
ಶಹಾಪುರ: ಗ್ರಾಮದ ಪ್ರತಿ ಮನೆಯಿಂದ ನಿತ್ಯ ಉತ್ಪತ್ತಿಯಾಗುವ ಹಸಿ ಕಸ-ಒಣ ಕಸ ಹಾಗೂ ಅಪಾಯಕಾರಿ ಕಸ ಸಂಗ್ರಹಿಸಿ, ಸಂಸ್ಕರಿಸಿ ವಿಲೇವಾರಿ ಮಾಡುವ ಸ್ವಚ್ಛತಾ ಸಿಬ್ಬಂದಿಗಳ ಪಾತ್ರ ಅನನ್ಯವಾಗಿದೆ ಎಂದು ಶಹಾಪುರ ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕಿ ಶ್ರೀ ಶ್ರೀಮತಿ ಶಾರದಮ್ಮ ಅವರು ಹೇಳಿದರು.
ಜಿಲ್ಲಾ ಪಂಚಾಯತ ಯಾದಗಿರಿ, ತಾಲೂಕ ಪಂಚಾಯತ ಶಹಾಪುರ, ಸ್ವಚ್ಛÀ ಭಾರತ ಮಿಷನ್(ಗ್ರಾ), ಸಾಹಸ್À ಸಂಸ್ಥೆಯ ಹಾಗೂ ರೈನ್ ಮ್ಯಾಟರ್ ಪೌಂಡೇಷನ್ ಇವರ ಸಹಯೋಗದಲ್ಲಿ ಹಸಿ ಕಸ-ಒಣ ಕಸ ಸಂಗ್ರಹ, ವಿಂಗಡಣೆ, ಸುಸ್ಥಿರ ಘನತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ ಕುರಿತು ಜೂ.04ರಂದು ಶಹಾಪುರ ತಾಲೂಕು ಪಂಚಾಯತ ಸಭಾಂಗಣದಲ್ಲಿ ಗ್ರಾಮ ಪಂಚಾಯತ ಸ್ವಚ್ಛತಾ ಸಿಬ್ಬಂದಿ ಹಾಗೂ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗಾಗಿ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮದ ಮನೆಗಳಿಂದ ಉತ್ಪತ್ತಿಯಾಗುವ ಘನತ್ಯಾಜ್ಯ ಸಂಗ್ರಹಿಸಲು ಗ್ರಾಮ ಪಂಚಾಯಿತಿ ಮನೆಗೂಂದು ಕಸದ ಬುಟ್ಟಿಗಳನ್ನು ನೀಡಿದ್ದು, ಜನರು ತಮ್ಮ ಮನೆಯ ತ್ಯಾಜ್ಯವನ್ನು ಎಲೆಂದರಲ್ಲಿ ರಸ್ತೆಬದಿ, ಚರಂಡಿಯಲ್ಲಿ ಬಿಸಾಕದೆ, ತಮಗೆ ನೀಡಿದ ಕಸ ಸಂಗ್ರಹ ಬುಟ್ಟಿಗಳಲ್ಲಿ ಸಂಗ್ರಹಿಸಿ, ನಿತ್ಯ ಮನೆಯ ಹತ್ತಿರ ಬರುವ ಕಸ ಸಂಗ್ರಹಿಸುವ ಸ್ವಚ್ಛತಾ ವಾಹನದ ಸಿಬ್ಬಂದಿಗೆ ನೀಡಿದರೆ ಗ್ರಾಮದ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾಪಾಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಸ್ವಚ್ಛತಾ ಸಿಬ್ಬಂದಿಗಳಾಗಿ ಕೆಲಸ ಮಾಡುವರಿಗೆ ದೈಹಿಕ ಆರೋಗ್ಯ ರಕ್ಷಣೆ ಅಗತ್ಯವಾಗಿದೆ. ಹಾಗಾಗಿ, ನಮ್ಮ ಕುಟುಂಬದ ಸದಸ್ಯರು ಆರೋಗ್ಯವಾಗಿರಲು ನಮ್ಮ ಮನೆಯ ಮುಂದೆ ಇಲ್ಲವೇ ಇತ್ತಲಲ್ಲಿ ಪೌಷ್ಟಿಕ ಕೈತೋಟ ಮಾಡಿಕೊಂಡು ದಿನ ನಿತ್ಯದ ಊಟಕ್ಕೆ ಬೇಕಾದ ತಾಜಾ ತರಕಾರಿ ಬೆಳೆದು, ತಯಾರಿಸಿದ ಆಹಾರ ನಮ್ಮ ಆರೋಗ್ಯದ ಸದೃಢತೆಗೆ ಪೂರಕವಾಗುತ್ತೆ ಎಂದು ಮಾಹಿತಿ ನೀಡಿದರು.
ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಮಲ್ಲಣ್ಣ ದೇಸಾಯಿ ಅವರು ಮಾತನಾಡಿ, ಸರಕಾರ ಮಹಿಳೆಯರ ಹಾಗೂ ಮಕ್ಕಳ ಸದೃಢ ಆರೋಗ್ಯಕ್ಕೆ ಪೂರಕವಾಗಲು ಹಲವು ಯೋಜನೆಗಳನ್ನು ಜಾರಿಗೆ ತಂದು, ಅಂಗನವಾಡಿಗಳ ಮೂಲಕ ಅನುಷ್ಟಾನ ಮಾಡುತ್ತಿದೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಅಪೌಷ್ಟಿಕ ಮಕ್ಕಳ ಸದೃಢ ಆರೋಗ್ಯಕ್ಕೆ ಪೂರಕವಾಗಲು ಅಂಗನವಾಡಿಗಳ ಮೂಲಕ ಪೂರಕ ಪೌಷ್ಟಿಕ ಆಹಾರದ ವಿತರಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು, ಈ ನಿಟ್ಟಿನಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಜನರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು
ಮಕ್ಕಳಿಗೆ 18 ವರ್ಷ ಪೂರ್ವದಲ್ಲೆ ಮದುವೆ ಮಾಡಿದರೆ, ಹುಟ್ಟುವ ಮಕ್ಕಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಾರೆ. ಅಲ್ಲದೇ, ಬಾಲ್ಯವಿವಾಹ ಕಾನೂನಿಗೆ ವಿರುದ್ಧವಾದ ಅಪರಾಧ ಮಕ್ಕಳ ಪೂಷಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಶಿರÀವಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಿಯಾ ಪಾಟೀಲ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಾವು ತಿನ್ನುವ ಆಹಾರ ಹೊಟ್ಟೆ ತುಂಬುತ್ತೆ, ಆದರೇ ಆಹಾರದಲ್ಲಿ ಯಾವುದೇ ಶಕ್ತಿ ಇರಲ್ಲ. ಬೆಳೆಯುವ ಮಕ್ಕಳ ಆಹಾರ ಪದ್ದತಿ ಮನೆಯಿಂದಲೇ ಬದಲಾಗಬೇಕು ಮನೆಯಲ್ಲಿ ಮಾಡಿದ ಆಹಾರವನ್ನೆ ತಿನ್ನಿಸಿ, ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಿ, ಮಕ್ಕಳ ಆರೋಗ್ಯ ಕಾಪಾಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ಹೆಣ್ಣು ಮಕ್ಕಳ ದೈಹಿಕ ಆರೋಗ್ಯ ಸುರಕ್ಷತೆಗೆ ಮಕ್ಕಳ ತಾಯಂದಿರೇ ತಿಳಿ ಹೇಳಬೇಕು. ಅದು ತಾಯಂದಿರ ಜವಾಬ್ದಾರಿ. ಮುಟ್ಟಿನ ತೊಂದರೆ ಹಾಗೂ ಅನುಸರಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಮಕ್ಕಳಿಗೆ ಚಿಕ್ಕ ವಯಸ್ಸಲ್ಲಿ ಮದುವೆ ಮಾಡಬೇಡಿ. ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಯಾದಗಿರಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್ ಮಾತನಾಡಿ ಪೋಸ್ಟ್ ಬ್ಯಾಂಕ್ ಯೋಜನೆಗಳ ಇನ್ಸೂರೆನ್ಸ್ ಕುರಿತು ಮಾಹಿತಿ ನೀಡಿದರು.
ಈ ವೇಳೆ ಸಾಹಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ವಿನೋಧ ದೊಡ್ಮನಿ, ಯಾದಗಿರಿ ಜಿಲ್ಲಾ ಪಂಚಾಯತ ಸ್ವಚ್ಛ ಬಾರತ ಮಿಷನ್ ಐಇಸಿ ಸಂಯೋಜಕ ಶಿವುಕುಮಾರ, ಜಿಲ್ಲಾ ಸಹ ಸಂಯೋಜಕ ರವಿಚಂದ್ರ ಚಟ್ನಳ್ಳಿ, ತಾಲೂಕ ಮೇಲ್ವಿಚಾರಕ ಬಾಲಯ್ಯ, ಆನಂದಕುಮಾರ, ಶಹಾಪುರ ತಾಲೂಕ ಪಂಚಾಯತ ಎನ್‌ಆರ್‌ಎಲ್‌ಎಂ ಸಿಬ್ಬಂದಿ, ತಾಲೂಕಿನ ಸ್ವಚ್ಛತಾ ಸಿಬ್ಬಂದಿಗಳು ಇದ್ದರು.
