LOCAL EXPRESS : “ಯಾದಗಿರಿ| ಬಿಡಾಡಿ ದನಗಳು ಗೋಶಾಲೆಗೆ ರವಾನೆ : ಪೌರಾಯುಕ್ತ ಚವ್ಹಾಣ ನೇತೃತ್ವದಲ್ಲಿ ಕಾರ್ಯಚರಣೆ”

By admin

“ಯಾದಗಿರಿ| ಬಿಡಾಡಿ ದನಗಳು ಗೋಶಾಲೆಗೆ ರವಾನೆ : ಪೌರಾಯುಕ್ತ ಚವ್ಹಾಣ ನೇತೃತ್ವದಲ್ಲಿ ಕಾರ್ಯಚರಣೆ”

• ಸೆಕ್ಯೂಲರ್‌ ವಾಯ್ಸ್‌ ನ್ಯೂಸ್‌ : 

ಯಾದಗಿರಿ: ನಗರದ ವಿವಿಧ ರಸ್ತೆಗಳಲ್ಲಿ ನಿಂತು, ಕುಂತು ಮತ್ತು ರಾತ್ರಿ ಮಲಗಿ ಸಾರ್ವಜನಿಕರಿಗೆ ತೊಂದರೆ ಮಾಡುವ ಮೂಲಕ ಕಿರಿ,ಕಿರಿಯಾಗಿದ್ದ ಬೀಡಾಡಿ ದನಗಳನ್ನು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ನೇತೃತ್ವದಲ್ಲಿ ಹಿಡಿದು ದೂರದ ರಾಯಚೂರು ಹೊರವಲಯದ ಆಲೂರ ಸಮೀಪ ಜ್ಯೋರ್ತಿಲಿಂಗೇಶ್ವರ ಗೋಶಾಲೆ ಬಿಟ್ಟುಬರಲಾಗಿದೆ. ಅವುಗಳ ನಿಯಂತ್ರಣಕ್ಕೆ ಮಾಡಲಾಗಿದೆ ಎಂದರು.

ನಗರದ ಪ್ರಮುಖ ವೃತ್ತಗಳಾದ  ನೇತಾಜಿ ಸರ್ಕಲ್, ಶಾಸ್ತ್ರಿ ಚೌಕ್, ಗಂಜ್ ಸರ್ಕಲ್, ಮೈಲಾಪುರ ಅಗಸಿ, ಹಳೆ, ಹೊಸ ಬಸ್ ನಿಲ್ದಾಣಗಳು ಹಾಗೂ ಗಾಂಧಿ ಚೌಕ್ ಸೇರಿದಂತೆ ಹಲವಾರು ಕಡೆ ಗುಂಪು,ಗುಂಪಾಗಿ ಜಮಾಗೊಂಡು ಜನರ ಸಂಚಾರಕ್ಕೆ ತೊಂದರೆ ನೀಡುತ್ತಿದ್ದವು.

ಬಸ್ ನಿಲ್ದಾಣಗಳಲ್ಲಿ ರಾತ್ರಿ ಮಲಗಿ ಹೆಂಡಿ ಇಟ್ಟು, ಸ್ಥಳ ಹೊಲಸು ಮಾಡುತ್ತಿರುವುದರು ನಡೆದಿತ್ತು.  ಈ ಹಿನ್ನಲೆಯಲ್ಲಿ ಜನರಿಂದ ದೂರುಗಳ ಆಧಾರದ ಮೇಲೆ ನಗರಸಭೆ, ಪಶು ಇಲಾಖೆ, ಪೊಲೀಸ್ ಇಲಾಖೆಗಳ ಜಂಟಿ‌ ಕಾರ್ಯಾಚರಣೆ ನಡೆಸಿ ಒಟ್ಟು 22 ವಿವಿಧ ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ಬಿಟ್ಟು ಬರಲಾಗಿದೆ ಎಂದು ತಿಳಿಸಿದ್ದರು.

ಪಿಐ ಮಹ್ಮದ್ ಮುಸ್ತಾಕ್, ಪರಿಸರ ಇಂಜಿನಿಯರ್ ಪ್ರಶಾಂತ, ಆರೋಗ್ಯ ನಿರೀಕ್ಷಕರಾದ ಶಿವಪುತ್ರ, ಸಿದ್ದಾರ್ಥ, ಮಂಜುನಾಥ ಸೇರಿದಂತೆಯೇ ಇತರರಿದ್ದರು.