LOCAL NEWS : “ಯಾದಗಿರಿ | ಸೆ.13ರಂದು ಅದ್ಧೂರಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ”

By admin

” ಯಾದಗಿರಿ| ಸೆ. 13ರಂದು ಅದ್ಧೂರಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ |  ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ..!”

 

Contents
” ಯಾದಗಿರಿ| ಸೆ. 13ರಂದು ಅದ್ಧೂರಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ |  ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ..!”ಯಾದಗಿರಿ : ನಗರದ ಅಂಬಾ ಭವಾನಿ ದೇವಸ್ಥಾನ ಸಮೀಪ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯನ್ನು ಇದೇ ಸೆ.13 ರಂದು ಶೋಭಾಯಾತ್ರೆಯನ್ನು ಡಿಗ್ರಿ ಕಾಲೇಜ್‌ನಿಂದ ಪ್ರಾರಂಭವಾಗಲಿದೆ ಎಂದು ಸಮಿತಿ ಅಧ್ಯಕ್ಷ ಜಿ. ಭೀಮರಾಯ ತಿಳಿಸಿದ್ದಾರೆ.ಶನಿವಾರ ಮಧ್ಯಾಹ್ನ 2 ಗಂಟೆಗೆ ಅದ್ಧೂರಿ ಶೋಭಾಯಾತ್ರೆಯನ್ನು ಪದವಿ ಕಾಲೇಜು ಮಾರ್ಗವಾಗಿ ನೇತಾಜಿ ಶುಭಾಶ್ಚಂದ್ರ ಬೋಸ್‌ ವೃತ್ತ, ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕನಕ ವೃತ್ತ, ಬಾಬು ಜಗಜೀವನ ರಾಮ್ ವೃತ್ತ, ವೀರಶೈವ ಕಲ್ಯಾಣ ಮಂಟಪ, ಮಹಾತ್ಮ ಗಾಂಧಿ ವೃತ್ತ, ಮೈಲಾಪುರ ಅಗಸಿ ಮೂಲಕ ಶೋಭಾಯಾತ್ರೆ ನಡೆಯಲಿದೆ.ಶೋಭಾಯಾತ್ರೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಭಕ್ತರು ಆಗಮಿಸುವವರು ಮತ್ತು ಮಂಗಳೂರಿನಿಂದ ಹುಲಿ ವೇಷ, ಬಾಲರಾಮ, ಹಾಗೂ ಹನುಮನ ವೇಷದಲ್ಲಿ ಈ ಒಂದು ಶೋಭಯಾತ್ರೆ ಭಾಗವಹಿಸುತ್ತಾರೆ. ಡೋಲು ಟಮಟೆ ವಾದನೆಯೊಂದಿಗೆ ಕಲಾವಿದರು ಪ್ರೇಕ್ಷಕರ ಮನಸ್ಸನ್ನು ಸೆಳೆಯುವ ಪ್ರದರ್ಶನ ನೀಡಲಿದ್ದಾರೆ. ಇನ್ನು ಬೇರೆಬೇರೆ ಜಿಲ್ಲೆಗಳಿಂದ 50, ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪ್ರಲ್ಹಾರದ್ ನಗರವಾಸಿ, ಭಜರಂಗದಳದ ಅಧ್ಯಕ್ಷ ಶಿವಕುಮಾರ, ಮಲ್ಲು ಮ್ಯಾಳಗಿ, ಮತ್ತು ಚಂದ್ರು ಅನಪುರು, ಹಾಜರಿದ್ದರು.

ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :

ಯಾದಗಿರಿ : ನಗರದ ಅಂಬಾ ಭವಾನಿ ದೇವಸ್ಥಾನ ಸಮೀಪ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯನ್ನು ಇದೇ ಸೆ.13 ರಂದು ಶೋಭಾಯಾತ್ರೆಯನ್ನು ಡಿಗ್ರಿ ಕಾಲೇಜ್‌ನಿಂದ ಪ್ರಾರಂಭವಾಗಲಿದೆ ಎಂದು ಸಮಿತಿ ಅಧ್ಯಕ್ಷ ಜಿ. ಭೀಮರಾಯ ತಿಳಿಸಿದ್ದಾರೆ.

ಶನಿವಾರ ಮಧ್ಯಾಹ್ನ 2 ಗಂಟೆಗೆ ಅದ್ಧೂರಿ ಶೋಭಾಯಾತ್ರೆಯನ್ನು ಪದವಿ ಕಾಲೇಜು ಮಾರ್ಗವಾಗಿ ನೇತಾಜಿ ಶುಭಾಶ್ಚಂದ್ರ ಬೋಸ್‌ ವೃತ್ತ, ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕನಕ ವೃತ್ತ, ಬಾಬು ಜಗಜೀವನ ರಾಮ್ ವೃತ್ತ, ವೀರಶೈವ ಕಲ್ಯಾಣ ಮಂಟಪ, ಮಹಾತ್ಮ ಗಾಂಧಿ ವೃತ್ತ, ಮೈಲಾಪುರ ಅಗಸಿ ಮೂಲಕ ಶೋಭಾಯಾತ್ರೆ ನಡೆಯಲಿದೆ.

ಶೋಭಾಯಾತ್ರೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಭಕ್ತರು ಆಗಮಿಸುವವರು ಮತ್ತು ಮಂಗಳೂರಿನಿಂದ ಹುಲಿ ವೇಷ, ಬಾಲರಾಮ, ಹಾಗೂ ಹನುಮನ ವೇಷದಲ್ಲಿ ಈ ಒಂದು ಶೋಭಯಾತ್ರೆ ಭಾಗವಹಿಸುತ್ತಾರೆ. ಡೋಲು ಟಮಟೆ ವಾದನೆಯೊಂದಿಗೆ ಕಲಾವಿದರು ಪ್ರೇಕ್ಷಕರ ಮನಸ್ಸನ್ನು ಸೆಳೆಯುವ ಪ್ರದರ್ಶನ ನೀಡಲಿದ್ದಾರೆ. ಇನ್ನು ಬೇರೆಬೇರೆ ಜಿಲ್ಲೆಗಳಿಂದ 50, ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಲ್ಹಾರದ್ ನಗರವಾಸಿ, ಭಜರಂಗದಳದ ಅಧ್ಯಕ್ಷ ಶಿವಕುಮಾರ, ಮಲ್ಲು ಮ್ಯಾಳಗಿ, ಮತ್ತು ಚಂದ್ರು ಅನಪುರು, ಹಾಜರಿದ್ದರು.