“ಶಹಾಪೂರ| ಯಾರಲ್ಲಿ ಶಿಸ್ತು, ಕ್ಷಮೆ,ಕರುಣೆವುಳ್ಳ ಗುಣಗಳನ್ನು ಹೊಂದಿದ್ದಾರೆ ಅವರೇ ಶಿಕ್ಷಕರು – ರೇವಣಸಿದ್ದೇಶ್ವರ ಆಲ್ದಾಳ”

Contents
“ಶಹಾಪೂರ| ಯಾರಲ್ಲಿ ಶಿಸ್ತು, ಕ್ಷಮೆ,ಕರುಣೆವುಳ್ಳ ಗುಣಗಳನ್ನು ಹೊಂದಿದ್ದಾರೆ ಅವರೇ ಶಿಕ್ಷಕರು – ರೇವಣಸಿದ್ದೇಶ್ವರ ಆಲ್ದಾಳ”ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ :ಶಹಾಪೂರ : ತಾಲೂಕಿನ ಹಳಿಸಗರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿಗಳಿಂದ ಆಚರಿಸಲಾಯಿತು. ಶಿಕ್ಷಕರಿಗೆ ಹಲವು ಆಟಗಳನ್ನು ಆಡಿಸಿ ಬಹುಮಾನವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಶಿಕ್ಷಕ ರೇವಣಸಿದ್ದೇಶ್ವರ ಆಲ್ದಾಳ ಮಾತನಾಡಿ , ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು, ನೀವು ಮುಂದೆ ವಿದ್ಯಾ ಬುದ್ಧಿ ಕಲಿತು ಸಮಾಜದಲ್ಲಿ ಒಳ್ಳೆಯ ಹೆಸರಾಂತ ವಿದ್ಯಾರ್ಥಿಗಳಾಗಬೇಕು ಮತ್ತು ತಂದೆ ತಾಯಿಗಳ ಕೀರ್ತಿಗೆ ಪಾತ್ರರಾಗಬೇಕೆಂದು ಸಲಹೆ ನೀಡಿದರು.ಗುರುಮಾತೆ ರೇಣುಕಾ,ವಿದ್ಯಾವತಿ ಅವರು ಮಾತನಾಡಿದರು.ಮುಖ್ಯಗುರುಗಳಾದ ರಾಜಣ್ಣ ಗೋಟೂರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸಂಧ್ಯಾ,ಭೀಮಬಾಯಿ, ವಿಜಯಲಕ್ಷ್ಮಿ, ಅಮೃತಾ, ಸ್ವರೂಪರಾಣಿ,ಚಂದ್ರಕಲಾ, ಶ್ರೀದೇವಿ, ನಾಗವೇಣಿ, ಯಲ್ಲಮ್ಮ, ಶಿಕ್ಷಕರಾದ ರಾಚಯ್ಯಸ್ವಾಮಿ, ಮಲ್ಲಿಕಾರ್ಜುನ ಭಾಗವಹಿಸಿದ್ದರು.ವಿದ್ಯಾರ್ಥಿ ಸುದರ್ಶನ್ ಸ್ವಾಗತಿಸಿದನು, ವಿದ್ಯಾರ್ಥಿನಿ ಜಗದೇವಿ ಪ್ರಾರ್ಥನೆ ಗೀತೆ ಹಾಡಿದಳು ಮತ್ತು ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಅತಿಥಿ ಶಿಕ್ಷಕಿ ದೇವಮ್ಮ ನಿರೂಪಿಸಿದರು.
