“ಕೊಪ್ಪಳ | 4 ವರ್ಷದ ಬಾಲಕ ಅರ್ಮಾನ್ ಅಲಿ ಕಾಣೆ : ಪತ್ತೆಗೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ”

Contents
“ಕೊಪ್ಪಳ | 4 ವರ್ಷದ ಬಾಲಕ ಅರ್ಮಾನ್ ಅಲಿ ಕಾಣೆ : ಪತ್ತೆಗೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ”ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ :ಕೊಪ್ಪಳ : ನಗರದ ಮಿಟ್ಟಿಕೇರಿ ಬಡಾವಣೆಯ ನಿವಾಸಿ ರುಬಿಯಾ ಬಾನು ಗಂಡ ಸಾಧಿಕ್ ಅಲಿ ಅಳವಂಡಿ ಇವರ ಮಗ ಮೊಹಮ್ಮದ್ ಅರ್ಮಾನ್ ಅಲಿ ಕಾಣೆ ಆಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.ಈ ಸಂಬಂಧ ತೀವ್ರವಾಗಿ ಪತ್ತೆ ಹಚ್ಚಲು ಒತ್ತಾಯಿಸಿ ಕರೀಮ್ ಪಾಷಾ ಎಂ.ಗಚ್ಚಿನಮನಿ ಅವರ ನೇತೃತ್ವದಲ್ಲಿ ಬುಧವಾರ ವಿವಿಧ ಸಂಘಟನೆಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್.ಅರಸಿದ್ದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮೊಹಮ್ಮದ್ ಅರ್ಮಾನ್ ಅಲಿ ನಾಲ್ಕು ವರ್ಷದ ಬಾಲಕ ಸೆ. 02 ರಂದು ಕಾಣೆಯಾಗಿರುವ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಾಲಕ ಸುಮಾರು ಎಂಟು ದಿವಸ ಕಳೆದರೂ ಇಲ್ಲಿಯವರೆಗೆ ಪತ್ತೆ ಆಗದೆ ಇರುವುದರಿಂದ ಪಾಲಕರಲ್ಲಿ ಆತಂಕ ಮನೆ ಮಾಡಿದೆ.ನಿತ್ಯ ಕೂಲಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿರುವ ಬಡ ಕುಟುಂಬದ ಮಗನ ಪತ್ತೆಗಾಗಿ ಸಂಬಂಧಪಟ್ಟ ಠಾಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಬೇಕೆಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಾಲಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.ಈ ಸಂದರ್ಭದಲ್ಲಿ ಅಹಿಂದ ಮುಖಂಡ ಕರೀಮ್ ಪಾಷಾ ಎಂ.ಗಚ್ಚಿಮನಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್, ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ, ಎಂ.ಎಸ್.ಕೆ.ಶಫಿಕ್, ಕಾಣೆಯಾದ ಮೊಹಮ್ಮದ್ ಅರ್ಮಾನ್ ಅಲಿಯ ತಂದೆ ಸಾಧಿಕ್ ಅಲಿ ಅಳವಂಡಿ, ಆಟೋರಿಕ್ಷಾ ಚಾಲಕರ ಹಾಗೂ ಮಾಲಿಕರ ಸಂಘದ ಅಧ್ಯಕ್ಷ ಗವಿಸಿದ್ದಪ್ಪ ಚಾಕ್ರಿ. ಸೈಯ್ಯದ್ ಅಬ್ದುಲ್ ಖಾದರ್ ಪೀರಝಾದೆ, ಮೌಲಾ ಹುಸೇನ್ ಕೋಲ್ಕಾರ್, ಮಹೆಬೂಬ್ ಅರಗಂಜಿ, ಜಮಾಲ್ ದಫೇದಾರ್,ಮಾನವಿ ಪಾಷಾ ಮುಂತಾದವರು ಇದ್ದರು.
