LOCAL NEWS : “ಔರಾದ | ದುಶ್ಚಟಗಳಿಂದ ಆಗುವ ಪರಿಣಾಮಗಳ ಕುರಿತು ಶಿಬಿರ ಮತ್ತು ಜಾಗೃತಿ ಜಾಥಾ” 

By admin

“ಔರಾದ | ದುಶ್ಚಟಗಳಿಂದ ಆಗುವ ಪರಿಣಾಮಗಳ ಕುರಿತು ಶಿಬಿರ ಮತ್ತು ಜಾಗೃತಿ ಜಾಥಾ” 

 

Contents
“ಔರಾದ | ದುಶ್ಚಟಗಳಿಂದ ಆಗುವ ಪರಿಣಾಮಗಳ ಕುರಿತು ಶಿಬಿರ ಮತ್ತು ಜಾಗೃತಿ ಜಾಥಾ” ಔರಾದ :  ದುಶ್ಚಟಗಳಿಂದ ಆಗುವ ಪರಿಣಾಮಗಳ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ತಾಲ್ಲೂಕು ಮದ್ಯ ವರ್ಜನಾ ಶಿಬಿರ ಅಧ್ಯಕ್ಷ ಅಶೋಕ್ ಶೇಂಬೆಳ್ಳಿ ಹೇಳಿದರು.ಬುಧವಾರ ತಾಲೂಕಿನ ಸಂತಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಜರುಗಿದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವ್ಯಸನ ಮುಕ್ತ, ಸದೃಢ ಭಾರತ ನಿರ್ಮಾಣದಲ್ಲಿ ಯುವಕರ ಕೊಡುಗೆ ಪ್ರಮುಖವಾಗಿದೆ. ಮಾದರಿ ಸಮಾಜ ನಿರ್ಮಾಣದ ಪ್ರಯತ್ನ ನಮ್ಮೆಲ್ಲರ ಹೊಣೆ ಆಗಿದೆ. ಮಕ್ಕಳು ಮೊಬೈಲ್ ಗಿಳಿನಿಂದ ದೂರ ಉಳಿದು, ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ, ಮುಂದಿನ ದಿನಗಳಲ್ಲಿ ಸಮಾಜದ ಒಳ್ಳೆ ವ್ಯಕ್ತಿಗಳಾಗಿ ಹೊರಹೋಮ್ಮಬೇಕು ಎಂದರು. ಪ್ರಾಂಶುಪಾಲ ತುಕಾರಾಮ್ ಯಾತಪ್ಪ ನವರ್ ಅಧ್ಯಕ್ಷತೆ ವಹಿಸಿ ಮಾತನಾಡಿ̧ ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ ಹಂತದ ಮಕ್ಕಳು ವಿವಿಧ ವ್ಯಸನಗಳ ದಾಸರಾಗುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಶಾಲಾ ಕಾಲೇಜುಗಲ್ಲಿ ಶಿಬಿರ ಮತ್ತು ಜಾಗೃತಿ ಜಾಥಾ ಹಮ್ಮಿಕೊಂಡು ವ್ಯಸನ ಮುಕ್ತ ಸಮಾಜ ಮಾಡಲು ಶ್ರಮಿಸುತ್ತಿರುವುದು ಸಂತಸದ ಸಂಗತಿಯಾಗಿದೆ.. ಯುವ ಜನತೆ ಕೆಟ್ಟ ಚಟಗಳ ವಿರುದ್ದ ಹೋರಾಡುವ ಗುಣ ಹೊಂದಿದ್ದಾಗ ಮಾತ್ರ ಸದೃಢ ಭಾರತದ ಕನಸನ್ನು ನನಸಾಗಲು ಸಾಧ್ಯವಾಗುತ್ತದೆ ಎಂದರು.ಯೋಜನಾಧಿಕಾರಿ ರಾಘವೇಂದ್ರ ಗೌಡ ಮಾತನಾಡಿ, ಯುವ ಜನತೆಯಲ್ಲಿ ದುಶ್ಚಟಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಶಾಲಾ ಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಇದರ ಪ್ರಯೋಜನ ಪಡೆದು ಮಾದರಿ ಪ್ರಜೆಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಜನ ಜಾಗ್ರತಿ ಸದಸ್ಯೆ ಸಪ್ನಾ ಖಂಡೆ, ಆದೇಶ, ಪ್ರವೀಣ, ರಮೇಶ್ ಇದ್ದರು.

 

ಔರಾದ ದುಶ್ಚಟಗಳಿಂದ ಆಗುವ ಪರಿಣಾಮಗಳ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ತಾಲ್ಲೂಕು ಮದ್ಯ ವರ್ಜನಾ ಶಿಬಿರ ಅಧ್ಯಕ್ಷ ಅಶೋಕ್ ಶೇಂಬೆಳ್ಳಿ ಹೇಳಿದರು.

ಬುಧವಾರ ತಾಲೂಕಿನ ಸಂತಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಜರುಗಿದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವ್ಯಸನ ಮುಕ್ತ, ಸದೃಢ ಭಾರತ ನಿರ್ಮಾಣದಲ್ಲಿ ಯುವಕರ ಕೊಡುಗೆ ಪ್ರಮುಖವಾಗಿದೆ. ಮಾದರಿ ಸಮಾಜ ನಿರ್ಮಾಣದ ಪ್ರಯತ್ನ ನಮ್ಮೆಲ್ಲರ ಹೊಣೆ ಆಗಿದೆ. ಮಕ್ಕಳು ಮೊಬೈಲ್ ಗಿಳಿನಿಂದ ದೂರ ಉಳಿದು, ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ, ಮುಂದಿನ ದಿನಗಳಲ್ಲಿ ಸಮಾಜದ ಒಳ್ಳೆ ವ್ಯಕ್ತಿಗಳಾಗಿ ಹೊರಹೋಮ್ಮಬೇಕು ಎಂದರು.

 ಪ್ರಾಂಶುಪಾಲ ತುಕಾರಾಮ್ ಯಾತಪ್ಪ ನವರ್ ಅಧ್ಯಕ್ಷತೆ ವಹಿಸಿ ಮಾತನಾಡಿ̧ ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ ಹಂತದ ಮಕ್ಕಳು ವಿವಿಧ ವ್ಯಸನಗಳ ದಾಸರಾಗುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಶಾಲಾ ಕಾಲೇಜುಗಲ್ಲಿ ಶಿಬಿರ ಮತ್ತು ಜಾಗೃತಿ ಜಾಥಾ ಹಮ್ಮಿಕೊಂಡು ವ್ಯಸನ ಮುಕ್ತ ಸಮಾಜ ಮಾಡಲು ಶ್ರಮಿಸುತ್ತಿರುವುದು ಸಂತಸದ ಸಂಗತಿಯಾಗಿದೆ.. ಯುವ ಜನತೆ ಕೆಟ್ಟ ಚಟಗಳ ವಿರುದ್ದ ಹೋರಾಡುವ ಗುಣ ಹೊಂದಿದ್ದಾಗ ಮಾತ್ರ ಸದೃಢ ಭಾರತದ ಕನಸನ್ನು ನನಸಾಗಲು ಸಾಧ್ಯವಾಗುತ್ತದೆ ಎಂದರು.

ಯೋಜನಾಧಿಕಾರಿ ರಾಘವೇಂದ್ರ ಗೌಡ ಮಾತನಾಡಿ, ಯುವ ಜನತೆಯಲ್ಲಿ ದುಶ್ಚಟಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಶಾಲಾ ಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಇದರ ಪ್ರಯೋಜನ ಪಡೆದು ಮಾದರಿ ಪ್ರಜೆಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಜನ ಜಾಗ್ರತಿ ಸದಸ್ಯೆ ಸಪ್ನಾ ಖಂಡೆ, ಆದೇಶ, ಪ್ರವೀಣ, ರಮೇಶ್ ಇದ್ದರು.