿರವನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ರಕ್ತದಾನ ಜಾಗೃತಿ ರ‍್ಯಾಲಿ: ಬೆಳಿಗ್ಗೆ 9 ಗಂಟೆಗೆ ರಕ್ತದಾನ ಜಾಗೃತಿ ರ‍್ಯಾಲಿಯು ಬ್ರಿಮ್ಸ್ ಆಸ್ಪತ್ರೆಯಿಂದ ಪ್ರಾರಂಭಗೊAಡು ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ನೆಹರು ಕ್ರೀಡಾಂಗಣದ ಮೂಲಕ ಮರಳಿ ಬ್ರಿಮ್ಸ್ ಆಸ್ಪತ್ರೆಗೆ ತಲುಪಿತು. ಈ ರ‍್ಯಾಲಿಯಲ್ಲಿ ಒಟ್ಟು 120 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದು, 50 ಕೆಡೆಟ್‌ಗಳು ಈ ದಿನ ರಕ್ತದಾನ ಮಾಡಲು ಸ್ವಯಂ ಪ್ರೇರಿತರಾಗಿದ್ದರು.
ಗ್ರೂಪ್ ಕ್ಯಾಪ್ಟನ್ ವಿಎನ್‌ಎಲ್ ರೆಡ್ಡಿ, ಕಮಾಂಡಿಗ್ ಆಫೀಸರ್ 3 ಕಾರ್ ಏರ್ ಎನ್‌ಸಿಸಿ, ಎನ್‌ಸಿಸಿ ಸಿಬ್ಬಂದಿ, ಫ್ಲೈಟ್ ಲೆಫ್ಟಿನೆಂಟ್ ಅನೂಪ್ ಕುಮಾರ್ ಎಲಿಯಾ, ಎಎನ್‌ಒಎಫ್ ಗುರುನಾನಕ್ ದೇವ್ ಎಂಜಿನಿಯರಿಗ್ ಕಾಲೇಜು, ಫ್ಲೈಯಿಂಗ್ ಆಫೀಸರ್ ನಾಗರಾಜ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಎನ್‌ಒಎಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.