“ಸುರಪುರ| ಸೆ.17ರಂದು ವಿಶ್ವಕರ್ಮ ಜಯಂತಿ : ಪೂರ್ವಭಾವಿ ಸಭೆ”
Contents
“ಸುರಪುರ| ಸೆ.17ರಂದು ವಿಶ್ವಕರ್ಮ ಜಯಂತಿ : ಪೂರ್ವಭಾವಿ ಸಭೆ”• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ : ಸುರಪುರ : ಸೆ.17 ರಂದು ವಿಶ್ವಕರ್ಮ ಜಯಂತ್ಯುತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಎಚ್.ಎ.ಸರಕಾವಸ್ ಹೇಳಿದರು.ಇಲ್ಲಿಯ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ಜರುಗಿದ ವಿಶ್ವಕರ್ಮ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಎಲ್ಲ ಸರಕಾರಿ ಕಚೇರಿ, ಶಾಲಾ-ಕಾಲೇಜು, ಅರೆ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ವಿಶ್ವಕರ್ಮ ಜಯಂತಿ ಆಚರಿಸಬೇಕು ಎಂದು ತಿಳಿಸಿದರು.ನಗರದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಅಂದು ಬೆಳಗ್ಗೆ 8 ಗಂಟೆಗೆ ತಾಲ್ಲೂಕು ಆಡಳಿತದ ವತಿ ಯಿಂದ ಜಯಂತಿ ಆಚರಿಸಲಾಗುವುದು. ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಲಾಗುವುದು. ಎಲ್ಲ ಇಲಾಖೆಯ ಅನುಷ್ಟಾನಾಧಿಕಾರಿಗಳು ಜಯಂತಿಯಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಸೂಚಿಸಿದರು.ಅರ್ಚಕರಾದ ಮಹೇಶ, ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವಿಂದ್ರಪ್ಪ ವಿಶ್ವಕರ್ಮ, ಮುಖಂಡ ರಾದ ಮಹೇಶ ಶಾರದಳ್ಳಿ, ಪಂಪಣ್ಣ ಹಳಿಸಗರ, ಮಹೇಶ ಸಗರ, ನಾರಾಯಣ ಪತ್ತಾರ, ಅಯ್ಯಣ್ಣ ಪತ್ತಾರ, ಮಹೇಶ ಶಹಾಬಾದಿ, ಶ್ರೀಕಾಂತ ಚಿಕ್ಕನಳ್ಳಿ, ರವಿಕುಮಾರ ಪತ್ತಾರ, ಸಿದ್ದು ಪತ್ತಾರ, ಶಂಕರ ಪತ್ತಾರ, ಸುರೇಶ ಪತ್ತಾರ ಕುಳಗೇರಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

